ಬ್ರೇಕಿಂಗ್ ನ್ಯೂಸ್
15-08-24 04:01 pm HK News Desk ಕರ್ನಾಟಕ
ಹಾಸನ, ಆಗಸ್ಟ್.15: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಘಟನೆ ನಡೆದಿದೆ.
ಶ್ರೀನಿವಾಸ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದರೆ, ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಮಂಗಳವಾರ ಮೂವರು ಕೂಡ ಕಾಣೆಯಾಗಿದ್ದರು. ಹೀಗಾಗಿ ಕುಟುಂಬಸ್ಥರು ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ನಂತರ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬುಧವಾರ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್ ಮತ್ತು ಶ್ವೇತಾ ಶವ ಪತ್ತೆಯಾಗಿದೆ. ಹೇಮಾವತಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಾಲೆಯಿಂದ ಹೊರ ತೆಗೆದಿದ್ದಾರೆ. ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Three of family from Hassan commit suicide jumping to river due to financial issues. The deceased have been identified as Srinivas, Shwetha and Daughter Nagashree.
12-09-24 10:41 pm
Bangalore Correspondent
MLA Pradeep Eshwar VS Sudhakar: ಸುಧಾಕರ್ ಒಬ್ಬ...
12-09-24 09:44 pm
Pilikula kamabala, Bangalore: ಪಿಲಿಕುಳ ಕಂಬಳಕ್ಕ...
12-09-24 09:13 pm
Parashuram Park, Sunil Kumar, Arun Shyam, Hig...
12-09-24 02:34 pm
ಉದ್ಯಮಿಯ ಕಂಪನಿ ಮೇಲೆ ದಾಳಿ, ಕಿಡ್ನಾಪ್ ಮಾಡಿ ಹಲ್ಲೆ...
11-09-24 10:11 pm
13-09-24 12:33 pm
HK News Desk
ಅಬಕಾರಿ ನೀತಿ ಹಗರಣ ; 6 ತಿಂಗಳ ಬಳಿಕ ಸಿಎಂ ಕೇಜ್ರಿವಾ...
13-09-24 12:24 pm
Sitaram Yechury death; 40 ವರ್ಷಗಳಿಂದ ದೇಶದ ರಾಜಕ...
12-09-24 09:12 pm
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮನೆಯಲ್ಲಿ ಗಣೇಶ...
12-09-24 07:40 pm
ಅಮರಾವತಿಯಲ್ಲಿ ಡೆಡ್ಲಿ ರಸ್ತೆ ಗುಂಡಿ ; ಕಾಲುವೆಗೆ ಉರ...
11-09-24 04:13 pm
13-09-24 11:20 am
Mangalore Correspondent
Mangalore, St Antony bus, HK News: HK Impact:...
12-09-24 10:21 pm
VHP protest, Mangalore, Sharan Pumpwell: ಈದ್...
12-09-24 08:24 pm
Mangalore artist Zuber Khan kudla, MF Husain...
12-09-24 08:12 pm
House Collapsed, Bejai Mangalore: ಹಳೆ ಮನೆ ಕೆಡ...
12-09-24 04:57 pm
13-09-24 03:51 pm
HK News Desk
Mangalore, Vitla, Rape, Crime: ಅಪ್ರಾಪ್ತ ವಿದ್ಯ...
13-09-24 01:28 pm
Mangalore, City Bus, St Antony Travels: ಸಿಟಿ...
12-09-24 05:37 pm
Mandya Stone Pelting, Ganpati; ನಾಗಮಂಗಲದಲ್ಲಿ ಗ...
12-09-24 01:37 pm
Bangalore crime, Suicide: ಅಶ್ಲೀಲ ವಿಡಿಯೋ ತೋರಿಸ...
07-09-24 05:45 pm