ಬ್ರೇಕಿಂಗ್ ನ್ಯೂಸ್
14-12-20 12:40 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.14: ಸಾರಿಗೆ ನೌಕರರ ಮುಷ್ಕರವನ್ನು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೈಜಾಕ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು ಸಾರ್ವಜನಿಕರ ಆಕ್ರೋಶ ಈಗ ಕೋಡಿಹಳ್ಳಿ ವಿರುದ್ಧ ತಿರುಗಿಬಿದ್ದಿದೆ. ತಮ್ಮ ಮೊಡುತನ, ಪ್ರತಿಷ್ಠೆಗೆ ಕಾರ್ಮಿಕರನ್ನು ಬಲಿಯಾಗಿಸಿದ್ದಾರೆ ಎಂದು ಕಾರ್ಮಿಕ ಸಂಘಗಳ ಮುಖಂಡರು ಕೋಡಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಸಂಘಟನೆಗಳ ಪೈಕಿ ಪ್ರಮುಖವಾಗಿರುವ ಎಐಟಿಯುಸಿ ನಾಯಕ ಅನಂತ ಸುಬ್ಬರಾವ್, ಕೋಡಿಹಳ್ಳಿ ವಿರುದ್ಧ ಹರಿಹಾಯ್ದಿದ್ದಾರೆ.
ಕೋಡಿಹಳ್ಳಿಯವರೇ ಡೀಲ್ ಮಾಡುವುದು ಬಿಟ್ಟು ಲೀಡರ್ ಆಗಿ ಕೆಲಸ ಮಾಡಿ. ನೀವು ಹೀಗೆ ವರ್ತಿಸುವುದನ್ನು ನೋಡಿದರೆ ಇದರ ಹಿಂದೆ ಏನೋ ಅಜೆಂಡಾ ಇಟ್ಟುಕೊಂಡಿರುವ ಸಂಶಯ ಕಾಣುತ್ತಿದೆ. ಅವರ ಒಣಪ್ರತಿಷ್ಠೆಗೆ ಸಾರಿಗೆ ನೌಕರರು ಬಲಿಯಾಗಬೇಕಾಗಿದೆ. ಕೋಡಿಹಳ್ಳಿ ಅವರದ್ದೇನು ಮೊನೋಪಾಲಿನಾ ಎಂದು ಸುಬ್ಬರಾವ್ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರತಿಭಟನೆ ಮಾಡಲು ಹೊರಟ ಕಾರ್ಮಿಕರನ್ನು ದಾರಿ ತಪ್ಪಿಸಿ ಅವರಿಂದ ದಿಢೀರ್ ಮುಷ್ಕರ ಮಾಡಿಸಿದ್ದಾರೆ. ಸಂಘಟನೆ ಕಟ್ಟಿ ಬೆಳೆಸೋದು ಸಾಮಾನ್ಯ ಸಂಗತಿಯಲ್ಲ. ಈ ಕೋಡಿಹಳ್ಳಿ ಎಂದಾದರೂ ಕಾರ್ಮಿಕ ಸಂಘಟನೆ ಕಟ್ಟಿದ್ದಾರೆಯೇ, ಕಾರ್ಮಿಕ ಕಾನೂನುಗಳ ಅರಿವು ಹೊಂದಿದ್ದಾರೆಯೇ.. ಕೋಡಿಹಳ್ಳಿಯವರ ಹಿನ್ನೆಲೆ ನೋಡಿದರೆ ಅವರು ಖಾಸಗಿಯವರ ಪರ ಇದ್ದವರೇ ಹೊರತು ಸಾರ್ವಜನಿಕ ಸಂಸ್ಥೆಗಳ ಪರ ಇದ್ದವರಲ್ಲ. ಇವರು ಖಾಸಗಿ ಲಾಬಿಯ ಪರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಇದರ ಹಿಂದೇನೂ ಏನೋ ಡೀಲ್ ಮಾಡುತ್ತಿರುವ ಬಗ್ಗೆ ಸಂಶಯ ಬರುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆಯೇ ಮಾತುಕತೆ ನಡೆಸಿದ ಬಳಿಕ ನಮ್ಮ ಸಂಘಟನೆಯ ಸದಸ್ಯರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದೇವೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಇಂದು ಕೂಡ ಮುಷ್ಕರ ಮುಂದವರಿಸಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅನಂತ ಸುಬ್ಬರಾವ್ ಕಾರ್ಮಿಕರನ್ನು ಎಚ್ಚರಿಸಿದ್ದಾರೆ.
16-01-26 04:35 pm
HK News Desk
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 07:33 pm
Mangalore Correspondent
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm