ಬ್ರೇಕಿಂಗ್ ನ್ಯೂಸ್
03-08-26 11:42 am HK News Staffer ಕರಾವಳಿ
ಮುಂಬೈ/ಮಂಗಳೂರು, ಆ.2 : ಖ್ಯಾತ ಕಾಮಿಡಿಯನ್ ಸಮಯ್ ರೈನಾ ನಡೆಸಿಕೊಡುವ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋ 'ಇಂಡಿಯಾಸ್ ಗಾಟ್ ಲೇಟೆಂಟ್’ನ ಸಂಚಿಕೆಯಲ್ಲಿ ಮಂಗಳೂರಿನ ಪ್ರತಿಭಾವಂತ ಸಂಗೀತಗಾರ ಸ್ವೀಟ್ ಹಿನ್ ಹಾರ್ಟ್ ಮ್ಯಾನ್, ಮೊದಲ ಸ್ಪರ್ಧಿಯಾಗಿ ವೇದಿಕೆ ಏರಿದ್ದು ಸ್ಯಾಕ್ಸೋಫೋನ್ ನುಡಿಸಿದ್ದಲ್ಲದೆ ಮಂಗಳೂರಿನ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕಾರ್ಯಕ್ರಮದಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಿದ ಸ್ವೀಟ್ ಹಿನ್ , ಮಾತುಕತೆಯ ವೇಳೆ “ಮಂಗಳೂರಿನ ಊಟವೇ ಬೆಸ್ಟ್” ಎಂದು ಹೆಮ್ಮೆಯಿಂದ ಹೇಳಿದ್ದು, ಸ್ಟುಡಿಯೋದಲ್ಲಿದ್ದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕ್ರಮದ ನಿರೂಪಕ ಸಮಯ್ ರೈನಾ, “ನಾನು ಕೂಡ ಒಮ್ಮೆ ಮಂಗಳೂರಿಗೆ ಬರಬೇಕು” ಎಂದು ಹೇಳಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಯಿತು.
ಮಂಗಳೂರಿನ ಯುವ ಪ್ರತಿಭೆ ಸ್ವೀಟ್ ಹಿನ್ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವರಾಗಿದ್ದು ಸಂಗೀತ ಕ್ಷೇತ್ರದಲ್ಲಿ ಒಂದೊಂದೇ ಹೆಜ್ಜೆ ಇರಿಸುತ್ತಾ ಹೆಸರು ಮಾಡಿದ್ದಾರೆ. ಈಗ ದೇಶ- ವಿದೇಶದಲ್ಲಿ ಖ್ಯಾತಿ ಹೊಂದಿರುವ ಜನಪ್ರಿಯ ಡಿಜಿಟಲ್ ವೇದಿಕೆಯಲ್ಲಿ ಕಾಣಿಸಿಕೊಂಡು ಮಂಗಳೂರಿನ ಹೆಸರನ್ನು ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಬರುವಂತೆ ಮಾಡಿದ್ದಾರೆ.



‘ಇಂಡಿಯಾಸ್ ಗಾಟ್ ಲೇಟೆಂಟ್’ ಎಂದರೇನು?
‘ಇಂಡಿಯಾಸ್ ಗಾಟ್ ಲೇಟೆಂಟ್’ ಎಂಬುದು ಕಾಮಿಡಿಯನ್ ಸಮಯ್ ರೈನಾ ನಡೆಸಿಕೊಡುವ ಜನಪ್ರಿಯ ಟ್ಯಾಲೆಂಟ್-ಕಾಮಿಡಿ ಶೋ ಆಗಿದ್ದು, ಸಂಗೀತ, ಕಾಮಿಡಿ, ನೃತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಕಾರ್ಯಕ್ರಮವು ತನ್ನ ವಿಶಿಷ್ಟ ಹಾಸ್ಯ ಶೈಲಿ ಹಾಗೂ ಸ್ಪರ್ಧಿಗಳೊಂದಿಗಿನ ಮುಕ್ತ ಸಂಭಾಷಣೆಯಿಂದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ.
'ಇಂಡಿಯಾಸ್ ಗಾಟ್ ಲೇಟೆಂಟ್’ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಟ್ಯಾಲೆಂಟ್ ಶೋಗಳಲ್ಲಿ ಒಂದಾಗಿದೆ. ಕಾರ್ಯಕ್ರಮವು ಏಕಕಾಲದಲ್ಲಿ ಯೂಟ್ಯೂಬ್ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ದೇಶ- ವಿದೇಶಗಳ ಕೋಟ್ಯಂತರ ಮಂದಿ ವೀಕ್ಷಕರಿದ್ದಾರೆ. ತನ್ನ ವಿಭಿನ್ನ ಶೈಲಿ, ಹಾಸ್ಯ ಮತ್ತು ಅನಿರೀಕ್ಷಿತ ಪ್ರತಿಭೆಗಳ ಅನಾವರಣದ ಮೂಲಕ ಈ ಕಾರ್ಯಕ್ರಮ ಅಪಾರ ಜನಪ್ರಿಯತೆ ಗಳಿಸಿದೆ.
ವಿವಾದಕ್ಕೂ ಕಾರಣವಾಗಿದ್ದ ಶೋ
ಇದೇ ಶೋ ಮೊದಲ ಸೀಸನ್‌ನಲ್ಲಿ ಪ್ಯಾನೆಲಿಸ್ಟ್‌ಗಳ ಕೆಲವು ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಪ್ರಕರಣಗಳಿಗೆ ಸಂಬಂಧಿಸಿದ ಕಾನೂನು ಬೆಳವಣಿಗೆಗಳ ಬಳಿಕ ಕಾರ್ಯಕ್ರಮದ ಕೆಲವು ಸಂಚಿಕೆಗಳನ್ನು ತೆಗೆದುಹಾಕಲಾಗಿತ್ತು. ನಂತರ ಅಗತ್ಯ ಬದಲಾವಣೆಗಳೊಂದಿಗೆ ಹೊಸ ಸೀಸನ್ ಆರಂಭಗೊಂಡಿದ್ದು, ಮತ್ತೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸ್ವೀಟ್ ಹಿನ್ ಭಾಗವಹಿಸಿರುವ ಈ ಸಂಚಿಕೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1.2 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ್ದು, ದೇಶ-ವಿದೇಶದ ವೀಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm