ಬ್ರೇಕಿಂಗ್ ನ್ಯೂಸ್
02-08-24 10:43 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 2: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡದೆ ಬೇರೆ ದಾರಿಯಿಲ್ಲ. ಕಾನೂನು ಪ್ರಕಾರ ಅನುಮತಿ ಕೊಡಲೇಬೇಕಾಗುತ್ತದೆ ಎಂದು ದೂರುದಾರ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಹೇಳಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೂರಿನಲ್ಲಿ ಏನೂ ಇಲ್ಲ ಎಂದಾದರೆ ಕರ್ನಾಟಕ ಸರ್ಕಾರ ಮೂರು ಗಂಟೆಗಳ ಕಾಲ ಸಚಿವ ಸಂಪುಟ ಸಭೆ ನಡೆಸಿದ್ದು ಯಾಕೆ? 10 ರಿಂದ 12 ಸಂಪುಟ ಸಚಿವರು ಸುದ್ದಿಗೋಷ್ಠಿ ನಡೆಸಿದ್ದು ಏಕೆ? ನನ್ನ ದೂರಿನಲ್ಲಿ ಯಾವುದೇ ವಿಷಯ ಇಲ್ಲದಿದ್ದರೆ, ಈ ರೀತಿಯ ಗೊಂದಲಕಾರಿ ನಡೆಯನ್ನು ಏಕೆ ನೋಡುತ್ತಿದ್ದೇವೆ? ಎಂದು ಪ್ರಶ್ನಿಸಿದರು.
ನೋಟಿಸ್ ಹಿಂಪಡೆಯಲು ಮತ್ತು ದೂರನ್ನು ತಿರಸ್ಕರಿಸುವಂತೆ ಸರ್ಕಾರ ರಾಜ್ಯಪಾಲರಿಗೆ ಸಲಹೆ ನೀಡಿದೆ. ಆದರೆ ಅವರ ಸಲಹೆಗೆ ರಾಜ್ಯಪಾಲರು ಬದ್ಧರಾಗುತ್ತಾರೆಯೇ? ಎಂದು ಪ್ರಶ್ನಿಸಿದ ಅಬ್ರಹಾಂ, ರಾಜ್ಯಪಾಲರು ಕಾಯ್ದೆಗೆ ಬದ್ಧರಾಗಿರುತ್ತಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದಾಗ ರಾಜ್ಯಪಾಲರು ಯಾರ ವಿರುದ್ಧ ಆರೋಪ ಮಾಡಲಾಗುತ್ತಿದೆಯೋ ಆ ವ್ಯಕ್ತಿಗೆ ನೋಟಿಸ್ ಮತ್ತು ಅವಕಾಶವನ್ನು ನೀಡಬೇಕು. ನಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಭ್ರಷ್ಟಾಚಾರ ತಡೆ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ ಎಂದು ಹೇಳಿದರು.
"ಇದು ಕಾನೂನು ರೀತ್ಯ ಸ್ಪಷ್ಟ ಪ್ರಕರಣವೆಂದು ರಾಜ್ಯಪಾಲರಿಗೆ ಮನವರಿಕೆಯಾಗಿರುವುದರಿಂದ ಅನುಮತಿ ನೀಡಲಿದ್ದಾರೆ. ಪ್ರಕರಣ ಸರಳವಾಗಿದೆ, ಕೃಷಿ ಭೂಮಿ ಇಲ್ಲದಿರುವಾಗ, ಕೃಷಿ ಭೂಮಿಯನ್ನು ಹೇಗೆ ಖರೀದಿಸಿದ್ದೀರಿ? ಅದು ಹೇಗೆ ನಿಮ್ಮ ಭೂಮಿಯಾಯಿತು? ಆ ಭೂಮಿ ಬೇರೊಬ್ಬರಿಗೆ ಸೇರಿರುವುದರಿಂದ ನೀವು ಅದರ ಮೇಲೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ. ಆ ಜಮೀನಿನಲ್ಲಿ ನಿವೇಶನಗಳು ಬೇರೆಯವರ ಹೆಸರಿನಲ್ಲಿವೆ ಎಂದು ಮುಖ್ಯಮಂತ್ರಿ ಹೆಸರು ಪ್ರಸ್ತಾಪಿಸದೇ ಅಬ್ರಹಾಂ ಟೀಕಾ ಪ್ರಹಾರ ನಡೆಸಿದರು.
ಶುಕ್ರವಾರ ಬೆಳಗ್ಗೆ ಮಾಧ್ಯಮ ಮಂದಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದಾಗ, ರಾಜ್ಯಪಾಲರ ನೋಟಿಸ್ ಬಗ್ಗೆ ಹೆದರಲ್ಲ. ಸಚಿವ ಸಂಪುಟ ಅವರಿಗೆ ಉತ್ತರ ಕೊಟ್ಟಿದೆ. ನನಗೇನೂ ಹೆದರುವ ಅವಶ್ಯಕತೆ ಇಲ್ಲ. ಅಶೋಕ್ ಹೆದರಿರಬಹುದು ಎಂದಿದ್ದಾರೆ.
TJ Abraham, the petitioner who sought permission for prosecution of Karnataka Chief Minister Siddaramaiah from the Governor of Karnataka, stated on Friday that Thaawar Chand Gehlot has no choice but to grant sanction.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm