ಬ್ರೇಕಿಂಗ್ ನ್ಯೂಸ್
05-03-24 08:12 pm HK News Desk ಕರ್ನಾಟಕ
ಚಿಕ್ಕೋಡಿ, ಮಾ 05: ರಾಜ್ಯದಲ್ಲಿ ಏನಾದರೂ ಉಚಿತವಾಗಿ ದೊರೆಯುತ್ತಿದೆ ಎಂದರೆ ಅದು ಭಯೋತ್ಪಾದನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾಧನೆ ಕೃತ್ಯಗಳು ಹೆಚ್ಚಾಗುತ್ತಿವೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದರೂ ಸಿಎಂ, ಡಿಸಿಎಂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಮೌನವಾಗಿದ್ದಾರೆ ಎಂದು ಕಿಡಿಕರಿದ್ರು
ಖರ್ಗೆ ಅವರೇ ನೀವು ಏತಕ್ಕೆ ಸುಮ್ಮನಿದ್ದೀರಿ ದೇಶ ಮತ್ತು ರಾಜ್ಯದ ಜನತೆಗೆ ಇದರ ಬಗ್ಗೆ ಉತ್ತರಿಸಿ. ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲುವಿನ ಸಂಭ್ರಮಾಚರಣೆ ವೇಳೆ ಅದು ಕೂಡ ವಿಧಾನಸೌಧದಲ್ಲಿ ಈ ರೀತಿಯ ಘೋಷಣೆ ಕೇಳಿ ಬಂದರು ಯಾಕೆ ಮೌನವಾಗಿದ್ದೀರಿ. ಪಾಕಿಸ್ತಾನವನ್ನು ಬೆಂಬಲಿಸಲು ಜನ್ಮತಾಳಿದ್ದೀರಾ? ನಿಮ್ಮನ್ನು ಭಾರತ ಮಾತೆ ಸೇರಿದಂತೆ ಕರ್ನಾಟಕದ ಜನರು ಕ್ಷಮಿಸಲ್ಲ ಎಂದು ಕಿಡಿಕಾರಿದರು.



ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯ ಶಾಂತಿಯುತವಾಗಿತ್ತು. ಇಂದು ಮತ್ತೆ ಸ್ಫೋಟಗಳು ಆರಂಭವಾಗಿವೆ. ರಾಹುಲ್ ಗಾಂಧಿ ಅವರು ತುಕ್ಡೆ ಗ್ಯಾಂಗ್‌ನೊಂದಿಗೆ ಹೋಗಿ ನಿಂತಿದ್ದಾರೆ. ಅವರು ಭಾರತ್ ಜೋಡೋ ಮಾಡಲು ಹೊರಟಿದ್ದೀರಾ ಅಥವಾ ವಿಭಜಿತ ಭಾರತ ಯಾತ್ರೆಗೆ ಹೊರಟಿದ್ದೀರಾ? ಕರ್ನಾಟಕದಲ್ಲಿ ಹಿಂದೂ ದೇವಾಲಯಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಕಾಂಗ್ರೆಸ್ ನಾಯಕರು ಹಿಂದೂ ದೇವಾಲಯದ ಹಣವನ್ನು ತೆಗೆದುಕೊಂಡು ಒಂದು ಸಮುದಾಯನ್ನು ಸಮಾಧಾನಪಡಿಸುವ ನೀತಿ ನಡೆಸುತ್ತಾರೆ. ಕರ್ನಾಟಕ ಸರ್ಕಾರ ಕಾಂಗ್ರೆಸ್‌ಗೆ ಎಟಿಎಂ ಆಗಿದೆ ಇಲ್ಲಿಂದ ಹಣ ಸಂಗ್ರಹಿಸಿ ಅದನ್ನು ದೆಹಲಿಯ ಜೋಳಿಗೆಗೆ ಹಾಕುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಕೂಡಿದ ತುಷ್ಟೀಕರಣದ ಸರಕಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.
2014ಕ್ಕೂ ಮುನ್ನ ಭಾರತ ಆತ್ಮವಿಶ್ವಾಸ ಕಳೆದುಕೊಂಡಿತ್ತು. ಇದೀಗ ಮೋದಿಯವರ ನಾಯಕತ್ವದಲ್ಲಿ ಮುನ್ನಡೆದ ಭಾರತ ಇಂದು ಆತ್ಮವಿಶ್ವಾಸ ತುಂಬಿದ ಭಾರತವಾಗಿದೆ. ದೇಶದಲ್ಲಿ ಬದಲಾವಣೆಯಾಗಿದೆ. ಭಾರತವು ಸ್ವಾವಲಂಬಿ ಭಾರತವಾಗುವ ಸ್ಪರ್ಧೆಯಲ್ಲಿದೆ ಮತ್ತು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ. UPIನಲ್ಲಿ ಪ್ರತಿದಿನ ಅಂದಾಜು 16,000 ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ, ಪ್ರತಿದಿನ ಜನ - ಔಷಧ ಕೇಂದ್ರಗಳು ಭಾರತದಲ್ಲಿ ತೆರೆದಿರುತ್ತವೆ. ನಿತ್ಯ 14 ಕಿಲೋಮೀಟರ್ ರೈಲ್ವೆ ಹಳಿಗಳು ನಿರ್ಮಾಣವಾಗುತ್ತಿವೆ. ನಿತ್ಯ 29 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಆಗುತ್ತದೆ.
ಪ್ರತಿದಿನ 75,000 ಜನರು ಬಡತನ ರೇಖೆಯಿಂದ ಹೊರಬರುತ್ತಿದ್ದಾರೆ ಮತ್ತು 25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಏರಿದ್ದಾರೆ ಇದು ಬದಲಾಗುತ್ತಿರುವ ಭಾರತ ಎಂದೂ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.
J P Nadda slams Congress government in Chikodi Belagavi, says is Cm, DCM or mallikarjun kharge born in Pakistan.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm