ಬ್ರೇಕಿಂಗ್ ನ್ಯೂಸ್
18-05-24 10:01 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 18: ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಯಾವುದೇ ತಕರಾರಿಲ್ಲ. ಆದರೆ ರೇವಣ್ಣ ಬಗ್ಗೆ ಕ್ರಮ ಕೈಗೊಂಡಿರುವುದು ಸರಿಯಿಲ್ಲ. ಪ್ರಕರಣದ ನೆಪದಲ್ಲಿ ನಮ್ಮ ಕುಟುಂಬಕ್ಕೆ ಹಿನ್ನಡೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ತಮ್ಮ ಜನ್ಮದಿನದ ಪ್ರಯುಕ್ತ ಜೆಪಿ ನಗರದ ತಿರುಮಲಗಿರಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ರೇವಣ್ಣ ಕುರಿತ ಪ್ರಕರಣದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಚ್.ಡಿ ರೇವಣ್ಣ ಅವರ ವಿಚಾರ ಕೋರ್ಟ್‌ನಲ್ಲಿ ಇದೆ, ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಕುಮಾರಸ್ವಾಮಿ ಮಾತನಾಡುತ್ತಾರೆ. ಪ್ರಜ್ವಲ್ ರೇವಣ್ಣ ಮೇಲೆ ಕ್ರಮ ತೆಗೆದುಕೊಳ್ಳಲು ನಮ್ಮ ಯಾವುದೇ ತಕರಾರಿಲ್ಲ. ಆದರೆ, ಎಚ್‌ಡಿ ರೇವಣ್ಣ ಅವರ ಮೇಲೆ ಕ್ರಮ ಜರುಗಿಸಿರೋದು ಸರಿಯಿಲ್ಲ. ಎಚ್‌ಡಿ ರೇವಣ್ಣ ಅವರ ಮೇಲೆ ಯಾವ ರೀತಿ ಕೇಸ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಎಚ್‌ಡಿ ರೇವಣ್ಣ ಅವರಿಗೆ ಒಂದರಲ್ಲಿ ಬೇಲ್ ಸಿಕ್ಕಿದೆ, ಮತ್ತೊಂದರ ತೀರ್ಪು ಸೋಮವಾರ ಇದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಹೊರದೇಶಕ್ಕೆ ಹೋಗಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರು ನಮ್ಮ ಇಡೀ ಕುಟುಂಬದ ಪರವಾಗಿ ಕಾನೂನು ವ್ಯಾಪ್ತಿಯಲ್ಲಿ ಏನ್ ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಅನೇಕ ಜನರು ಇದ್ದಾರೆ, ಅವರ ಹೆಸರನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಹೋಗಲ್ಲ. ಎಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಸೇರಿ ಅನೇಕ ವಿಷಯಗಳನ್ನು ಕುಮಾರಸ್ವಾಮಿ ಅವರು ನನಗೆ ಬಿಡಿಸಿ ಹೇಳಿದ್ದಾರೆ ಎಂದರು.
ಎಚ್.ಡಿ ಕುಮಾರಸ್ವಾಮಿ ಅವರು ಈ ಪ್ರಕರಣದ ಹಿಂದೆ ಇರುವ ಯಾರನ್ನೂ ಬಿಡಲ್ಲ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಎಚ್‌ಡಿ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ದೇವರಾಜೇಗೌಡರ ಹೇಳಿಕೆಯನ್ನು ನಾವು ನೋಡಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ಯಾವುದೇ ವಿಷಯ ಬಂದರೂ ಕುಮಾರಸ್ವಾಮಿ ಎಲ್ಲ ವಿಷಯದ ಬಗ್ಗೆ ಮಾತಾಡ್ತಾರೆ ಎಂದರು.
92ನೇ ವರ್ಷಕ್ಕೆ ಕಾಲಿಟ್ಟ ಎಚ್‌ಡಿ ದೇವೇಗೌಡ
ತಮ್ಮ ಜನ್ಮದಿನದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ನಂಗೆ 91 ವರ್ಷ ಮುಗಿದು, 92 ವರ್ಷಕ್ಕೆ ಕಾಲಿಟ್ಟಿದ್ದೇನೆ. 16 ವರ್ಷದಿಂದ ಮಂಡಿ ನೋವು ಇದೆ, ಇನ್ನೊಂದು ಐದಾರು ವರ್ಷ ಇರ್ತಿನಿ, ಪ್ರತಿ ವರ್ಷ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ನನ್ನ ಅಭಿಮಾನಿಗಳಿಗೆ ಈ ವರ್ಷ ಜನ್ಮದಿನ ಆಚರಿಸಬೇಡಿ ಎಂದು ಹೇಳಿದ್ದೇನೆ. ಜೂನ್ 4ರ ಬಳಿಕ ನಿಮ್ಮೆಲ್ಲರನ್ನು ನಮ್ಮ ಪಕ್ಷದ ಕಚೇರಿಯಲ್ಲಿ ಭೇಟಿಯಾಗುತ್ತೇನೆ ಎಂದು ಹೇಳಿದರು.
Former Prime Minister and JD(S) supremo HD Deve Gowda said on Saturday that he would accept any action against his grandson Prajwal Revanna if found guilty in the sex scandal. This was his first remark on the sex tapes row since the matter came to light. Deve Gowda also mentioned the sexual harassment and kidnapping cases against his son and JD(S) MLA HD Revanna, terming them "created", news agency PTI reported.
27-02-25 01:46 pm
Giridhar Shetty
ಸಿಎಂಗೆ ಕ್ಲೀನ್ ಚಿಟ್ ಕೊಟ್ಟರೂ, ಮುಡಾ ಹಗರಣದ ಬಗ್ಗೆ...
26-02-25 10:43 pm
Yellow alert, heatwave threat, Mangalore: ಬಿಸ...
26-02-25 06:14 pm
Minister Ishwara Khandre, Elephant Sanctuary...
25-02-25 10:30 pm
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
26-02-25 05:38 pm
HK News Desk
Corruption, Amit Shah, MK Stalin: ಕ್ಷೇತ್ರ ಪುನ...
26-02-25 05:11 pm
CBI raid, Gain Bitcoin: 6,600 ಕೋಟಿ ರೂ. ಕ್ರಿಸ್...
26-02-25 12:47 pm
Vijay Wardhan, UPSC story: Success story 35 ಬ...
24-02-25 10:14 pm
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
27-02-25 03:11 pm
Mangalore Correspondent
Missing, Mangalore, Konaje police: ಕೋಣಾಜೆಯ ಯು...
26-02-25 10:15 pm
Mangaluru-Kabaka Train, Brijesh Chowta: ಮಂಗಳೂ...
26-02-25 03:40 pm
Urwa Police, Mangalore, Selfie, Suspend: ಸೈಬರ...
25-02-25 10:58 pm
C-Band Doppler Weather Radar, Mangalore: ಮಂಗಳ...
25-02-25 09:34 pm
26-02-25 10:48 pm
HK News Desk
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm
Urwa Police, Mangalore Crime, online Fraud: ಕ...
25-02-25 08:10 pm
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm