Magadi MLA Balakrishna, Bdcc bank, fake gold: ಬಿಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು 9 ಕೋಟಿ ಸಾಲ ; ಮಾಗಡಿ ಶಾಸಕ ಬಾಲಕೃಷ್ಣ ಸೋದರನ ವಿರುದ್ಧ ಆರೋಪ, ಪ್ರಕರಣ ಮುಚ್ಚಿ ಹಾಕಲು ಯತ್ನ 

10-02-25 01:40 pm       HK News Desk   ಕರ್ನಾಟಕ

ನಕಲಿ ಚಿನ್ನಾಭರಣ ಅಡವಿಟ್ಟು ಸುಮಾರು 9 ಕೋಟಿ ರೂ. ವಂಚಿಸಿರುವ ಪ್ರಕರಣ ಮಾಗಡಿ ತಾಲೂಕಿನ ಕುದೂರು ಬಿಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ನಡೆದಿದ್ದು ಇದರಲ್ಲಿ ಶಾಸಕ ಬಾಲಕೃಷ್ಣ ಅವರ ಸೋದರನೇ ಶಾಮೀಲಾಗಿದ್ದಾರೆ. ಜಿಲ್ಲಾ ಶಾಖೆಯವರು ಇದರ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್‌ ಆಗ್ರಹಿಸಿದ್ದಾರೆ. 

ರಾಮನಗರ, ಫೆ.10: ನಕಲಿ ಚಿನ್ನಾಭರಣ ಅಡವಿಟ್ಟು ಸುಮಾರು 9 ಕೋಟಿ ರೂ. ವಂಚಿಸಿರುವ ಪ್ರಕರಣ ಮಾಗಡಿ ತಾಲೂಕಿನ ಕುದೂರು ಬಿಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ನಡೆದಿದ್ದು ಇದರಲ್ಲಿ ಶಾಸಕ ಬಾಲಕೃಷ್ಣ ಅವರ ಸೋದರನೇ ಶಾಮೀಲಾಗಿದ್ದಾರೆ. ಜಿಲ್ಲಾ ಶಾಖೆಯವರು ಇದರ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕು ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್‌ ಆಗ್ರಹಿಸಿದ್ದಾರೆ. 

ರೈತರು ಹಾಗೂ ಸಾರ್ವಜನಿಕರ ಹಣ ದೋಚುವ ಉದ್ದೇಶದಿಂದ ನಕಲಿ ಬಂಗಾರದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ವಿಜಯ್‌ದೇವ್‌ ಅವರಿಗೂ ಪತ್ರ ಬರೆದಿದ್ದು ಅವ್ಯವಹಾರಕ್ಕೆ ಕಾರಣರಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ. 

ನಕಲಿ ಚಿನ್ನಾಭರಣ ಅಡಮಾನವಿರಿಸಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಚ್‌.ಎನ್‌. ಅಶೋಕ್‌(ತಮ್ಮಾಜಿ) ಅವರು ತಮ್ಮ ಬೆಂಬಲಿಗರಿಗೆ ಸಾಲ ಕೊಡಿಸಿದ್ದಾರೆ ಎನ್ನುವ ಮೂಲಕ ಮಾಗಡಿ ಕ್ಷೇತ್ರದ ಶಾಸಕ ಎಚ್‌.ಸಿ. ಬಾಲಕೃಷ್ಣ ಬಗ್ಗೆಯೂ ಆರೋಪ ಹೊರಿಸಿದರು. ಸದರಿ ಹಗರಣದಲ್ಲಿ ಶಾಖೆಯ ಮ್ಯಾನೇಜರ್‌, ಚಿನ್ನ ಪರಿವೀಕ್ಷಕ ಮಾತ್ರವಲ್ಲದೆ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ ಎಂದು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಮಂಜುನಾಥ್ ಹೇಳಿದ್ದಾರೆ. 

ಬಿಡಿಸಿಸಿ ಕುದೂರು ಶಾಖೆಯಲ್ಲಿ ಮ್ಯಾನೇಜರ್‌ ಆಗಿದ್ದ ವ್ಯಕ್ತಿಯ ವರ್ಗಾವಣೆ ನಂತರ ನಕಲಿ ಚಿನ್ನ ಅಡವಿಟ್ಟಿರುವ ಸಂಗತಿ ಬಹಿರಂಗವಾಗಿದೆ. ಈ ಹಿಂದೆಯೂ ಇದೇ ರೀತಿ ಎಷ್ಟು ಚಿನ್ನ ದುರುಪಯೋಗವಾಗಿರಬಹುದು? ಬಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಅಶೋಕ್‌ ಅವರು ಮೂರು ತಿಂಗಳಿಗೊಮ್ಮೆ ಏಕೆ ಸಭೆಗಳನ್ನು ನಡೆಸಲಿಲ್ಲ? ಶಾಖೆ ಮ್ಯಾನೇಜರ್‌ ಸೇರಿದಂತೆ ಸಿಬ್ಬಂದಿಯನ್ನು ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು. ಆದರೆ, ಏಕೆ ಮಾಡಿಲ್ಲ? ಬಿಡಿಸಿಸಿ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದಾಗಿನಿಂದ ಡಿಲಿಮಿಟೇಷನ್‌ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

Magadi MLA Balakrishna brother alleged of fake gold pledging at bdcc bank in ramnagara.