ವಿಧಾನಸೌಧ ಒಳಗಡೆಯೇ ಸಚಿವರು ಲಂಚ ಪಡೀತಿದ್ದಾರೆ, ಕಾಂಗ್ರೆಸಿನ ಗುತ್ತಿಗೆದಾರರೇ ಹೇಳುತ್ತಿದ್ದಾರೆ ; ಎಚ್ಡಿಕೆ ಹೊಸ ಬಾಂಬ್ 

05-01-25 07:36 pm       HK News Desk   ಕರ್ನಾಟಕ

ಕಾಂಗ್ರೆಸ್ ಅವಧಿಯಲ್ಲಿ ಲಂಚ ಶೇ.60 ತಲುಪಿದೆ. ಇದನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ವಿಧಾನಸೌಧ ಒಳಗಡೆಯೇ ಸಚಿವರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಮೈಸೂರು, ಜ.5: ಕಾಂಗ್ರೆಸ್ ಅವಧಿಯಲ್ಲಿ ಲಂಚ ಶೇ.60 ತಲುಪಿದೆ. ಇದನ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ವಿಧಾನಸೌಧ ಒಳಗಡೆಯೇ ಸಚಿವರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಮನೆ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ‌. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದ, ಈಗ ವಿಧಾನಸೌಧಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವಾ ಜಯತೇ ಎಂಬಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರು ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ಇದನ್ನ ನೋಡಿದ್ರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರ ಗುತ್ತಿಗೆದಾರರು. ಇದಕ್ಕೆಲ್ಲಾ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತರಬೇಕಾಗುತ್ತದೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ ಕೆ ಭವಿಷ್ಯ ನುಡಿದರು. 

ಬಸ್ ದರ ಶೇ 15 ರಷ್ಟು ಏರಿಕೆ ವಿಚಾರದ ಪ್ರಶ್ನೆಗೆ, ಸರ್ಕಾರ ಗ್ಯಾರೆಂಟಿಯನ್ನ ನಿಲ್ಲಿಸಲು ಕಾರಣವನ್ನ ಹುಡುಕುತ್ತಿದೆ. ಹೇಗಾದರು ಮಾಡಿ ಗ್ಯಾರೆಂಟಿ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ. ಯಾವುದೇ ಕಾರಣಕ್ಕೂ 5 ಗ್ಯಾರಂಟಿ ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅವರಿಂದಲೇ ಕಿತ್ತು ಅವರಿಗೆ ಕೊಡುವ ಕೆಲಸವನ್ನ ಸರ್ಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜೊತೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಅತ್ತೆಯದನ್ನ ಅಳಿಯ ದಾನ ಮಾಡಿದ ಅನ್ನೋ ಮಾತಿನಂತೆ ಅವರಿಂದ ಕಿತ್ತು ಇವರಿಗೆ ಕೊಡೋಕೆ ಇವರೇ ಆಗಬೇಕಾ.. ಎಂದು ಸಾರಿಗೆ ದರ ಏರಿಕೆ ಬಗ್ಗೆ  ಕುಮಾರಸ್ವಾಮಿ ಕುಹಕವಾಡಿದ್ದಾರೆ.

ಜನಸಾಮಾನ್ಯರಿಗೆ ಇದು ಹೊರಯಾಗಲಿದೆ. ಯಾವುದೇ ಮಂತ್ರಿ ಮಕ್ಕಳು, ಶಾಸಕರ ಮಕ್ಕಳು ಬಸ್ ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನಸಾಮಾನ್ಯರು. ದಿನಕ್ಕೆ 10 ರೂಪಾಯಿ ಹೆಚ್ಚಿಗೆಯಾದ್ರು ಅದು ಅವರಿಗೆ ಹೊರೆಯಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕೆ ಹೇಳಿದರು.

Bribery has reached 60% during the Congress term. This has been admitted by Congress party workers. Union Minister H.D. Kumaraswamy has dropped a new bombshell, saying that ministers are taking bribes inside the Vidhan Soudha itself.