ಬ್ರೇಕಿಂಗ್ ನ್ಯೂಸ್
04-01-25 06:49 pm Bangalore Correspondent ಕರ್ನಾಟಕ
ಬೆಂಗಳೂರು, ಜ.4: ರಾಜ್ಯದಲ್ಲಿ ಕೆಎಸ್ಸಾರ್ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ಬಸ್ಸುಗಳ ದರವನ್ನು 15 ಶೇಕಡಾ ಏರಿಸಲು ಸರ್ಕಾರ ನಿರ್ಧಾರ ಕೈಗೊಂಡಿದ್ದರೂ, ಖಾಸಗಿ ಬಸ್ಸು ಮಾಲಕರು ದರ ಏರಿಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಫ್ರೀ ನೀಡುವ ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್ಸುಗಳಿಗೆ ಪೆಟ್ಟು ಬಿದ್ದಿದೆ.
ಮತ್ತೆ ಖಾಸಗಿ ಬಸ್ ದರ ಏರಿಕೆ ಮಾಡಿದರೆ ಅದರಿಂದ ಪೆಟ್ಟು ಬೀಳಬಹುದೆಂಬ ಲೆಕ್ಕಾಚಾರ ಬಸ್ ಮಾಲಕರಲ್ಲಿದೆ. ಹೀಗಾಗಿ ಕೆಎಸ್ಸಾರ್ಟಿಸಿ ಬಸ್ ದರ ಏರಿಕೆಯಾದರೂ, ಖಾಸಗಿ ಬಸ್ ದರ ಏರಿಸದಿರಲು ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ಕಡಿಮೆ ದರ ಇದ್ದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಸ್.ನಟರಾಜ್ ಶರ್ಮಾ ಪ್ರತಿಕ್ರಿಯಿಸಿದ್ದು, ನಾವು ಬಸ್ ಮಾಲಕರಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ಹೊತ್ತಿನಲ್ಲಿ ದರ ಏರಿಸಿದರೆ ಅದರಿಂದ ಮತ್ತೆ ಕೇಡು ಆಗಬಹುದು. ಹಾಗಾಗಿ ತಕ್ಷಣಕ್ಕೆ ಟಿಕೆಟ್ ದರ ಏರಿಸುವುದು ಬೇಡ ಎನ್ನುತ್ತಿದ್ದಾರೆ. ಈಗಾಗಲೇ ಶಕ್ತಿ ಯೋಜನೆಯಿಂದ ಖಾಸಗಿ ಬಸ್ಸುಗಳಿಗೆ ಪೆಟ್ಟು ಬಿದ್ದಿದೆ. ಸರ್ಕಾರಿ ಬಸ್ಸುಗಳಲ್ಲಿ ಈಗ ದರ ಏರಿಕೆ ಮಾಡಿರುವುದು ಕೆಎಸ್ಸಾರ್ಟಿಸಿಗೆ ಹಿನ್ನಡೆಯಾಗಲಿದ್ದು, ಅಲ್ಲಿನ ಪ್ರಯಾಣಿಕರು 10 ಶೇಕಡವಾದರೂ ಖಾಸಗಿಯತ್ತ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚು ಖಾಸಗಿ ಬಸ್ಸುಗಳಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬಸ್ ಮಾಲಕರು ದರ ಏರಿಸದಿರಲು ನಿರ್ಧರಿಸಿದ್ದಾರೆ. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ, ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದಾಗಿ ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಜೊತೆಗೆ ವಾಹನಗಳ ಬಿಡಿಭಾಗ, ಡೀಸೆಲ್ ಬೆಲೆಯೇರಿಕೆಯಿಂದಾಗಿ ದರ ಹೆಚ್ಚಳ ಅಗತ್ಯವಿದೆ. ಆದರೆ ಸದ್ಯಕ್ಕೆ ಟಿಕೆಟ್ ದರ ಏರಿಸುವ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಸಭೆ ಕರೆದು ನಿರ್ಧರಿಸುತ್ತೇವೆ ಎಂದಿದ್ದಾರೆ.
ಖಾಸಗಿ ಬಸ್ ದರ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನೇರವಾಗಿ ಖಾಸಗಿ ಬಸ್ಸುಗಳು ದರ ಏರಿಸುವಂತಿಲ್ಲ. ಅವರು ಪ್ರಸ್ತಾವನೆ ನೀಡಿದರೆ ನಾವು ನಿರ್ಧರಿಸುತ್ತೇವೆ ಎಂದಿದ್ದಾರೆ.
Private Bus fare won't be increased after government increase fare price of buses. Karnataka Transport Minister Ramalinga Reddy on Friday justified 15 per cent increase in government bus fares across the board and hit out at the BJP for its protest against the hike.
06-01-25 06:53 pm
HK News Desk
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
Bangalore News, IIM College Bangalore: ಹಾಸ್ಟೆ...
06-01-25 01:01 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 03:59 pm
Mangalore Correspondent
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
Mangalore MP Brijesh Chowta, Rajnath Singh: ರ...
05-01-25 02:13 pm
Mangalore MCC Anand CL, Abdul Rauf: ಮಹಾನಗರ ಪಾ...
04-01-25 09:49 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm