ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ; ವಿಜಯಪುರದಲ್ಲಿ ಪ್ರಚೋದನಕಾರಿ ಆಡಿಯೋ, 15 ನಿಮಿಷ ಪೊಲೀಸರು ಸುಮ್ಮನಿದ್ರೆ...! ಎಫ್ಐಆರ್ ದಾಖಲು 

09-09-25 10:52 pm       Bangalore Correspondent   ಕರ್ನಾಟಕ

ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಘಟನೆ ನಡೆದಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯಲ್ಲಿ ಪ್ರಚೋದನಕಾರಿ ಆಡಿಯೋ ಒಂದು ವೈರಲ್ ಆಗಿದೆ. ರಾಜ್ಯದಲ್ಲಿ ಒಂದೇ ದಿನ ಎರಡು ದೇಶದ್ರೋಹದ ಘಟನೆಗಳಾಗಿದ್ದು ಎರಡೂ ಕಡೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. 

ಬೆಂಗಳೂರು, ಸೆ.9 : ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಘಟನೆ ನಡೆದಿದೆ. ಇದೇ ವೇಳೆ, ವಿಜಯಪುರ ಜಿಲ್ಲೆಯಲ್ಲಿ ಪ್ರಚೋದನಕಾರಿ ಆಡಿಯೋ ಒಂದು ವೈರಲ್ ಆಗಿದೆ. ರಾಜ್ಯದಲ್ಲಿ ಒಂದೇ ದಿನ ಎರಡು ದೇಶದ್ರೋಹದ ಘಟನೆಗಳಾಗಿದ್ದು ಎರಡೂ ಕಡೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. 

ಇದರ ಬೆನ್ನಲ್ಲೇ, ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಹಿಂದೂ ಪರ  ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ‘ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ಮಾಹಿತಿ ಬಂದಿದೆ. ಈದ್ ಮಿಲಾದ್​​​ ಮೆರವಣಿಗೆಯ ಬಗ್ಗೆ ವಿಡಿಯೋ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುತ್ತೇವೆ’ ಎಂದು ಶಿವಮೊಗ್ಗ ಎಸ್​​ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಗಾಂಧಿ ವೃತ್ತದಲ್ಲಿ ಈದ್ ಮೆರವಣಿಗೆ ಹೋಗುತ್ತಿದ್ದಾಗ ಗುಂಪೊಂದು ಈ ಘೋಷಣೆ ಕೂಗಿದ್ದು ಇದರ 12 ಸೆಕೆಂಡಿನ ವಿಡಿಯೋ ವೈರಲ್ ಆಗಿದೆ. 

ವಿಜಯಪುರದಲ್ಲಿ ಸೆ.5ರಂದು ಈದ್ ಮೆರವಣಿಗೆ ನಡೆಯುತ್ತಿದ್ದಾಗ ಪ್ರಚೋದನಕಾರಿ ಸಂದೇಶದ ಆಡಿಯೋ ಪ್ಲೇ ಮಾಡಲಾಗಿದೆ. ಈ ಬಗ್ಗೆ ಮೂವರು ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಡಿಯೋದಲ್ಲಿ 15 ನಿಮಿಷ ಪೊಲೀಸರು ಸುಮ್ಮನಿದ್ದರೆ ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ, ಎಲ್ಲರನ್ನೂ ನಿರ್ನಾಮ ಮಾಡುತ್ತೇವೆ, ಆಮೇಲೆ ಅವರು ಹಿಂದುಸ್ತಾನ್ ಮಾಡಲಿ ಎಂದು ಹೇಳುವ ಆಡಿಯೋ ಇದೆಯೆಂದು ಹೇಳಲಾಗುತ್ತಿದೆ. ಪೊಲೀಸರು ಡಿಜೆ ಮಾಲೀಕ, ಆಪರೇಟರ್ ಸೇರಿ ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ.

Karnataka’s Shivamogga and Vijayapura districts witnessed controversies during Eid Milad processions, with videos and audio clips sparking outrage and police action. In Shivamogga’s Bhadravathi, a 12-second video allegedly showing a group of youths shouting “Pakistan Zindabad” during a procession near Gandhi Circle on Tarikere Road went viral on social media.