ಉದಯಗಿರಿ ಗಲಭೆ ಪ್ರಕರಣ ; ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಕಡೆಗೂ ಬಂಧನ, ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಗೆ ಗಡೀಪಾರು ಚಿಂತನೆ 

20-02-25 02:47 pm       HK News Desk   ಕರ್ನಾಟಕ

​​​​​ಉದಯಗಿರಿ ಪೊಲೀಸ್ ಠಾಣೆ ಮೇಲೆ‌ ಕಲ್ಲು ತೂರಲು ಯುವಕರಿಗೆ ಪ್ರಚೋದನೆ ನೀಡಿ ತಲೆಮರೆಸಿಕೊಂಡಿದ್ದ ಮುಸ್ಲಿಂ ಧರ್ಮಗುರು, ಮೌಲ್ವಿ ಮುಫ್ತಿ ಮುಷ್ತಾಕ್‌ ನನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಮೈಸೂರು, ಫೆ.20: ಉದಯಗಿರಿ ಪೊಲೀಸ್ ಠಾಣೆ ಮೇಲೆ‌ ಕಲ್ಲು ತೂರಲು ಯುವಕರಿಗೆ ಪ್ರಚೋದನೆ ನೀಡಿ ತಲೆಮರೆಸಿಕೊಂಡಿದ್ದ ಮುಸ್ಲಿಂ ಧರ್ಮಗುರು, ಮೌಲ್ವಿ ಮುಫ್ತಿ ಮುಷ್ತಾಕ್‌ ನನ್ನು ಮೈಸೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಪ್ರಮುಖ ಆರೋಪಿಯೆಂದು ಗುರುತಿಸಲಾಗಿದ್ದ ಮೌಲ್ವಿ ಮುಷ್ತಾಕ್ ಮಕ್ಬೋಲಿಯನ್ನು ಸತತ ಕಾರ್ಯಾಚರಣೆ ಬಳಿಕ ಸಿಸಿಬಿ ಪೊಲೀಸರು ಬಂಧನಕ್ಕೆ ಒಳಪಡಿಸಿದ್ದಾರೆ. ಪ್ರಚೋದನಕಾರಿ ಭಾಷಣದ ನಂತರವೇ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತ್ತು. ಈತನ ಭಾಷಣದ ತುಣುಕುಗಳು ರಾತ್ರೋರಾತ್ರಿ ಎಲ್ಲೆಡೆ ವೈರಲ್ ಆಗಿತ್ತು. ಎಲ್ಲರೂ ಒಗ್ಗಟ್ಟಾಗಿರೋಣ, ಇಸ್ಲಾಮ್ ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೌಲ್ವಿ ಯುವಕರನ್ನು ಛೂಬಿಡುವ ರೀತಿ ಅಬ್ಬರದ ಭಾಷಣ ಮಾಡಿದ್ದನು.
 
ಘಟನೆ ನಡೆದು 10 ದಿನಗಳ ಬಳಿಕ ಪ್ರಚೋದನಾಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಷ್ತಾಕ್ ಮಕ್ಬೋಲಿ ಬಂಧನವಾಗಿದ್ದು , ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಈತನ ಬಂಧನಕ್ಕಾಗಿ ಬಿಜೆಪಿ ನಾಯಕರು ಸತತ ಹೇಳಿಕೆ ನೀಡಿ ಒತ್ತಡ ತಂತ್ರ ಅನುಸರಿಸಿದ್ದರು. 

ಪೋಸ್ಟ್ ಹಾಕಿದ್ದ ಆರೋಪಿ ಗಡೀಪಾರು ಚಿಂತನೆ 

ಇದೇ ವೇಳೆ, ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿ ಸತೀಶ್ ಗಡಿಪಾರು ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ನಿನ್ನೆಯಷ್ಟೇ ಜಾಮೀನನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಸತೀಶ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪುನಃ ಗಲಭೆ ಆಗುತ್ತದೆ ಎಂದು ಹೇಳಿ ನಿರ್ದಿಷ್ಟ ಅವಧಿಯವರಗೆ ಜಿಲ್ಲೆಯಿಂದ ಹೊರಗಿರುವಂತೆ ಪೊಲೀಸರ ಸೂಚಿಸಿದ್ದಾರೆ. ಸತೀಶ್ ಹಾಗು ಅವರ ಕುಟುಂಬದ ಹಿತದೃಷ್ಠಿಯಿಂದ ಮತ್ತು ಆಸ್ತಿ- ಪಾಸ್ತಿ ರಕ್ಷಣೆ ಉದ್ದೇಶದಿಂದ‌ ಗಡಿಪಾರು ಮಾಡಲು ಚಿಂತನೆ ಎಂದು ನೋಟಿಸ್ ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

CCB police on Thursday arrested a cleric who had made provocative speeches in connection with the stone-pelting incident at Udayagiri police station. Mufti Mushtaq is the arrested accused. The police arrested the accused 11 days after the incident. A video of the cleric went viral after the incident.