ಬ್ರೇಕಿಂಗ್ ನ್ಯೂಸ್
11-02-25 10:34 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಫೆ.11: ಮುಯ್ಯಿಗೆ ಮುಯ್ಯಿ ಎನ್ನುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದ ಸಂದೀಪ್ ರೆಡ್ಡಿ ನೇಮಕಾತಿಯನ್ನು ಮಾಜಿ ಸಚಿವ ಸುಧಾಕರ್ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ತಂದು ತಡೆ ತಂದಿದ್ದಾರೆ. ಆಮೂಲಕ ವಿಜಯೇಂದ್ರ ನಡೆಗೆ ಸುಧಾಕರ್ ಅಡ್ಡಗಾಲು ಇಟ್ಟಿದ್ದಾರೆ. ಇದರ ಬೆನ್ನಲ್ಲೇ ಸಂದೀಪ್ ರೆಡ್ಡಿ ಅವರು, ಮಾಜಿ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂದೀಪ್ ರೆಡ್ಡಿ, ಮಾಜಿ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಹತ್ತು ಹಲವು ಆರೋಪಗಳನ್ನು ಮಾಡಿದರು. ತನಗೆ ಮಾಡಿದ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ತನಗೂ ಕುಟುಂಬ ಇದೆ, ತಾವೂ ಬದುಕಬೇಕಿದೆ, ಸುಧಾಕರ್ ಗೆ ಮಾತ್ರ ಸಂಸಾರ ಇರೋದಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಜನ ಸಾಯುತ್ತಿದ್ದರೆ ಸುಧಾಕರ್ ಮಾತ್ರ ಹಣ ದೋಚಿಕೊಂಡು ಚೆನ್ನೈ ಮೂಲದ ಮೈಕ್ರೋ ಫೈನಾನ್ಸ್ ಕಂಪನಿಯೊಂದರಲ್ಲಿ ತೊಡಗಿಸಿರುವುದನ್ನು ತಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ. ಸುಧಾಕರ್ ಸಹ ಪ್ರಮಾಣ ಮಾಡಲಿ ನೋಡೋಣ ಎಂದು ಸಂದೀಪ್ ರೆಡ್ಡಿ ಸವಾಲೆಸೆದಿದ್ದಾರೆ.
ಅಕ್ರಮದ ದಾಖಲೆಗಳು ನನ್ನಲ್ಲಿವೆ
ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಈ ರೀತಿ ಕುತಂತ್ರ ಮಾಡ್ತಿದ್ದಾರೆ. ನಿಯಮಾನುಸಾರ ಬಿಜೆಪಿ ಪಕ್ಷ ನನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ. ಆದರೆ, ಡಾ.ಸುಧಾಕರ್ ನನ್ನ ಮೇಲೆ ಇರುವ ಹೊಟ್ಟೆ ಉರಿಯಿಂದ ನೇಮಕಾತಿಗೆ ತಡೆ ಮಾಡಿದ್ದಾರೆ. ಸುಧಾಕರ್ ನೀನು ಆರೋಗ್ಯ ಸಚಿವನಾಗಿ ಮಾಡಿರುವ ಅಕ್ರಮಗಳನ್ನು ಬಯಲು ಮಾಡುತ್ತೇನೆ. ನಿನ್ನ ಅಕ್ರಮಗಳ ಕುರಿತ ದಾಖಲೆಗಳು ನನ್ನ ಬಳಿ ಇವೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಸಮಯದಲ್ಲಿ ನೀನು ಮಾಡಿರುವ ಅಕ್ರಮಗಳೇನು ಎನ್ನೋದು ನನಗೆ ಗೊತ್ತಿದೆ. ಕೋವಿಡ್ ಹಗರಣ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ನಾ ಅವರಿಗೆ ದಾಖಲೆಗಳನ್ನು ನೀಡುತ್ತೇನೆ. ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಬಿಜೆಪಿ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತನಾಗಿಯೇ ದುಡಿಯುವೆ. ಆದರೆ ಇಂದಿನಿಂದ ಸುಧಾಕರ್ ವಿರುದ್ಧ ಸಮರ ಸಾರಲಿದ್ದೇನೆ ಎಂದರು.
ನನಗೆ ಆತ ಮೊದಲಿನಿಂದಲೂ ತೊಂದರೆ ಕೊಡುತ್ತಾ ಬಂದಿದ್ದಾನೆ. ಆದರೂ ಸಹಿಸಿಕೊಂಡು ಬಂದಿದ್ದೇನೆ. ಆದರೆ ಈಗ ಆತನ ವೈಯಕ್ತಿಕ ದ್ವೇಷ, ಅಸೂಯೆಯಿಂದ ನನಗೆ ಸಿಕ್ಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಡೆ ತಂದಿದ್ದಾನೆ. ಇನ್ನು ಮುಂದೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಸುಧಾಕರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
Bjp sandeep reddy slams Dr Sudhakar, says will expose him with documents about his scam during Covid. Will share the documents to John Michael D'Cunha
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm