ಬ್ರೇಕಿಂಗ್ ನ್ಯೂಸ್
23-01-25 09:38 pm Bangalore Correspondent ಕರ್ನಾಟಕ
ಬೆಂಗಳೂರು, ಜ.23: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ಯತ್ನಾಳ್ ಬಳಿಕ ಶ್ರೀರಾಮುಲು ಕೂಡ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ. ತನ್ನ ಒಂದು ಕಾಲದ ಕುಚಿಕು ಗೆಳೆಯನಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಟು ಶಬ್ದಗಳಲ್ಲಿ ಕಿಡಿಕಾರಿದ್ದಾರೆ. ಅಲ್ಲದೆ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಚ್ಚತ್ತುಕೊಂಡಿದೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ವಾಗ್ದಾಳಿ ನಡೆಸಿದ ಕೆಲ ಹೊತ್ತಿನಲ್ಲೇ ಶ್ರೀರಾಮುಲು ಅವರಿಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಫೋನ್ ಮಾಡಿದ್ದು ಮನವೊಲಿಕೆಗೆ ಯತ್ನಿಸಿದ್ದಾರೆ. ಈ ವೇಳೆ ರಾಮುಲು ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನವನ್ನು ವಿವರಿಸಿದ್ದಾರೆ. ಈ ವೇಳೆ, ದೆಹಲಿಗೆ ಬನ್ನಿ, ಏನಿದ್ದರೂ ಕುಳಿತು ಮಾತನಾಡೋಣ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಜೆಪಿ ನಡ್ಡಾ ಅವರು ಶ್ರೀರಾಮುಲು ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕು ಮೊದಲು ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮುಲು, ಸದ್ಯಕ್ಕೆ ನನಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳ ವರೆಗೆ ನನಗೆ ಎಲ್ಲವನ್ನೂ ಕೊಟ್ಟು ಬೆಳೆಸಿದೆ. ಅಷ್ಟು ಬೇಗನೆ ನಾನು ತಾಯಿ - ಮಗನ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು. ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆನ್ನಿಗೆ ಕಾರ್ಯಕರ್ತರ ಪಡೆ ಇದೆ. ಗಾಲಿ ಜನಾರ್ದನ ರೆಡ್ಡಿ ಸುಳ್ಳಿನ ಮೇಲೆ ಕೋಟೆ ಕಟ್ಟಲು ಹೊರಟಿದ್ದಾರೆ. ಇದನ್ನು ನಂಬುವಷ್ಟು ಜನರು ಮೂರ್ಖರಲ್ಲ. ಬಳ್ಳಾರಿಗೆ ಎಲ್ಲವೂ ಗೊತ್ತಿದೆ ಎಂದು ಹೇಳಿ ತನ್ನಿಂದಾಗಿ ರಾಮುಲು ಬೆಳೆದಿರೋದು ಎಂದ ಗಾಲಿ ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ರಾಧಾ ಮೊಹನ್ ಅಗರ್ವಾಲ್ ರೋಷಾವೇಶದಿಂದ ನನ್ನ ಮುಖದ ಮೇಲೆ ಉಗಿದ ಹಾಗೆ ಹೇಳಿದ್ರು. ಸೋಲಿಗೆ ನೀವೇ ಕಾರಣ ಎಂದು ಅರೋಪ ಮಾಡಿದ್ರು. ಆರಂಭದಿಂದಲೂ ಚುನಾವಣೆ ಪ್ರಚಾರ ಮಾಡಿದ್ದೇನೆ.. ಡಬಲ್ ಗೇಮ್ ಮಾಡ್ತೀರಾ ಎಂದು ನನಗೆ ಆರೋಪ ಮಾಡಿದ್ರು. ಇದು ಸರಿಯಲ್ಲ ಎಂದು ಗಟ್ಟಿಯಾಗಿ ವಾದ ಮಾಡಿದೆ. ಕೋರ್ ಕಮೀಟಿಯಲಿ ಅಪಮಾನ ಮಾಡಿ ನೊವು ಕೊಡ್ತಿದ್ದೀರಾ.. ಗಾಯದ ಮೇಲೆ ಬರೆ ಎಳೆಯ ಬೇಡಿ ಎಂದು ಹೇಳಿ ಎದ್ದು ಹೊರಗೆ ಬಂದೆ. ಆದರೆ ಎದ್ದು ಹೋಗೋದು ಶೋಭೆಯಲ್ಲ ಎಂದು ಹಿರಿಯ ಮುಖಂಡರು ಹೇಳಿದ್ರು. ಹಿಂದಿಯಲ್ಲಿ ಮಾತನಾಡೋ ವೇಳೆ ರಾಜ್ಯಾಧ್ಯಕ್ಷರು ನನ್ನ ರಕ್ಷಣೆಗೆ ಬರಲಿಲ್ಲ. ನಾನೇನು ಮಾಡೋಕೆ ಆಗಲ್ಲ ಎಂದು ವಿಜಯೇಂದ್ರ ಹೇಳಿದ್ರು. ಜನಾರ್ದನ ರೆಡ್ಡಿ ನನ್ನ ಮೇಲೆ ಸುಳ್ಳು ಅರೋಪ ಮಾಡಿದ್ದಾರೆ. ಏನೂ ಮಾತನಾಡದೇ ಇದ್ರೆ ನಾನೇ ತಪ್ಪಿತಸ್ಥನಾಗ್ತೇನೆ ಎಂದಾಗ್ತದೆ ಎಂದು ಕ್ಲಾರಿಟಿ ಕೊಟ್ಟಿದ್ದೇನೆ. ಪಕ್ಷ ತಾಯಿಯಂತೆ ನಾನು ದ್ರೋಹ ಮಾಡಿಲ್ಲ.. ಪಕ್ಷ ಬಿಟ್ಟು ಹೋಗು ಸಂದರ್ಭ ಬಂದ್ರೆ ಪ್ರಧಾನಿ ಬಳಿ ಹೋಗಿ ಎಲ್ಲಾ ವಿಷಯ ತಿಳಿಸುತ್ತೇನೆ. ಮೋದಿ ಅವರು ನನಗೆ ತುಂಬಾ ಗೌರವ ಕೊಡ್ತಾರೆ, ಅವರ ಹತ್ತಿರ ವಿಶ್ವಾಸ ಕಳೆದುಕೊಳ್ಳೋಕೆ ಇಷ್ಟ ಪಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜ.22ರಂದು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು ಸಂಡೂರು ವಿಧಾನಸಭೆ ಉಪ ಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿತ್ತು. ಈ ವೇಳೆ, ನಿಮ್ಮಿಂದಾಗಿ ಸಂಡೂರಿನಲ್ಲಿ ಸೋಲಾಗಿದೆ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಗರಂ ಆಗಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಉಪ ಚುನಾವಣೆ ಸೋಲಿನ ಕುರಿತಾಗಿ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ನನ್ನ ಮೇಲೆ ಆರೋಪ ಮಾಡಿದ್ದೀರಿ ಎಂದು ಶ್ರೀರಾಮುಲು ಸಭೆಯಲ್ಲೇ ಪ್ರಶ್ನಿಸಿದ್ದರಲ್ಲದೆ, ರಾಜಿನಾಮೆಗೂ ಮುಂದಾಗಿದ್ದರು. ಆನಂತರ, ವಿಜಯೇಂದ್ರ ಮತ್ತು ಅಶೋಕ್ ಅವರು ರಾಮುಲು ಅವರನ್ನು ಸಮಾಧಾನ ಪಡಿಸಿದ್ದರು.
BJP leader and former Minister B. Sriramulu’s recent outburst against his long-term associate, business partner, and friend G. Janardhana Reddy has shocked many. However, for those observing political developments in Ballari, this was waiting to happen for some time.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 04:39 pm
HK News Desk
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm