ಬ್ರೇಕಿಂಗ್ ನ್ಯೂಸ್
01-05-24 05:34 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 1: ಕೂಲ್ ನಗರ ಎಂದೇ ಹೆಗ್ಗಳಿಕೆ ಗಳಿಸಿದ್ದ ರಾಜಧಾನಿ ಬೆಂಗಳೂರು ಇದೀಗ ಕಾದ ಪಾತ್ರೆಯಂತಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಗಾಳಿಗೆ ಜನರು ತತ್ತರಿಸಿದ್ದು, ನಗರದ ಕೆಂಗೇರಿಯಲ್ಲಿ 41.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ಹೊಸ ದಾಖಲೆ ಬರೆದಿದೆ.
ಕೇಂದ್ರ ಹವಾಮಾನ ಇಲಾಖೆ ಬೀದರ್, ಕಲಬುರಗಿ, ವಿಜಯವಾಡ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮೇ 5ರ ವರೆಗೆ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಉಷ್ಣಾಂಶ 42.8 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ಬೆಂಗಳೂರಿನ ಕೆಂಗೇರಿಯಲ್ಲಿ ಅತೀ ಹೆಚ್ಚು 41.8 ಡಿಗ್ರಿ ಉಷ್ಣಾಂಶ ದಾಖಲಾಗಿದ್ದರೆ, ಬೀದರಹಳ್ಳಿಯಲ್ಲಿ 41.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನು ಕೆಲವು ದಿನಗಳ ಕಾಲ ಬೆಂಗಳೂರಿನಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರಿನಲ್ಲಿ ಸಾಧಾರಣವಾಗಿ ಕನಿಷ್ಠ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ. ಎಚ್ಎಎಲ್ ವಿಮಾನ ನಿಲ್ದಾಣದ ಬಳಿ 37.5 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 40.1 ಡಿಗ್ರಿ, ಲಾಲ್ ಬಾಗ್ ನಲ್ಲಿ 40.5 ಡಿಗ್ರಿ, ಯಲಹಂಕದಲ್ಲಿ 40.8, ತಾವರೆಕೆರೆಯಲ್ಲಿ 40.3 ಡಿಗ್ರಿ, ಉತ್ತರಹಳ್ಳಿಯಲ್ಲಿ 39.9 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
Bengaluru, the capital city, which was known as the cool city, is now like a waiting vessel. People are reeling from the rising heat day by day and the city's Kengeri recorded a new record temperature of 41.8 degrees Celsius.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm