ಬ್ರೇಕಿಂಗ್ ನ್ಯೂಸ್
30-11-20 12:47 pm Headline Karnataka News Network ಕರ್ನಾಟಕ
ಕಾರವಾರ, ನ.30 : ಸದ್ಯಕ್ಕೆ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಯಡಿಯೂರಪ್ಪನವರನ್ನ ತೆಗೆದರೆ ಸರ್ಕಾರವೇ ಇರುವುದಿಲ್ಲ... ಹೀಗೆಂದು ಹೇಳಿದ್ದು ಜೆಡಿಎಸ್ ಹಿರಿಯ ಮುಖಂಡ, ಎಂಎಲ್ಸಿ ಬಸವರಾಜ ಹೊರಟ್ಟಿ.
ಕಾರವಾರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಪ್ರಶ್ನೆಯೊಂದಕ್ಕೆ ಹೀಗೆ ಉತ್ತರಿಸಿದರು.. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಂದ್ರೆ ಜೇನುಗೂಡಿಗೆ ಕೈಇಟ್ಟಂತೆ. ಅದನ್ನು ಮಾಡಲು ಹೋಗುತ್ತಾರೆಯೇ ? ಅಪಾಯ ಮೈಮೇಲೆಳೆದುಕೊಳ್ಳಲು ತಯಾರಿದ್ದಾರೆಯೇ ಎಂದು ಮರು ಪ್ರಶ್ನೆ ಹಾಕಿದರು.
ಸಿಎಂ ಬದಲಾವಣೆಗೆ ಸ್ವಾಮೀಜಿಗಳ ಒತ್ತಡ ಹಾಕಿದ್ದಾರಂತೆ ಎಂಬ ಪ್ರಶ್ನೆಗೆ, ಈ ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು ? ರಾಜಕೀಯ ಬೇಕೆಂದರೆ ನಮ್ಮಂತೆ ಸಕ್ರಿಯ ರಾಜಕಾರಣಕ್ಕೇ ಬರಲಿ. ಹಿಂದೆ ನಿಂತು ಗುಂಡು ತೂರುವುದು ಸರಿಯಲ್ಲ. ಸ್ವಾಮೀಜಿಗಳು ಮಾಡುತ್ತಿರುವುದು ಎಳ್ಳಷ್ಟೂ ಸರಿಯಿಲ್ಲ. ಇವರೇ ಜಾತಿ ರಾಜಕಾರಣ ಹಬ್ಬಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಲಿಂಗಾಯತ ಪರ ಹೋರಾಟ ಮಾಡಿ ಎಂದಿದ್ದರು. ಈಗ ಪಂಚಮಸಾಲಿ ಎನ್ನುತ್ತಿದ್ದಾರೆ, ಸ್ವಾಮೀಜಿಗಳು ಮಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿ. ಇನ್ನೂ ಕೆಲವು ದಿನ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ. ಯಡಿಯೂರಪ್ಪನವರನ್ನ ತೆಗೆದರೆ ಸರ್ಕಾರವೇ ಇರುವುದಿಲ್ಲ.
ಅವರನ್ನು ಬದಲಾಯಿಸುವುದು ಜೇನುಗೂಡಿಗೆ ಕೈಇಟ್ಟಂತೆ ಎಂದು ಹೇಳುವ ಮೂಲಕ ಹೊರಟ್ಟಿ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ, ಸಿಎಂ ಬದಲಿಸಬೇಕೆಂದು ವದಂತಿ ಹಬ್ಬಿಸುತ್ತಿರುವ ವಿಚಾರದಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ರು.
If we eliminate B.S Yediyurappa from the seat there won't be BJP government in Karnataka slammed MLC Basavaraj Horatti in Karwar
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm