ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕಾರ ; ರಾಜ್ಯಪಾಲರಿಗೆ ತಪ್ಪು ಗ್ರಹಿಕೆ ಇದೆ, ಜನ ಸಾಯೋದನ್ನು ನೋಡಿಕೊಂಡಿರಲು ಆಗುತ್ತಾ? ಆಕ್ಷೇಪಣೆಗೆ ಉತ್ತರ ಕೊಡುತ್ತೇವೆ 

09-02-25 05:28 pm       HK News Desk   ಕರ್ನಾಟಕ

ಮೈಕ್ರೋ ಫೈನಾನ್ಸ್ ಕುರಿತ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ ಕುರಿತು ಕಾನೂನು ಸಚಿವ ಎಚ್.ಕೆ ಪಾಟೀಲ ಪ್ರತಿಕ್ರಿಯಿಸಿದ್ದು ನಾವು ಕಳುಹಿಸಿದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ತಮ್ಮ ಕೆಲವು ಅವಲೋಕನಗಳಿಂದ ವಾಪಸ್ ಕಳುಹಿಸಿದ್ದಾರೆ. ಅವರಿಗೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆ ಇರಬಹುದು.

ಗದಗ, ಫೆ.9: ಮೈಕ್ರೋ ಫೈನಾನ್ಸ್ ಕುರಿತ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿದ ಕುರಿತು ಕಾನೂನು ಸಚಿವ ಎಚ್.ಕೆ ಪಾಟೀಲ ಪ್ರತಿಕ್ರಿಯಿಸಿದ್ದು ನಾವು ಕಳುಹಿಸಿದ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ತಮ್ಮ ಕೆಲವು ಅವಲೋಕನಗಳಿಂದ ವಾಪಸ್ ಕಳುಹಿಸಿದ್ದಾರೆ. ಅವರಿಗೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆ ಇರಬಹುದು. ರಾಜ್ಯಪಾಲರಿಗೆ ತಕ್ಷಣ ಕಡತಗಳನ್ನು ವಿವರಣೆಯೊಂದಿಗೆ ಮತ್ತೆ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ. 

ಫೈನಾನ್ಸ್ ನವರು 3 ಲಕ್ಷ ರೂ. ಕೊಡಲು ಇರುತ್ತದೆ. 5 ಲಕ್ಷ ರೂ. ವರೆಗೆ ದಂಡ ಹೇಗೆ ಹಾಕ್ತೀರಿ ಅಂತ ಕೇಳಿದ್ದಾರೆ. ಸಾಲ ಎಷ್ಟು ಕೊಟ್ಟಿದ್ದೀರಿ ಎಂಬುದು ಮುಖ್ಯವಲ್ಲ. ಸಾಲಗಾರರ ಮೇಲೆ ಹಿಂಸೆ ಎಷ್ಟು ಆಗಿದೆ, ಎಷ್ಟು ಒತ್ತಡ ಆಗಿದೆ ಎಂಬುದಕ್ಕೆ ಸಂಬಂಧಿಸಿದ ದಂಡವೇ ಹೊರತು, ಸಾಲದ ಪ್ರಮಾಣದ ಮೇಲೆ ದಂಡ ಹಾಕುವುದಲ್ಲ. 

ಶಿಕ್ಷೆ ಪ್ರಮಾಣ ಹೆಚ್ಚು ಇದೆ. ಆತ್ಮಹತ್ಯೆ ನಡೆಯುವುದು, ಸಾಯುವಂತೆ ಹೊಡೆಯುವುದು, 
ಕುಟುಂಬವೇ ನಾಶ ಆಗುವಂತಹದ್ದನ್ನು ನಾವೆಲ್ಲಾ ಗಮನಿಸಿದ್ದೇವೆ. ಯಾರು ನೋಂದಣಿ ಇಲ್ಲದೆ ಮನಬಂದಂತೆ ಸಾಲ ಕೊಟ್ಟು ಹಿಂಸಾತ್ಮಕ ವಸೂಲಿ ಮಾಡುವುದುನ್ನು ಮೂಲಭೂತ ಹಕ್ಕು ಅನ್ನಲು ಸಾಧ್ಯನಾ? ಆರು ಅಂಶಗಳ ಬಗ್ಗೆ ನಾನು ರಾಜ್ಯಪಾಲರಿಗೆ ತಕ್ಷಣ ಕಡತಗಳನ್ನು ನಮ್ಮ ವಿವರಣೆಯೊಂದಿಗೆ ಕಳುಹಿಸುತ್ತೇನೆ. ಸಾರ್ವಜನಿಕರು ಹಾಗೂ ಸಮಾಜದ ಹಿತದೃಷ್ಟಿಯಿಂದ ಅನುಕೂಲ ಮಾಡಬೇಕು ಅಂತ ಮತ್ತೊಮ್ಮೆ ಆಗ್ರಹ ಮಾಡ್ತೇವಿ.

ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧ ದ್ವೇಷ ರಾಜಕಾರಣ ಮಾಡ್ತಿದ್ದಾರಾ ಎಂಬ ಪ್ರಶ್ನೆ ಕುರಿತು ಈ ಬಗ್ಗೆ ಟಿಪ್ಪಣಿ ಮಾಡುವುದಿಲ್ಲ.
ಸಮಾಜದ ಹಿತವಾಗಿರುವ ಸುಗ್ರೀವಾಜ್ಞೆಯಿದು. ಸದನ ಕೂಡಿದಾಗ ಮಾತನಾಡಿ ಅಂದಿದ್ದಾರೆ. ಪ್ರತಿದಿನ ಎರಡು-ಮೂರು ಆತ್ಮಹತ್ಯೆ ನೋಡಿಕೊಂಡು ಕೂಡಲು ಆಗುತ್ತಾ? ಜನ ಮೃತ ಪಡಬಾರದೆಂದು ಚಿಂತನೆ ಮಾಡಿ ಈ ಹೆಜ್ಜೆ ಇಟ್ಟಿದೇವೆ. 

ನಮ್ಮ ಸುಗ್ರೀವಾಜ್ಞೆ ಬಗ್ಗೆ ಅವರು ತಮ್ಮ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಅದಕ್ಕೆ ನಮ್ಮ ಉತ್ತರ ನಾವು ಕೊಟ್ಟಿದೇವೆ. ಸಮರ್ಪಕವಾದ, ಸಮಂಜಸವಾದ ಉತ್ತರ ಕೊಡ್ತೇವಿ. ಸಂವಿಧಾನಾತ್ಮಕವಾಗಿ ನಮಗೆ ಕಾನೂನು ಮಾಡಲು ಹಕ್ಕು ಇದೆ. ಆ ಹಕ್ಕಿನ ವ್ಯಾಪ್ತಿಯಲ್ಲಿ ಈ ಸುಗ್ರೀವಾಜ್ಞೆ ಮಾಡ್ತೇವೆ ಎಂದಿದ್ದಾರೆ. ‌

Karnataka Home Minister G Parameshwara announced that the state government would address the Governor Thaawarchand Gehlot’s concerns and resubmit the Karnataka Micro Finance (Prevention of Coercive Actions) Ordinance 2025 for assent.