ಬ್ರೇಕಿಂಗ್ ನ್ಯೂಸ್
27-02-24 11:04 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.27: ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆ ಬೆನ್ನಲ್ಲೇ ಕಾಂಗ್ರೆಸಿನ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಬಿಜೆಪಿ ನಾಯಕರಿಗೆ ಅಸ್ತ್ರವಾಗಿದೆ. ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ಬಗ್ಗೆ ಕಟು ಮಾತುಗಳಿಂದ ಕಿಡಿಕಾಡಿದ್ದಾರೆ.
ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು ಈ ಘಟನೆ ರಾಜ್ಯ ಕಾಂಗ್ರೆಸ್ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಟ್ಟೀಟ್ ಮಾಡಿರುವ ಅವರು, ಚುನಾವಣೆಯಲ್ಲಿ ಗೆದ್ದಿದ್ದರೆ ನಿಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕಿ, ನಿಮ್ಮ ಪಕ್ಷಕ್ಕೆ ಜೈಕಾರ ಹಾಕಿ, ನಿಮ್ಮ ನಾಯಕರಿಗೆ ಜೈಕಾರ ಹಾಕಿ, ಅದು ಬಿಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ನಿಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಾರಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಮೂರು ರಾಜ್ಯಸಭೆ ಸ್ಥಾನ ಗೆದ್ದ ಮಾತ್ರಕ್ಕೆ ಮತೊಮ್ಮೆ ದೇಶ ವಿಭಜನೆ ಮಾಡಬಹುದು ಎಂದು ಕೊಂಡಿದ್ದೀರಾ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯಸಭೆಯ ಸಂಸದರಾಗಿ ನೂತನವಾಗಿ ಆಯ್ಕೆಯಾದ ನಾಸೀರ್ ಹುಸೇನ್ ಅವರ ಬೆಂಬಲಿಗ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಇದೇ ವೇಳೆ ಪಕ್ಕದಲ್ಲಿದ್ದ ಕೆಲವರು ಆತನ ಬಾಯಿ ಮುಚ್ಚಿಸಿದ್ದಾರೆ. ಇದೀಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ.
'Pakistan Zindabad' Slogan By Congress Workers R Ashok slams congress. The ruling Congress party, however, rejected the charge. Its officials maintained that supporters were cheering for Syed Naseer Hussain, one of the three victorious Congress candidates in the southern state on Tuesday, and were shouting “Naseer saab zindabad". A senior police source, too, said the slogan prima facie sounded like “Naseer saab zindabad".
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 04:05 pm
Mangalore Correspondent
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm