ಬ್ರೇಕಿಂಗ್ ನ್ಯೂಸ್
11-01-25 10:53 pm HK News Desk ಕರ್ನಾಟಕ
ವಿಜಯಪುರ, ಜ 11: 'ನೀವು ಸಾಬರಿಗೆ ಮುತ್ತು ಕೊಡಿ. ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಆರೋಪಿಗಳಿಗೆ ಮುತ್ತು ಕೊಡಿ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಮುತ್ತು ಕೊಡ್ರಿ. ಅವರಿಗೆಲ್ಲ ದಿನಾಲು ಮುತ್ತು ಕೊಡುತ್ತಾ ಹೋಗಿ, ಭವಿಷ್ಯದ ದಿನಗಳಲ್ಲಿ ನೀವು ಮುತ್ತು ಕೊಡುವ ಗೃಹ ಸಚಿವರಾಗಿ,' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.
'ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದಾಗ ಲಾಠಿ ಚಾರ್ಜ್ ಮಾಡಲಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ಮೇಲೆ ಲಾಠಿ ಚಾರ್ಜ್ ಮಾಡಲಿಲ್ಲ. ಮೀಸಲಾತಿ ಕೇಳಿದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿದಿರಿ,' ಎಂದು 'ಮುತ್ತು ಕೊಡಬೇಕಿತ್ತೆ' ಎಂಬ ಪರಮೇಶ್ವರ ಹೇಳಿಕೆಗೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಿರುಗೇಟು ನೀಡಿದರು
'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಸುವರ್ಣ ಸೌಧದಲ್ಲಿ ಗುಂಡಾಗಳು ಹೊಕ್ಕಿದ್ದಾರೆ. ಸಾಕಷ್ಟು ಭದ್ರತೆ ಇದ್ದಾಗ ಗುಂಡಾಗಳು ಒಳಗೆ ಬಂದು ಸಿ.ಟಿ ರವಿ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಾರೆ. ಹೀಗಾದರೆ ಕಾನೂನು ಸುವ್ಯವಸ್ಥೆ ಎಲ್ಲಿದೆ, ಯಾವ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ,' ಎಂದು ಸರಕಾರದ ವಿರುದ್ಧ ಹರಿಹಾಯ್ದರು.
ಲಾಠಿ ಬೀಸದೆ ಮುತ್ತು ಕೊಡಬೇಕಾ ಎಂದಿದ್ದರು ಜಿ.ಪರಮೇಶ್ವರ್!
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಹೊತ್ತಿನಲ್ಲಿ 2A ಮೀಸಲಾತಿ ಜಾರಿ ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಹೋರಾಟ ನಡೆಸುತ್ತಿದ್ದ ವೇಳೆ ಲಾಠಿಚಾರ್ಜ್ ನಡೆದಿತ್ತು. ಇದು ಬಿಜೆಪಿ ಹಾಗೂ ಪಂಚಮಸಾಲಿ ಸಮುದಾಯದ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂದರ್ಭ ಲಾಠಿಚಾರ್ಜ್ ನಡೆದ ಬಗ್ಗೆ ಗೃಹ ಸಚಿವ ಪ್ರತಿಕ್ರಿಯಿಸಿ, 'ಪೊಲೀಸರ ಮನವೊಲಿಕೆ ಪ್ರಯತ್ನದ ಬಳಿಕವೂ ನಿಷೇಧಾಜ್ಞೆ ಉಲ್ಲಂಘಿಸಿ 10 ಸಾವಿರ ಮಂದಿ ಹೋರಾಟಗಾರರು ಸುವರ್ಣಸೌಧ ಕಡೆಗೆ ನುಗ್ಗಲು ಯತ್ನಿಸಿದ್ದರು. ಹೀಗಿದ್ದಾಗ ಲಾಠಿ ಚಾರ್ಜ್ ಮಾಡದೆ ಮುತ್ತು ಕೊಡಬೇಕಾ?' ಎಂದು ಪ್ರಶ್ನಿಸಿದ್ದರು.
ವಿಜಯೇಂದ್ರಗೆ ಪ್ರಿಯಾಂಕ್ ಧಮ್ಕಿ
'ಕಲಬುರಗಿಯಲ್ಲಿ ನಡೆದ ಹೋರಾಟಕ್ಕೆ ವಿಜಯೇಂದ್ರ ಬರಲೇ ಇಲ್ಲ. ಪ್ರಿಯಾಂಕ್ ಖರ್ಗೆ ನಿಮ್ಮ ತಂದೆಯ ಹಗರಣ ಹೊರಗೆ ತೆಗೆಯುತ್ತೇನೆ ಎಂದು ಧಮ್ಕಿ ಹಾಕಿದ್ದಾರಂತೆ. ಅದಕ್ಕೆ ವಿಜಯೇಂದ್ರ ಕಲಬುರಗಿಗೆ ಕಾಲಿಡಲಿಲ್ಲ,' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
Home Minister Parameshwara is busy kissing muslims and accused of DJ and KJ halli slams Yatnal.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm