ಬ್ರೇಕಿಂಗ್ ನ್ಯೂಸ್
11-02-25 10:57 pm HK News Desk ಕರ್ನಾಟಕ
ಮೈಸೂರು, ಫೆ 11: ಸಿದ್ದರಾಮಯ್ಯ ನವೆಂಬರ್ ವರೆಗೆ ಮಾತ್ರ ಸಿಎಂ ಆಗಿರುತ್ತಾರೆ. ಅಲ್ಲಿವರೆಗೂ ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಲಿ. ಒಳಿತು ಮಾಡು ಮನುಷ್ಯ ನೀ ಇರೋದು ಮೂರು ದಿವಸ ಎಂದು ಹಾಡಿನ ಮೂಲಕ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲು ಎಳೆದಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ನಡೆದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟದ ಘಟನೆ ಡಿಜೆ ಹಳ್ಳಿ, ಕೇಜೆ ಹಳ್ಳಿ ಮಾದರಿಯಲ್ಲಿ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್.ಅಶೋಕ್ ಈ ಘಟನೆಯನ್ನು ಖಂಡಿಸಿದ್ದು, ನವೆಂಬರ್ ವರೆಗೆ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಅಲ್ಲಿವರೆಗೂ ಆದರೂ ಒಳ್ಳೆಯ ಆಡಳಿತ ಕೊಡಿ. ಸಿಎಂ ಸಿದ್ದರಾಮಯ್ಯ ಆಗೋದು ಬಿಟ್ಟು ಆಡಳಿತದತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದಿರುವ ಕಲ್ಲು ತೂರಾಟ ಪ್ರಕರಣವೇ ಸಾಕ್ಷಿಯಾಗಿದೆ. ಘಟನೆ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೇ ದಾಳಿ ನಡೆದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಅಡಳಿತ ಪಕ್ಷದ ಶಾಸಕರು, ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರದ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ ಎಂದು ಆರ್ ಅಶೋಕ್ ಹೇಳಿದರು.
ಮೈಸೂರಿನ ಘಟನೆ ತಲೆತಗ್ಗಿಸುವ ಘಟನೆಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಗಲಭೆಗೆ ಕಾರಣರಾಗಿರುವ ತಪ್ಪಿತಸ್ಥ ಮತಾಂಧರನ್ನು ಆದಷ್ಟು ಬೇಗನೆ ಬಂಧಿಸಬೇಕು. ಗೃಹ ಸಚಿವರಿಗೆ ತಮ್ಮ ಇಲಾಖೆಯ ಬಗ್ಗೆಯೇ ಇಷ್ಟವಿಲ್ಲ.ಗೃಹ ಸಚಿವರಿಗೆ ಅವರದೇ ಇಲಾಖೆಯ ಮೇಲೆ ಆಸಕ್ತಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆರಾಮಯ್ಯ ಆಗುವುದನ್ನು ಬಿಟ್ಟು ಈಗಲಾದರೂ ಆಡಳಿತದತ್ತ ಗಮನಹರಿಸಬೇಕು. ನಿಮಗಿರುವ ನವೆಂಬರ್ ವರೆಗಿನ ಅವಧಿಯಲ್ಲಾದರೂ ಒಳ್ಳೆಯ ಕೆಲಸ ಮಾಡಿ. ಇನ್ನುಳಿದ ಆರು ತಿಂಗಳ ಅವಧಿಯಲ್ಲಾದರೂ ಒಳಿತು ಮಾಡು ಮನುಷ್ಯ ನೀನಿರುವುದು ಮೂರು ದಿವಸ ಎಂದು ಸಿಎಂ ಸಿದ್ದರಾಮಯ್ಯಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಕುಟುಕಿದ್ದಾರೆ.
Leader of the Opposition in the Legislative Assembly R. Ashok has urged the Mysuru city police to immediately arrest the ‘fanatics’ involved in creating trouble outside the Udayagiri police station in the city on Monday night.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm