ಬ್ರೇಕಿಂಗ್ ನ್ಯೂಸ್
10-01-25 07:03 pm Bangalore Correspondent ಕರ್ನಾಟಕ
ಬೆಂಗಳೂರು, ಜ.10: ಶರಣಾಗತರಾದ ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಎಸೆದಿದ್ದಾರೆ ಎಂಬುದು ತಿಳಿದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಹುಡುಕಿಸಬೇಕು. ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಗೊತ್ತಿಲ್ಲ. ಈಗಾಗಲೇ ಇಲಾಖೆಯವರು ಆ ಕೆಲಸ ಮಾಡಿಸ್ತಿದಾರೆ ಎಂದರು. ಶಸ್ತ್ರಾಸ್ತ್ರ ಹಸ್ತಾಂತರಿಸದ್ದಕ್ಕೆ ಬಿಜೆಪಿ ಟೀಕೆ ಬಗ್ಗೆ, ಬಿಜೆಪಿಯವರು ಹೇಳ್ತಾ ಇರ್ತಾರೆ. ನಾವು ಮಾಡುವ ಕೆಲಸ ಮಾಡ್ತಾ ಇರ್ತೇವೆ. ಶಸ್ತ್ರಾಸ್ತ್ರ ಹುಡುಕಿಸಬೇಕು. ಈ ಬಗ್ಗೆ ಶರಣಾಗತರಾದ ಮಾವೋವಾದಿಗಳ ಬಳಿ ಕೇಳುತ್ತೇವೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಅವರಿಂದ ಸಹಾಯ ತೆಗೆದುಕೊಳ್ಳುತ್ತೇವೆ, ಅದೆಕ್ಕೆಲ್ಲ ಕೆಲವೊಂದು ಪ್ರಕ್ರಿಯೆಗಳು ಇರುತ್ತವೆ. ಬಿಜೆಪಿಯವರಿಗೆ ಏನು ಗೊತ್ತಿಲ್ವಾ? ಅವರು ಕೂಡ ಸರ್ಕಾರ ನಡೆಸಿದ್ದರು. ಆಗ ಪೊಲೀಸ್ ಇಲಾಖೆ ಬೇರೆ ಇರಲಿಲ್ಲ ಎಂದರು.
ಇನ್ನೋರ್ವ ನಕ್ಸಲ್ ತಪ್ಪಿಸಿಕೊಂಡ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಶರಣಾಗತರಾದ ಮಾವೋವಾದಿಗಳ ತಂಡ ಅವರನ್ನು ಹೊರಹಾಕಿದ್ದರು ಅಂತ ಇದೆ. ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ, ಅವರನ್ನು ಹುಡುಕಿಸುತ್ತೇವೆ. ಅವರು ಚಿಕ್ಕಮಗಳೂರು ಭಾಗದಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಅವರನ್ನು ಹುಡುಕಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆರು ಜನ ಇದ್ದಾರೆ ಅನ್ನೋದು ಇತ್ತು. ಬೇರೆ ರಾಜ್ಯದಿಂದ ಬಂದರೆ ಅದರ ಮೇಲೆ ನಿಗಾ ಇಡಲಾಗುತ್ತದೆ. ಹೊರ ರಾಜ್ಯಗಳಿಂದ ಅಂದರೆ ಒರಿಸ್ಸಾ, ಕೇರಳದಿಂದ ಮಾವೋವಾದಿಗಳು ಬರುವ ಸಾಧ್ಯತೆ ಇರುತ್ತದೆ. ಅದರ ಮೇಲೆ ನಾವು ನಿಗಾ ಇಡುತ್ತೇವೆ ಎಂದು ತಿಳಿಸಿದರು.
ಮಾವೋವಾದಿಗಳನ್ನು ಮುಖ್ಯಮಂತ್ರಿಗಳು ಮುಖ್ಯವಾಹಿನಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಕಾನೂನಿನ ಮೂಲಕ ಹೋರಾಟ ಮಾಡಿಕೊಳ್ಳಿ ಎಂದು ಕರೆ ಕೊಟ್ಟಿದ್ದರು. ಶಸ್ತ್ರಾಸ್ತ್ರ ಇಟ್ಟುಕೊಂಡು ಹೋರಾಟ ಮಾಡೋದು ಬೇಡ ಅಂತ ಸಿಎಂ ಮನವಿ ಮಾಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಪೊಲೀಸ್ ಎನ್ಕೌಂಟರ್ ನಲ್ಲಿ ಬಲಿಯಾದ ವಿಕ್ರಮ್ ಗೌಡ ಕುಟುಂಬಕ್ಕೆ ಪರಿಹಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಅದನ್ನು ಕೂಡ ಪರಿಶೀಲನೆ ಮಾಡುತ್ತೇವೆ. ಆದರೆ ಆ ಪ್ರಕರಣ ಬೇರೆ, ಈ ಪ್ರಕರಣ ಬೇರೆ ಎಂದು ಹೇಳಿದರು.
Karnataka Home Minister G Parameshwara on Friday said that six surrendered Maoists have not handed over their weapons, and the police are working to locate and recover them from the forest where they are believed to have been disposed of.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm