MLC polls, Ivan Dsouza, Mangalore: ಪರಿಷತ್ ಚುನಾವಣೆ ; ಡಾ.ಯತೀಂದ್ರ, ಐವಾನ್ ಡಿಸೋಜ, ಬೋಸರಾಜು ಸೇರಿ ಎಂಟು ಮಂದಿಗೆ ಕಾಂಗ್ರೆಸ್ ಟಿಕೆಟ್ ಪ್ರಕಟ, ಎರಡನೇ ಬಾರಿಗೆ ಲಕ್ ಹೊಡೆದ ಸಿಎಂ ಆಪ್ತ ಐವಾನ್

02-06-24 07:51 pm       Bangalore Correspondent   ಕರ್ನಾಟಕ

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ.

ಬೆಂಗಳೂರು, ಜೂನ್.2: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯಗೆ ಟಿಕೆಟ್ ನೀಡಲಾಗಿದೆ. 

Goonda' remark on Shah: Yathindra gets notice

CT Ravi: Maharashtra crisis: Will take a call at right time, says BJP's CT  Ravi - The Economic Times

ನಾಮಪತ್ರ ಸಲ್ಲಿಸಲು ಕೊನೆ ದಿನಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸಿ.ಟಿ ರವಿ, ಎನ್. ರವಿಕುಮಾರ್ ಮತ್ತು ಎಂ.ಜಿ ಮುಳೆ ಅವರಿಗೆ ಟಿಕೆಟ್ ನೀಡಿತ್ತು. 

ಕಲ್ಯಾಣ ಕರ್ನಾಟಕದ ಅನುದಾನ | ಶಿಕ್ಷಣಕ್ಕೆ ಶೇ 25ರಷ್ಟು ಮೀಸಲು: ಸಚಿವ ಬೋಸರಾಜು

ಬಿಜೆಪಿ ಬೆನ್ನಲ್ಲೇ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪಟ್ಟಿ ಮಾಡಿದ್ದು, ಎನ್.ಎಸ್. ಬೋಸರಾಜು, ವಸಂತ್ ಕುಮಾರ್, ಜಗದೇವ ಗುತ್ತೇದಾರ, ಡಾ.ಕೆ ಗೋವಿಂದರಾಜು, ಐವಾನ್ ಡಿಸೋಜ, ಶ್ರೀಮತಿ ಬಿಲ್ಕಿಸ್ ಬಾನೋ ಹಾಗೂ ಬಸನಗೌಡ ಬಾದರ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

Karnataka Budget 2023 Highlights: CM Siddaramaiah attacks national  education policy, says uniform system does not suit India | Zee Business

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್​ ನೀಡಲಾಗುತ್ತೆ ಎಂಬ ನಿರೀಕ್ಷೆಯಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಯತೀಂದ್ರ ಶಾಸಕರಾಗಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಅದೇ ಕ್ಷೇತ್ರವನ್ನು ತಂದೆ ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡಲಾಗಿತ್ತು. ಇದೀಗ ವಿಧಾನ ಪರಿಷತ್​ ಚುನಾವಣೆಗೆ ಪುತ್ರನಿಗೆ ಟಿಕೆಟ್​ ಕೊಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ. 

ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಎಂಟು, ಬಿಜೆಪಿ ಮೂರು ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್ ಕಡೆಯಿಂದ ಅಭ್ಯರ್ಥಿ ಹಾಕದೇ ಇದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ. ‌

A day before the last date for filing nominations for the June 13 elections to the Karnataka Legislative Council, both the Congress and the BJP announced their lists of candidates on Sunday. The seven candidates announced by Congress are Science and Technology Minister N S Boseraju, state party working president Vasanth Kumar, Chief Minister Siddaramaiah’s son and former MLA Dr Yathindra, Siddaramaiah’s political secretary Dr K Govindaraj, former MLC Ivan D’Souza, former Karnataka State Minorities Commission chairperson Balkees Banu and the party’s Kalaburagi district president, Jagdev Guttedar.