ಬ್ರೇಕಿಂಗ್ ನ್ಯೂಸ್
09-01-25 04:21 pm HK News Desk ಕರ್ನಾಟಕ
ಹಾಸನ, ಜ 09: ನಗರಸಭೆ ಆಯುಕ್ತ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ವೇಳೆ ನಗರ ಸಭೆ ಸದಸ್ಯರು ಅಧಿಕಾರಿಗಳ ರಕ್ಷಣೆಗೆ ಬಂದಿದ್ದಾರೆ. ಆಗ ಲೋಕಾಯುಕ್ತ ಇನ್ಸ್‌ಪೆಕ್ಟರ್, ನಗರಸಭೆ ಸದಸ್ಯರಿಗೆ ಚಳಿಬಿಡಿಸಿದ್ದಾರೆ.
ಒಂದುವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ?
ಹಾಸನ ನಗರಸಭೆ ಆಯುಕ್ತ ನರಸಿಂಹಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್.ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಚತಾ ಟೆಂಡರ್ ಬಿಲ್ ನೀಡಲು ಒಂದುವರೆ ಲಕ್ಷಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರೆ ಎನ್ನುವ ಆರೋಪ ಅಧಿಕಾರಿಗಳ ಮೇಲೆ ಇದೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸ್ವಚ್ಛತೆಗೆ ಟೆಂಡರ್ ನೀಡಲಾಗಿತ್ತು. ಒಟ್ಟು 10 ಲಕ್ಷದ 50 ಸಾವಿರ ಬಿಲ್ ಹಣ ನೀಡಲು ಒಂದುವರೆ ಲಕ್ಷ ಹಣ ಲಂಚ ನೀಡಬೇಕು ಎಂದು ನಗರಸಭೆ ಆಯುಕ್ತ ಹಾಗೂ ಕೆ.ಆರ್.ವೆಂಕಟೇಶ್ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಹಾಸನ ನಗರಸಭೆಯ ಕೆ.ಆರ್.ವೆಂಕಟೇಶ್ ಕಚೇರಿಯಲ್ಲಿ ಲಂಚ ಪಡೆಯುವಾಗ ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳ ರಕ್ಷಣೆಗೆ ನಿಂತ ನಗರಸಭೆ ಸದಸ್ಯರು ;
ಈ ವೇಳೆ ಅಧಿಕಾರಿಗಳ ರಕ್ಷಣೆಗೆ ನಿಂತ ನಗರಸಭೆ ಸದಸ್ಯರು, ಕೆ.ಆರ್ ವೆಂಕಟೇಶ್ ಅವರ ಪಾತ್ರ ಏನೂ ಇಲ್ಲ. ಆಯುಕ್ತರ ಸೂಚನೆ ಮೇರೆಗೆ ಹಣ ಪಡೆದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ವಾದ ಮಾಡಿದ್ದಾರೆ.
ನಾವು ಅಮಾಯಕರ ಮೇಲೆ ದಾಳಿ ಮಾಡಿಲ್ಲ ;
ಆಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ಅವರು, ಸದಸ್ಯರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನಾವು ಅಮಾಯಕರ ಮೇಲೆ ದಾಳಿ ಮಾಡಿಲ್ಲ. ಹಣ ಸ್ವೀಕರಿಸಿರುವ ವೆಂಕಟೇಶ್ ಅವರೂ ಕೂಡ ಆರೋಪಿ, ನಮ್ಮ ಲೋಕಾಯುಕ್ತ ಕಾನೂನು ಏನು ಹೇಳುತ್ತದೆ ಅದೇ ರೀತಿ ಕ್ರಮವಹಿಸುತ್ತೇವೆ. ನೀವು ಆಯುಕ್ತರ ಸೂಚನೆಗೆ ಹಣ ಪಡೆದಿದ್ದಾರೆ ಎನ್ನುತ್ತಿದ್ದೀರಿ. ಮೊದಲು ಕೆಳ ಅಧಿಕಾರಿಗಳಿಗೆ ಆಯುಕ್ತರ ಮಾತು ಕೇಳೋದನ್ನ ಕಡಿಮೆ ಮಾಡಲು ಹೇಳಿ ಎಂದು ಇನ್ಸ್ಪೆಕ್ಟರ್ ಬಾಲು ತಿರುಗೇಟು ಕೊಟ್ಟರು. ಬಾಲು ಹೇಳಿಕೆಯಿಂದ ಮುಜುಗರಕ್ಕೊಳಗಾಗಿ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ಹೊರ ನಡೆದರು.
Two officers arrested by lokayukta officlas for demanding bribe to release bill amount in Hassan temple feast.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm