ಬ್ರೇಕಿಂಗ್ ನ್ಯೂಸ್
11-12-20 02:37 pm Headline Karnataka News Network ಕರ್ನಾಟಕ
ಮಂಗಳೂರು, ಡಿ.11: ಬಹು ನಿರೀಕ್ಷಿತ ಮಂಗಳೂರು - ಮೈಸೂರು ವಿಮಾನ ಯಾನ ಸೇವೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಇಂದು ಬೆಳಗ್ಗೆ 11.30ಕ್ಕೆ ಮೈಸೂರಿನಲ್ಲಿ ಹೊರಟ ಅಲಯನ್ಸ್ ಏರ್ ವಿಮಾನ 12.30ಕ್ಕೆ ಮಂಗಳೂರಿಗೆ ತಲುಪಿದೆ. ಮೊದಲ ಪ್ರಯಾಣದಲ್ಲಿ 25 ಮಂದಿ ಮೈಸೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರು ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನಿಲ್ದಾಣ ಪ್ರಾಧಿಕಾರದ ವತಿಯಿಂದ ಸ್ವಾಗತಿಸಲಾಯ್ತು. ವಿಮಾನಕ್ಕೆ ನೀರು ಚಿಮುಕಿಸಿ ಸ್ವಾಗತ ನೀಡಲಾಯ್ತು. ವಿಮಾನ ನಿಲ್ದಾಣದ ನಿರ್ದೇಶಕ ವಿವಿ ರಾವ್ ಸೇರಿದಂತೆ ಅದಾನಿ ಕಂಪನಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಉಭಯ ನಗರಗಳ ನಡುವೆ ಇದೇ ಮೊದಲ ಬಾರಿಗೆ ವಿಮಾನ ಸಂಚಾರ ಆರಂಭಗೊಂಡಿದೆ. ಅಲಯನ್ಸ್ ವಿಮಾನವೇ ಮಂಗಳೂರಿಗೆ ಬಂದು ಮರಳಿ 12.55ಕ್ಕೆ ಮೈಸೂರಿಗೆ ತೆರಳುತ್ತದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಈ ವಿಮಾನ ಸಂಚಾರ ನಡೆಸಲಿದೆ. ಪ್ರತಿ ದಿನವೂ ವಿಮಾನ ಸಂಚಾರದ ಸಮಯ ಇದೇ ಆಗಿರುತ್ತದೆ. ಮಂಗಳೂರಿನಿಂದ ಮೈಸೂರಿಗೆ ನಿರ್ಗಮಿಸಿದ ವಿಮಾನದಲ್ಲಿ 31 ಮಂದಿ ಪ್ರಯಾಣಿಕರು ಇದ್ದರು. ದಿನವಹಿ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಸಂಚಾರ ಹೆಚ್ಚಿಸುವ ಇರಾದೆ ಅಧಿಕಾರಗಳದ್ದಿದೆ.
ಮೈಸೂರು ಸಾಂಸ್ಕೃತಿಕ ನಗರಿಯಾಗಿದ್ದು, ವೀಕೆಂಡ್ ಗಳಲ್ಲಿ ಮಂಗಳೂರಿನ ಜನ ಅತ್ತ ಪ್ರಯಾಣಿಸುತ್ತಾರೆ. ಅಲ್ಲದೆ, ಮಂಗಳೂರಿಗೆ ಆಗಮಿಸುವ ಪ್ರವಾಸಿಗರು ಮೈಸೂರಿನಿಂದ ತುರ್ತಾಗಿ ಬರಲು ಈ ವಿಮಾನಗಳನ್ನು ಅನುಸರಿಸಲಿದ್ದಾರೆ. ಮೈಸೂರಿನಲ್ಲಿ ಮೊದಲ ವಿಮಾನಕ್ಕೆ ಅಲ್ಲಿನ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು. ಮಂಗಳೂರು- ಮೈಸೂರು ವಿಮಾನ ಸಂಚಾರಕ್ಕಾಗಿ ಹೆಚ್ಚು ಒತ್ತಡ ಹೇರಿ ಕೆಲಸ ಮಾಡಿದವರು ಪ್ರತಾಪಸಿಂಹ. ಪ್ರತಾಪಸಿಂಹ ಒತ್ತಾಸೆಯಿಂದಾಗಿ ಖಾಸಗಿ ವಿಮಾನ ಕಂಪನಿ ಈಗ ಉಭಯ ನಗರಗಳ ನಡುವೆ ಸಂಚಾರ ಆರಂಭಿಸಿದೆ.
The most awaited flight services Mysore to Mangalore has now begun.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm