Bidar accident, Prayagraj, five killed; ಬೀದರ್ ನಿಂದ ಪ್ರಯಾಗರಾಜ್ ತೆರಳಿದ್ದ ಕ್ರೂಸರ್ ಭೀಕರ ಅಪಘಾತ ; ಐವರು ಸ್ಥಳದಲ್ಲೇ ದುರ್ಮರಣ 

21-02-25 02:00 pm       Bangalore Correspondent   ಕರ್ನಾಟಕ

ಕರ್ನಾಟಕದ ಬೀದರಿನಿಂದ ಉತ್ತರ ಪ್ರದೇಶದ ಪ್ರಯಾಗರಾಜ್ ತೆರಳಿದ್ದ ಕ್ರೂಸರ್ ಅಪಘಾತಕ್ಕೀಡಾಗಿದ್ದು ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದ ಮಿರಾಜ್ ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.‌ 

ಬೆಂಗಳೂರು, ಫೆ.21: ಕರ್ನಾಟಕದ ಬೀದರಿನಿಂದ ಉತ್ತರ ಪ್ರದೇಶದ ಪ್ರಯಾಗರಾಜ್ ತೆರಳಿದ್ದ ಕ್ರೂಸರ್ ಅಪಘಾತಕ್ಕೀಡಾಗಿದ್ದು ಐವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದ ಮಿರಾಜ್ ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ.‌ 

ಬೀದರ್ ನಿಂದ ಕ್ರೂಸರ್ ನಲ್ಲಿ 14 ಜನ ಕುಂಭಮೇಳಕ್ಕೆ ತೆರಳಿದ್ದು ಮೃತ ಐವರು ಒಂದೇ ಕುಟುಂಬದವರು ಅಂತ ಹೇಳಲಾಗುತ್ತಿದೆ. ಲಕ್ಷ್ಮೀ (56), ನೀಲಮ್ಮ (55), ಸಂತೋಷ್‌ ಕುಮಾರ್ (42), ಸುನೀತಾ (42) ಮೃತ ದುರ್ದೈವಿಗಳು. 

ಪ್ರಯಾಗ್‌ರಾಜ್, ಕಾಶಿ‌ ಮುಗಿಸಿ  ಅಯೋಧ್ಯೆ ಕಡೆಗೆ ತೆರಳುತ್ತಿದ್ದಾಗ ಕ್ರೂಸರ್ ಅಪಘಾತಕ್ಕೀಡಾಗಿದೆ. ಮೃತರು ಬೀದರ್ ಜಿಲ್ಲೆಯ ಲಾಡಗೇರಿ ಬಡಾವಣೆಯ ನಿವಾಸಿಗಳೆಂದು ತಿಳಿದುಬಂದಿದೆ. ಅಪಘಾತದಲ್ಲಿ ಏಳು ಜನ ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಚಾಲಕನನ್ನು ಹಿಡಿದು ಒಟ್ಟು 14 ಜನ ಫೆ.19ರಂದು ಪ್ರಯಾಗ್‌ರಾಜ್‌ಗೆ ತೆರಳಿದ್ದರು.

Crusier accident: A deadly accident at Prayagraj claimed the lives of a family of five from Bidar. Accident occurred between truck and van. They finished their trip at kashi and were moving towards Prayagraj