ಬ್ರೇಕಿಂಗ್ ನ್ಯೂಸ್
11-08-24 10:53 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 11: ರಾಜ್ಯದಲ್ಲಿರುವ 46 ಸಾವಿರ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸರಿಸುಮಾರು 18 ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯೇ 30 ದಾಟಿಲ್ಲ. ಅದರಲ್ಲೂ ಮುಖ್ಯವಾಗಿ 4398 ಶಾಲೆಗಳಲ್ಲಂತೂ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಈ ಶಾಲೆಗಳಿಗೆ ಬೀಗ ಜಡಿಯುವ ಸಾಧ್ಯತೆ ತೋರಿಸಿದೆ.
ವಿಶೇಷವಾಗಿ ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದರೂ ಈ ಕೆಟಗರಿಯಲ್ಲಿ ಹೊರಗುಳಿದ ಶಾಲೆಗಳು ಇಲ್ಲ. ಈ ಹಿಂದೆ ಸರಕಾರ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದ ಶಾಲೆಗಳನ್ನು ಪಕ್ಕದಲ್ಲಿರುವ ಸರಕಾರಿ ಶಾಲೆಗಳ ಜತೆಗೆ ವಿಲೀನ ಮಾಡುವ ಕೆಲಸವನ್ನು ಮಾಡಿತ್ತು. ಆದರೆ ಈ ಬಾರಿ ದಾಖಲಾತಿಯ ಕುಸಿತ ಇಂತಹ ಮತ್ತೊಂದು ಹೆಜ್ಜೆಗೆ ಸರಕಾರ ಮುಂದಡಿ ಇಡಬಹುದು ಎನ್ನುವ ಆತಂಕ ಈ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳ ಜತೆಗೆ ಹೆತ್ತವರನ್ನು ಕಾಡಲು ಆರಂಭಿಸಿದೆ.
ನಿರಂತರ ಕುಸಿತದಿಂದ ಸರ್ಕಾರಿ ಶಾಲೆಗೆ ಅಪಾಯ
2022ರಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ ಬರೀ 1800 ಇತ್ತು. 2023ರಲ್ಲಿ ಅದು 3646ಕ್ಕೆ ಏರಿಕೆ ಕಂಡಿತ್ತು. 2024ರಲ್ಲಿ ಇದು 4398ಕ್ಕೆ ಲಗ್ಗೆ ಹಾಕಿದೆ. ಅಂದರೆ ಒಂದೇ ವರ್ಷದಲ್ಲಿ ದಾಖಲಾತಿ ಕುಸಿತ ಕಂಡಿರುವ ಶಾಲೆಗಳ ಸಂಖ್ಯೆ ಸರಿಸುಮಾರು 700ಕ್ಕೂ ಹೆಚ್ಚಾಗಿದೆ. ಅದೇ ರೀತಿ 11ರಿಂದ 20 ಮಕ್ಕಳಿರುವ ಶಾಲೆಗಳ ಸಂಖ್ಯೆ ಈ ಸಾಲಿನಲ್ಲಿ 7,810ಕ್ಕೆ ಏರಿಕೆಯಾದರೆ 21ರಿಂದ 30 ಮಕ್ಕಳಿರುವ ಶಾಲೆಗಳ ಸಂಖ್ಯೆ 5362ಕ್ಕೆ ಹೆಚ್ಚಾಗಿದೆ. ಈ ಎಲ್ಲ ಶಾಲೆಗಳು ಬರೀ ಪ್ರಾಥಮಿಕ ಮಾತ್ರ ಎನ್ನುವುದು ಮತ್ತೊಂದು ವಿಶೇಷ.
ಎಲ್ಲ ಕೊಟ್ಟರೂ ಸಿಗದ ಜನಕೃಪೆ !
ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರದಿಂದ ಉಚಿತ ಪ್ರವೇಶ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಸಾವಿರಾರು ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲಾಗಿತ್ತು. ಪ್ರತೀ ವರ್ಷ ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ಹತ್ತಾರು ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಮಾತ್ರ ಸುಧಾರಿಸುತ್ತಿಲ್ಲ.
ಕೋವಿಡ್ ಸಮಯದಲ್ಲಿ ಮಕ್ಕಳನ್ನು ಖಾಸಗಿಯಿಂದ ಸರಕಾರಿ ಶಾಲೆಗಳಿಗೆ ಸೇರಿಸಿದ ಕಾರಣಕ್ಕೆ 2020-21ನೇ ಸಾಲಿನಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಕೊಂಚ ಹೆಚ್ಚಳವಾಗಿತ್ತು. ಆ ಬಳಿಕವಂತೂ ಇದು ಕುಸಿತದ ಹಾದಿಯಲ್ಲೇ ಸಾಗುತ್ತಿದೆ. ಕುಸಿತವಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ವಿಲೀನ ಕೆಲಸಗಳು ಸಾಗುವ ಸಾಧ್ಯತೆಗಳು ದಟ್ಟವಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುವ ಮಾಹಿತಿ ಪ್ರಕಾರ ಹಾಸನ ಜಿಲ್ಲೆ ಇಂತಹ ವಿಚಾರದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ತಲುಪಿದೆ. ಸರಿಸುಮಾರು 490 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. 696 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮತ್ತು 347 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ದಾಖಲಾತಿಯಿದೆ. ನಂತರದ ಸ್ಥಾನದಲ್ಲಿ ತುಮಕೂರು ಇದ್ದು 1300 ಶಾಲೆಗಳಲ್ಲಿ ಕಡಿಮೆ ದಾಖಲಾತಿಯನ್ನು ಹೊಂದಿದೆ.
10ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳ ಮಾಹಿತಿ ನೋಡಿದರೆ, 2022ರ ಸಾಲಿನಲ್ಲಿ ಈ ಸಂಖ್ಯೆ 1800 ಇದ್ದರೆ, 2023ರಲ್ಲಿ 3646, 2024ರಲ್ಲಿ ಈ ಸಂಖ್ಯೆ 4398 ಆಗಿದೆ ಎಂದು ವಿಜಯ ಕರ್ನಾಟಕ ಅಂಕಿಅಂಶ ಸಹಿತ ವರದಿ ಮಾಡಿದೆ. ಪ್ರತಿ ವರ್ಷವೂ ದಾಖಲಾತಿ ಕುಸಿತ ಹೆಚ್ಚಳಕ್ಕೆ ಹೆತ್ತವರ ನಿರ್ಧಾರಗಳೇ ಕಾರಣವಾಗಿರುತ್ತದೆ. ಆರ್ಥಿಕ ಸುಸ್ಥಿತಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಒಳ್ಳೆದಿಲ್ಲ ಎಂಬ ಕಾರಣಕ್ಕೋ ಏನೋ ಹೆಚ್ಚಿನವರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಇಷ್ಟಪಡುತ್ತಾರೆ. ಜತೆಗೆ ಇಂಗ್ಲಿಷ್ ಮಾಧ್ಯಮದ ಪ್ರಭಾವ, ಖಾಸಗಿ ಶಾಲೆಗಳ ಆಕರ್ಷಣೆಯಿಂದ ಸರಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಬಡವಾಗುತ್ತಿದೆ ಎನ್ನುತ್ತಾರೆ, ಶಿಕ್ಷಣ ತಜ್ಞ ಡಾ. ಸಿ.ಕೆ.ಮಂಜುನಾಥ್.
Out of 46,000 government primary and high schools in the state, approximately 18,000 students have less than 30 students enrolled. More importantly, 4398 schools have less than 10 students.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm