ಬ್ರೇಕಿಂಗ್ ನ್ಯೂಸ್
09-02-25 06:58 pm HK News Desk ಕರ್ನಾಟಕ
ದಾವಣಗೆರೆ, ಫೆ.9: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರವಾಗಿ ಮಾತನಾಡುತ್ತಿರುವ ಮಾಜಿ ಸಚಿವ ರೇಣುಕಾಚಾರ್ಯ ಬಗ್ಗೆ ಹಂದಿಗಳು ಎಂದು ಬಸವನಗೌಡ ಯತ್ನಾಳ್ ಜರೆದಿದ್ದರೆ, ಯತ್ನಾಳ್ ಒಂದು ರೀತಿಯಲ್ಲಿ ದೇವರಿಗೆ ಬಿಟ್ಟಿರುವ ಕೋಣ ಇದ್ದಂತೆ ಎಂದು ಎಂ.ಪಿ ರೇಣುಕಾಚಾರ್ಯ ಕೌಂಟರ್ ನೀಡಿದ್ದಾರೆ.
ಯತ್ನಾಳ್ ಒಂದು ರೀತಿಯಲ್ಲಿ ದೇವರಿಗೆ ಬಿಟ್ಟಿರುವ ಕೋಣ ಇದ್ದಂತೆ. ಕೋಣವನ್ನು ನುಣ್ಣಗೆ ಅರಳೆಣ್ಣೆ ಹಾಕಿ ಮಸಾಜ್ ಮಾಡಿ, ಸುಣ್ಣದ ನೀರು ಕುಡಿಸಿ ಬಲಿ ಕೊಡುತ್ತಾರೆ. ಹತ್ತರಿಂದ ಹದಿನೈದು ವರ್ಷ ಸಾಕಿ ಬೆಳಗಿನ ಜಾವ ದೇವರ ಮುಂದೆ ಬಲಿ ಕೊಡುತ್ತಾರೆ. ಕಾಂಗ್ರೆಸ್ ನವರೇ ಈ ರೀತಿ ನಿನ್ನನ್ನು ಬಲಿ ಕೊಡ್ತಾರೆ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ವರಿಷ್ಠರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷರು ದೆಹಲಿಗೆ ಹೋಗಿದ್ದಾರೆ. ಅವರು ದೆಹಲಿಗೆ ಹೋಗುವುದು ನಿನ್ನೆಯೇ ನಿಗದಿಯಾಗಿತ್ತು. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷ ರಾಗಿ ಮುಂದುವರೆಯುವುದು ಖಚಿತ. ದುಷ್ಟಶಕ್ತಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರನ್ನು ಕೆಳಗಿಸಲು, ತಡೆಯಲು ಸಾಧ್ಯವಿಲ್ಲ. ನಮ್ಮ ಬಗ್ಗೆ ಮಹಾನುಭಾವ ಏನೇನೋ ಮಾತಾಡ್ತಾರೆ.
ನೀನು ಜೆಡಿಎಸ್ ಸೇರಿ ಕಬಾಬ್ ಬಿರಿಯಾನಿ ತಿನ್ನುವಾಗ ಎಲ್ಲಿ ಹೋಗಿದ್ಯಪ್ಪ ಹಿಂದೂ ಹುಲಿ. ಜೆಡಿಎಸ್ ಗೆ ಹೋಗಿದ್ಯಲ್ಲಾ ನಿನಗೆ ನಾಚಿಕೆ ಆಗೋದಿಲ್ವಾ.. ಈಗ ಬಿಜೆಪಿ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡ್ತೀಯಾ, ಮೋದಿಯವರ ಬಗ್ಗೆ ಮಾತಾಡ್ತೀಯಲ್ಲ. ನೀನು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತೀಯಾ. ನೀನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿನ್ನ ಮಕ್ಕಳನ್ನು ಕರೆದುಕೊಂಡು ವೈಭವೀಕರಿಸಿದ್ದೀಯಾ, ಅದು ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡಿಲ್ಲ. ರಾಘವೇಂದ್ರ ಸಿಂಡಿಕೇಟ್ ಮೆಂಬರ್ ಆಗಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ನಿನಗೆ ವಿಜಯಪುರದಲ್ಲಿ ಟಿಕೆಟ್ ಕೊಡ್ಲಿಲ್ಲ ಎಂದರೆ ನೀನು ಕೇರ್ ಆಫ್ ಪುಟ್ಬಾತ್ ಆಗ್ತಾ ಇದ್ದೇ. ಬಬಲೇಶ್ವರ ಕ್ಷೇತ್ರದಲ್ಲಿ ಹೊಂದಾಣೆಕೆ ಮಾಡಿಕೊಂಡು ಶಾಸಕನಾಗಿದ್ದು ನೀನು. ನೀನು ನಮಗೆ ಹಂದಿಗೆ ಹೋಲಿಸಿದ್ದೀಯಾ. ಹಂದಿ ಎಂದರೆ ವರಾಹ, ವಿಷ್ಣುವಿನ ಅವತಾರ. ನಮ್ಮನ್ನು ದೇವರಿಗೆ ಹೋಲಿಸಿದ್ದೀಯಾ ನಿನಗೆ ಧನ್ಯವಾದಗಳು. ಆದರೆ ನಿನ್ನ ಜೊತೆ ಮೂರ್ಖರ ತಂಡ ಇದೆ ಎಂದು ವಾಗ್ದಾಳಿ ನಡೆಸಿದರು.
ಮಠಾಧೀಶರಿಗೆ ನಿಂದನೆ ಮಾಡಿ ಅಪಮಾನ ಮಾಡ್ತೀಯಾ, ನೀನು ಪೇಮೆಂಟ್ ಗಿರಾಕಿ. ಹಳ್ಳಿಗಳಲ್ಲಿ ಕೋಣವನ್ನು ಚೆನ್ನಾಗಿ ಮೇಯಿಸಿ ಮಾರಿಗೆ ಬಲಿ ಕೊಡ್ತಾರೆ. ಬಲಿ ಕೊಡುವ ಮುನ್ನ ಎಣ್ಣೆ ಹಾಕಿ ಮಸಾಜ್ ಮಾಡಿ ಉಪ್ಪಿನ ನೀರು ಕುಡಿಸುತ್ತಾರೆ. ಅದೇ ರೀತಿ ಮಾರಿ ಕೋಣದ ರೀತಿ ನಿನ್ನನ್ನು ಬಲಿ ಕೊಡ್ತಾರೆ. ಸೋತು ಸುಣ್ಣವಾದವರಿಗೆ ನೀನು ದಂಡನಾಯಕ. 12ರಂದು ಬೆಂಗಳೂರಿನಲ್ಲಿ ಸಭೆ ಮಾಡಿ ಮಾತನಾಡುತ್ತೇವೆ ಎಂದು ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
Renukacharya slams Yatnal over deformative remarks. Yatnal had stated those supporting BJP president as pigs, after which Renukacharya has slammed yatnal
10-02-25 07:01 pm
HK News Desk
13th edition Kumbh Mela, Triveni Sangama, T N...
10-02-25 05:18 pm
Magadi MLA Balakrishna, Bdcc bank, fake gold:...
10-02-25 01:40 pm
Bengaluru-Mysuru Expressway: ಟೈರ್ ಸ್ಫೋಟಗೊಂಡು...
09-02-25 07:58 pm
Renukacharya, Yatnal: ನೀನು ಜೆಡಿಎಸ್ ಸೇರಿ ಬಿರಿಯ...
09-02-25 06:58 pm
10-02-25 05:48 pm
HK News Desk
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
BJP Delhi, AAP, Live result, Election: 27 ವರ್...
08-02-25 12:14 pm
09-02-25 11:03 pm
Mangalore Correspondent
ಸುಳ್ಯದಲ್ಲಿ ಬೈಕ್ ಅಪಘಾತ ; ತೀವ್ರ ಗಾಯಗೊಂಡಿದ್ದ ಕಂಕ...
09-02-25 10:31 pm
Mangalore, Derlakatte, Drowning: ಕಪ್ಪೆ ಚಿಪ್ಪು...
09-02-25 07:40 pm
Job News, Yaticorp, Mangalore, AI; ಎಐ ಕ್ಷೇತ್...
08-02-25 10:46 pm
Mines, Krishnaveni Mangalore, Dinesh gundrao;...
08-02-25 01:08 pm
09-02-25 07:35 pm
Mangalore Correspondent
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm