Bangalore Atul Subhash suicde story: ಮ್ಯಾಟ್ರಿಮನಿ ಮದುವೆ- ಪತಿಗೆ ಅಲೆದಾಟದ ಶಿಕ್ಷೆ ; ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಟೆಕ್ಕಿ ಅತುಲ್ ಆತ್ಮಹತ್ಯೆ, ವರದಕ್ಷಿಣೆ ಕಿರುಕುಳಕ್ಕೆ ತಂದೆಯ ಸಾವೆಂದು ದೂರು ನೀಡಿದ್ದ ಪತ್ನಿ, ವಿಚ್ಚೇದನಕ್ಕೆ 3 ಕೋಟಿ ಕೇಳಿ ಪತಿ ವಿರುದ್ಧ 9 ಕೇಸು ! 

12-12-24 04:33 pm       Bangalore Correspondent   ಕರ್ನಾಟಕ

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ವಿವಾಹಿತ ಮಹಿಳೆಯರು ಸೆಕ್ಷನ್ 498ಎ ಸೆಕ್ಷನ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದ್ದು ಜಾಲತಾಣದಲ್ಲಿ ತೀವ್ರ ಚರ್ಚೆಗೀಡಾಗಿದೆ.

ಬೆಂಗಳೂರು, ಡಿ.12: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ವಿವಾಹಿತ ಮಹಿಳೆಯರು ಸೆಕ್ಷನ್ 498ಎ ಸೆಕ್ಷನ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದ್ದು ಜಾಲತಾಣದಲ್ಲಿ ತೀವ್ರ ಚರ್ಚೆಗೀಡಾಗಿದೆ. ಇದೇ ವೇಳೆ, ಮಾರತಹಳ್ಳಿ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದು ಪ್ರಕರಣ ಸಂಬಂಧಿಸಿ ಅತುಲ್ ಪತ್ನಿ ಮತ್ತು ಸಂಬಂಧಿಕರನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. 

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ 24 ಪುಟಗಳ ಡೆತ್​ನೋಟ್ ಬರೆದಿಟ್ಟು ಮಂಜುನಾಥ್ ಲೇಔಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತುಲ್ ವಿರುದ್ಧ ಪತ್ನಿ ನಿಕಿತಾ ವರದಕ್ಷಿಣೆ ಕಿರುಕುಳ ಸೇರಿ 9 ಪ್ರಕರಣಗಳನ್ನು ದಾಖಲಿಸಿದ್ದಳು. ಪತಿಯ ಕಡೆಯವರು ತನಗೆ 10 ಲಕ್ಷ ರೂ. ವರದಕ್ಷಿಣೆ ಕೇಳಿದ್ದರಿಂದಲೇ ತನ್ನ ತಂದೆ ಆಘಾತದಿಂದ ಸಾವನ್ನಪ್ಪಿದ್ದರು ಎಂದು ಆಕೆ ಆರೋಪಿಸಿ ದೂರು ನೀಡಿದ್ದಳು. ಹಾಗಾಗಿ, ವರದಕ್ಷಿಣೆ ಪ್ರಕರಣ ನ್ಯಾಯಾಲಯದಲ್ಲಿ ಬಿಗಿ ಕುಣಿಕೆಯಾಗಿ ನಿಂತಿತ್ತು‌. 9 ಪ್ರಕರಣಗಳಲ್ಲಿ 6 ಪ್ರಕರಣ ಕೆಳ ನ್ಯಾಯಾಲಯದಲ್ಲಿದ್ದರೆ, 3 ಕೇಸು ಹೈಕೋರ್ಟ್​​ನಲ್ಲಿತ್ತು. 

Who Is Nikita Singhania? Know All About Atul Subhash's Wife & Accenture  Employee In Eye Of Storm

ನಿಕಿತಾ ಸಿಂಘಾನಿಯಾ ಅವರು 2022ರಲ್ಲಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಗ, ತನ್ನ ತಂದೆಯ ಸಾವಿನ ಬಗ್ಗೆಯೂ ಪ್ರಸ್ತಾಪಿಸಿದ್ದರು. ತನ್ನ ಮೇಲಿನ ಕಿರುಕುಳ ಮತ್ತು ವರದಕ್ಷಿಣೆ ಬೇಡಿಕೆಗಳಿಂದಾಗಿ ತನ್ನ ತಂದೆ ಆಗಸ್ಟ್ 17, 2019 ರಂದು ಪಾರ್ಶ್ವವಾಯುಗೆ ಒಳಗಾಗಿದ್ದರು. ಹತ್ತು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಿಂದಲೇ ಸಾವನ್ನಪ್ಪಿದ್ದರು ಎಂದು ಸಿಂಘಾನಿಯಾ ದೂರಿನಲ್ಲಿ ಆರೋಪಿಸಿದ್ದರು. 

The last rites of AI engineer My child was tortured...mother of Atul - Hind  First

ಈ ಬಗ್ಗೆ ಡೆತ್ ​ನೋಟ್​ನಲ್ಲಿ ಅತುಲ್ ಪ್ರಸ್ತಾಪಿಸಿದ್ದು, ಆಕೆಯ ತಂದೆ ಸುಮಾರು 10 ವರ್ಷಗಳಿಂದ ಮಧುಮೇಹ ಮತ್ತು ಹೃದ್ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನು ಮುಚ್ಚಿಟ್ಟು ತನ್ನ ಮೇಲೆ ಆರೋಪ ಹೊರಿಸಿದ್ದಾಳೆ ಎಂದು ತಿಳಿಸಿದ್ದರು. ಇದೇ ವೇಳೆ, ಅತುಲ್ ಕುಟುಂಬಸ್ಥರು ಬೆಂಗಳೂರಿನಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದ ಬಳಿಕ ಬಿಹಾರದ ಸಮಷ್ಟಿಪುರಕ್ಕೆ ಮರಳಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರ್ ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ ಅವರ ಆರೋಪಗಳಿಗೆ ತಂದೆ ಪವನ್ ಮೋದಿ ಸ್ಪಷ್ಟನೆ ನೀಡಿದ್ದು ನನ್ನ ಮಗ ಎಂದೂ ಮದ್ಯ ಸೇವಿಸಿ ಹೊಡೆಯುವ ಕೃತ್ಯವನ್ನು ಮಾಡಿಲ್ಲ. ಅಷ್ಟೇ ಅಲ್ಲ, ನಾವು ಅವರ ಬಳಿ 10 ಲಕ್ಷ ರೂ. ವರದಕ್ಷಿಣೆಯನ್ನೂ ಕೇಳಿಲ್ಲ. ಇವೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. 

ಉತ್ತರ ಪ್ರದೇಶಕ್ಕೆ ಬೆಂಗಳೂರು ಪೊಲೀಸರು 

ಈಗಾಗಲೇ ಪ್ರಾಥಮಿಕ ಹಂತದಲ್ಲಿ ಲಭ್ಯವಾದ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಮೃತನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರನ್ನು ವಿಚಾರಣೆ ನಡೆಸಲು ಬುಧವಾರ ಬೆಳಗ್ಗೆ ಉತ್ತರಪ್ರದೇಶಕ್ಕೆ ರಾಜ್ಯದ ಪೊಲೀಸರು ತೆರಳಿದ್ದಾರೆ. ಜೋನ್‌ಪುರ ನಗರದಲ್ಲಿ ಮೃತನ ಪತ್ನಿ ಪೋಷಕರು ನೆಲೆಸಿದ್ದು, ಕಳೆದ 2 ವರ್ಷಗಳಿಂದ ತವರು ಮನೆಯಲ್ಲಿ ಅತುಲ್ ಪತ್ನಿ ವಾಸವಾಗಿರುವುದು ಗೊತ್ತಾಗಿದೆ. ಮೊದಲು ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತದೆ. ತನಿಖೆಗೆ ಅವರು ಅಸಹಕಾರ ತೋರಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮ್ಯಾಟ್ರಿಮನಿ ಮದುವೆ- ಪತಿಗೆ ಅಲೆದಾಟದ ಶಿಕ್ಷೆ 

2019ರಲ್ಲಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಪರಿಚಯವಾಗಿದ್ದ ಬಿಹಾರ ಮೂಲದ ಅತುಲ್ ಹಾಗೂ ಉತ್ತರಪ್ರದೇಶದ ನಿಖಿತಾ ವಿವಾಹವಾಗಿದ್ದರು. ಬೆಂಗಳೂರಿನಲ್ಲೇ ಸಾಫ್ಟ್‌ವೇರ್ ಕಂಪನಿಯಲ್ಲಿ ಆಕೆಯೂ ಉದ್ಯೋಗದಲ್ಲಿದ್ದಳು. ಆದರೆ ಮದುವೆಯಾಗಿ ಒಂದು ವರ್ಷ ತುಂಬುತ್ತಲೇ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇದರಿಂದಾಗಿ ಇಬ್ಬರೂ ಬೇರೆಯಾಗಿದ್ದರು. ಅತುಲ್ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದರೆ, ನಿಕಿತಾ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಸೇರಿ ಬೇರೆ ಬೇರೆ ರೀತಿಯ 9 ಪ್ರಕರಣಗಳನ್ನು ದಾಖಲಿಸಿದ್ದಳು. ಇದರಿಂದಾಗಿ ಕಳೆದ ಐದಾರು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ಉತ್ತರ ಪ್ರದೇಶದ ಕೋರ್ಟ್ ಗಳಲ್ಲಿ ಅಲೆದಾಡುವ ಸ್ಥಿತಿಯಾಗಿತ್ತು ಎಂದು ಅತುಲ್ ಸೋದರ ಬಿಕಾಸ್ ಕುಮಾರ್ ತಿಳಿಸಿದ್ದಾರೆ.

The brother of Bengaluru techie Atul Subhash, who died by suicide, has filed a police complaint against his sister-in-law and her family, saying they insisted on paying Rs 3 crore for a settlement. Subhash, who worked at a private company in Bengaluru, penned a 24-page death note alleging prolonged emotional suffering stemming from marital disputes.