ಬ್ರೇಕಿಂಗ್ ನ್ಯೂಸ್
20-02-25 06:59 pm HK News Desk ಕರ್ನಾಟಕ
ಚಿಕ್ಕಮಗಳೂರು, ಫೆ.20 : ನಗರದ ಹೊರ ವಲಯದ ದಾಸರಹಳ್ಳಿ ರಸ್ತೆಯಲ್ಲಿ ಅಕ್ಕ ಪಕ್ಕದಲ್ಲಿ ಯುವಕ ಮತ್ತು ಯುವತಿಯ ಜೋಡಿ ಶವಗಳು ಪತ್ತೆಯಾಗಿದ್ದು ನಾನಾ ರೀತಿಯ ಶಂಕೆಗೆ ಕಾರಣವಾಗಿದೆ. ಯುವತಿ ಶವ ಕಾರಿನಲ್ಲಿದ್ದರೆ, ಯುವಕ ಪಕ್ಕದಲ್ಲೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಮೃತ ಯುವಕನನ್ನ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಮಧು(29) ಮತ್ತು ಯುವತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ನಿವಾಸಿ ಪೂರ್ಣಿಮಾ(30) ಎಂದು ತಿಳಿಯಲಾಗಿದೆ. ಯುವತಿ ಮಾಗಡಿಯ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿದ್ದರು. ಮಧು ರಾಮನಗರದ ಮಾಗಡಿಯಲ್ಲಿ ಕಾರು ಡ್ರೈವ್ ಮಾಡಿಕೊಂಡಿದ್ದ.
ನಾಲ್ಕೈದು ವರ್ಷಗಳಿಂದ ಪೂರ್ಣಿಮಾ ಅವರ ಪಕ್ಕದ ಮನೆಯಲ್ಲೇ ಮಧು ವಾಸವಾಗಿದ್ದ. ಪೂರ್ಣಿಮಾ ಕುಟುಂಬದ ಜೊತೆ ಸ್ನೇಹದಲ್ಲೇ ಇದ್ದ. ಮನೆಯ ಎಲ್ಲ ಕಾರ್ಯಕ್ರಮಗಳಲ್ಲೂ ಮಧು ಭಾಗವಹಿಸುತ್ತಿದ್ದ. ಏಳೆಂಟು ತಿಂಗಳ ಹಿಂದೆ ಪೂರ್ಣಿಮಾ ತಂಗಿಯ ಮದುವೆಯಾಗಿತ್ತು. ಆ ಸಂದರ್ಭದಲ್ಲೂ ಮಧು ಮನೆ ಸದಸ್ಯನ ರೀತಿಯಲ್ಲೇ ಎಲ್ಲರೊಂದಿಗೆ ಕೆಲಸ ಮಾಡಿದ್ದ. ಮದುವೆ ಕಾರ್ಯಕ್ಕೆ ಈತನ ಕಾರನ್ನೇ ಬಾಡಿಗೆ ಪಡೆದಿದ್ದರು.
ಇತ್ತ ಪೂರ್ಣಿಮಾಗೂ ಮಧು ಹಾಗೂ ಆತನ ಕುಟುಂಬಸ್ಥರ ಜೊತೆ ಒಳ್ಳೆಯ ಸಂಬಂಧವಿತ್ತು. ಈ ಹಿಂದೆ ಪೂರ್ಣಿಮಾ ಶಿವಮೊಗ್ಗಕ್ಕೆ ಬಂದಾಗ ಮಧು ಮನೆಗೂ ಹೋಗಿದ್ದಳು. ಮಧು ತಾಯಿ-ತಂಗಿ ಜೊತೆಯೂ ಆತ್ಮೀಯವಾಗಿದ್ದಳು. ಆಗಾಗ್ಗೆ ಫೋನಿನಲ್ಲಿ ಮಾತನಾಡುತ್ತಿದ್ದಳು ಎಂದು ಮೃತ ಮಧು ತಂಗಿ ಸಿಂಧು ಹೇಳಿದ್ದಾರೆ.
ಬುಧವಾರ ಸಂಜೆ ಶಾಲೆ ಮುಗಿಸಿ ಪೂರ್ಣಿಮಾ ಮನೆಗೆ ಬರುತ್ತಿದ್ದಾಗ, ಶಾಲೆಯಿಂದ 20 ಕಿ.ಮೀ. ದೂರದಿಂದ ಊರಿಗೆ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ನೇರವಾಗಿ ಚಿಕ್ಕಮಗಳೂರಿಗೆ ಬಂದಿದ್ದು ಈ ವೇಳೆ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಯುವತಿಯ ಕುತ್ತಿಗೆ ಮೇಲೆ ಕತ್ತು ಹಿಸುಕಿರುವ ಗುರುತುಗಳು ಪತ್ತೆಯಾಗಿದ್ದು ಮಾರ್ಗ ಮಧ್ಯೆಯೇ ಕೊಲೆ ಮಾಡಿದ್ದನೋ ಅಥವಾ ಚಿಕ್ಕಮಗಳೂರಿಗೆ ಬಂದು ಕೊಲೆ ಮಾಡಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ. ಬಳಿಕ ಯುವತಿಯ ಶವ ಎಸೆಯಲು ಪ್ರಯತ್ನಿಸಿದ್ದು, ದಾಸರಹಳ್ಳಿಯ ಕಾಫಿ ತೋಟದ ಒಳ ಭಾಗದಲ್ಲಿ ಓಡಾಡಿದ್ದಾನೆ. ಮತ್ತೆ ವಾಪಸ್ ಬಂದು ಮುಖ್ಯರಸ್ತೆಯಿಂದ ಒಂದು ಕಿ.ಮೀ. ದೂರದ ಒಳಭಾಗದಲ್ಲಿ ರಸ್ತೆ ಪಕ್ಕ ಕಾರು ನಿಲ್ಲಿಸಿ, ಪಕ್ಕದಲ್ಲೇ ಇದ್ದ ಮರಕ್ಕೆ ಪೂರ್ಣಿಮಾಳ ವೇಲ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ನಂಬಲಾಗಿದೆ.
ಸದ್ಯ ಮೇಲ್ನೋಟಕ್ಕೆ ಹುಡುಗಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯನ್ನ ಕೊಲೆ ಮಾಡಿ, ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆ ಮುಂಭಾಗದಲ್ಲಿ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನಿಖೆ ಕೈಗೊಂಡಿರುವ ಪೊಲೀಸರು ಅವಳು ಎಲ್ಲಿ ಸತ್ತಿದ್ದಾಳೆ? ಆಕೆ ಕತ್ತಿನ ಮೇಲೆ ಇರುವ ಗುರುತು ಆತನದ್ದೇನಾ? ಅಥವಾ ಬೇರೆಯವರದ್ದಾ? ಪೂರ್ಣಿಮಾ ಮೈಮೇಲೆ ಇದ್ದ ಒಡವೆಗಳು ಏನಾದವು? ಮಧು ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡನಾ? ಎಂದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
Karnataka police recovered the bodies of a couple under suspicious circumstances from Dasarahalli village in the communally-sensitive Chikkamagaluru district on Thursday. According to police, preliminary investigations indicate that the couple was from Bengaluru. The body of the young woman was found inside a car, while the young man’s body was discovered hanging from a tree branch close to the vehicle.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm