ಬ್ರೇಕಿಂಗ್ ನ್ಯೂಸ್
10-04-24 11:28 am Bangalore Correspondent ಕರ್ನಾಟಕ
ಬೆಂಗಳೂರು, ಎ.10: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದಿದೆ. ದ್ವಿತೀಯ ಪಿಯುಸಿಯಲ್ಲಿ 81.15% ಫಲಿತಾಂಶ ಬಂದಿದೆ. ಪ್ರತೀ ವರ್ಷದಂತೆ ಬಾಲಕಿಯರೇ (84.87%) ಮೇಲುಗೈ ಸಾಧಿಸಿದ್ದಾರೆ. ಬಾಲಕರು 76.98% ಮಂದಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗ 89.96% , ವಾಣಿಜ್ಯ ವಿಭಾಗ 80.94%, ಕಲಾ ವಿಭಾಗದಲ್ಲಿ 68.36 % ಫಲಿತಾಂಶ ಬಂದಿದೆ. ದುರಾದೃಷ್ಟವೆಂದರೆ 35 ಕಾಲೇಜುಗಳಿಗೆ ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ.
ಕಳೆದ ಬಾರಿಯಂತೆ ಈ ಬಾರಿ ಕೂಡ ದಕ್ಷಿಣ ಕನ್ನಡ (97.37%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ (96.80%) ಎರಡನೇ ಸ್ಥಾನ ಪಡೆದಿದೆ. ವಿಜಯಪುರ (94.89%) ತೃತೀಯ ಸ್ಥಾನ ಪಡೆದಿದೆ. ಗದಗ (72.86%) ಕೊನೆಯ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (97.37), ಉಡುಪಿ (96.80), ವಿಜಯಪುರ (94.89), ಉತ್ತರ ಕನ್ನಡ (92.51), ಕೊಡಗು (92.13) ಬೆಂಗಳೂರು ದಕ್ಷಿಣ (89.57),ಬೆಂಗಳೂರು ಉತ್ತರ (88.67), ಶಿವಮೊಗ್ಗ (88.58), ಚಿಕ್ಕಮಗಳೂರು (88.20), ಬೆಂಗಳೂರು ಗ್ರಾಮಾಂತರ (87.55), ಬಾಗಲಕೋಟೆ (87.54), ಕೋಲಾರ (86.12), ಹಾಸನ (85.83), ಚಾಮರಾಜನಗರ (84.99), ಚಿಕ್ಕೋಡಿ (84.10), ರಾಮನಗರ (83.58) ಕ್ರಮವಾಗಿ ಸ್ಥಾನ ಪಡೆದಿದೆ.
ಕಲಾ ವಿಭಾಗದಲ್ಲಿ 596 ಅಂಕಗಳೊಂದಿಗೆ ಬೆಂಗಳೂರಿನ ಮೇಧಾ ಡಿ, ವಿಜಯಪುರದ ವೇದಾಂತ್, ಬಳ್ಳಾರಿಯ ಕವಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್
ಗಾನವಿ ಎಂ. ವಿದ್ಯಾನಿಧಿ ಪಿಯು ಕಾಲೇಜು ತುಮಕೂರು (597) ಪ್ರಥಮ ಸ್ಥಾನ, ಪವನ್ ಎಂ.ಎಸ್ ಕುಮಧ್ವತಿ ಪಿಯು ಕಾಲೇಜು ಶಿವಮೊಗ್ಗ(596) ದ್ವಿತೀಯ ಸ್ಥಾನ, ಹರ್ಷಿತಾ ಪೂರ್ಣ ಪ್ರಜ್ಞಾ ಪಿಯು ಕಾಲೇಜ್ ಉಡುಪಿ (596) ದ್ವಿತೀಯ ಸ್ಥಾನ, ತುಳಸಿ ಪೈ ಕೆನರಾ ಕಾಲೇಜು ಮಂಗಳೂರು (596) ದ್ವಿತೀಯ ಸ್ಥಾನ, ತೇಜಸ್ವಿನಿ ಕೆ. ಕಾಲೆ, MES ಮಲ್ಲೇಶ್ವರ (596 ) ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ ರಾಜ್ಯಕ್ಕೆ ಟಾಪರ್
ವಿದ್ಯಾಲಕ್ಷ್ಮಿ - ವಿದ್ಯಾನಿಕೇತನ ಎಸ್.ಸಿ ಪಿಯು ಕಾಲೇಜು -598 (ಪ್ರಥಮ ಸ್ಥಾನ), ಉರ್ವಶಿ ಪ್ರಶಾಂತ್ -ಆದಿಚುಂಚನಗಿರಿ ಪಿಯು ಕಾಲೇಜು ತುಮಕೂರು-597 (ದ್ವಿತೀಯ ಸ್ಥಾನ), ವೈಭವಿ ಆಚಾರ್ಯ - ವಿದ್ಯೋದಯ ಪಿಯು ಕಾಲೇಜು, ಉಡುಪಿ -597 (ದ್ವಿತೀಯ ಸ್ಥಾನ), ಜಾಹ್ನವಿ - ಆರ್.ವಿ.ಪಿಬಿ ಪಿಯು ಕಾಲೇಜು ಮೈಸೂರು -597 (ದ್ವಿತೀಯ ಸ್ಥಾನ), ಗುಣಸಾಗರ್ - ಎಕ್ಸಲೆಂಟ್ ಪಿಯು ಕಾಲೇಜು ಮೂಡುಬಿದಿರೆ - 597 (ದ್ವಿತೀಯ ಸ್ಥಾನ).
Puc results 2024, Dakshina Kannada Udupi in first place, Mangalore Udupi three students topper in commerce science. Dakshina Kannada emerged as the top performer with an impressive pass percentage of 97.37%. Following closely, Udupi district secured the second position with 96.80% of students passing the examinations. Vijayapura district secured the third position with a pass percentage of 94.89%.
26-02-25 10:43 pm
Bangalore Correspondent
Yellow alert, heatwave threat, Mangalore: ಬಿಸ...
26-02-25 06:14 pm
Minister Ishwara Khandre, Elephant Sanctuary...
25-02-25 10:30 pm
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
26-02-25 10:15 pm
Mangalore Correspondent
Mangaluru-Kabaka Train, Brijesh Chowta: ಮಂಗಳೂ...
26-02-25 03:40 pm
Urwa Police, Mangalore, Selfie, Suspend: ಸೈಬರ...
25-02-25 10:58 pm
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm