ಬ್ರೇಕಿಂಗ್ ನ್ಯೂಸ್
21-02-25 10:47 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.21: ತೆಲಂಗಾಣ, ಆಂಧ್ರಪ್ರದೇಶ ಮಾದರಿಯಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ತಿಂಗಳಲ್ಲಿ ಸಂಜೆ 4 ಗಂಟೆಯ ನಂತರ ಎರಡು ಗಂಟೆ ಬೇಗ ಕರ್ತವ್ಯದಿಂದ ತೆರಳಲು ಅವಕಾಶ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದೆ.
ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ಆರ್.ಎಂ ಹುಸೇನ್ ಮತ್ತು ಸೈಯದ್ ಅಹ್ಮದ್ ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಇದಲ್ಲದೆ, ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಕ್ಷದ ಮುಸ್ಲಿಂ ಮುಖಂಡರು ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ ಎಂದವರು ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರ ಈ ರೀತಿಯ ವಿಶೇಷ ವಿನಾಯ್ತಿ ನೀಡುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರವೂ ಅಂತಹದ್ದೇ ಆದೇಶ ಹೊರಡಿಸಿತ್ತು. ಬಿಜೆಪಿ ತೀವ್ರ ವಿರೋಧ ಮಧ್ಯೆಯೂ ಎರಡು ರಾಜ್ಯಗಳಲ್ಲಿ ವಿವಾದಾತ್ಮಕ ನಡೆಯನ್ನು ಅಲ್ಲಿನ ಸರ್ಕಾರಗಳು ಇಟ್ಟಿವೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಅದೇ ಮಾದರಿಯ ಆದೇಶಕ್ಕಾಗಿ ಕೂಗು ಎದ್ದಿದೆ. ರಾಜ್ಯದ ಬೇಡಿಕೆ ಸಂಬಂಧಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರಿಗೂ ಇಬ್ಬರು ನಾಯಕರು ಪತ್ರ ಬರೆದಿದ್ದಾರೆ.
ಹಿಂದುಗಳೂ ಕೇಳಿದರೆ ಸರ್ಕಾರಿ ಕಚೇರಿ ಖಾಲಿಯಾದೀತು !
ಆದರೆ ಈ ರೀತಿಯ ನಿರ್ಧಾರ ಕೈಗೊಂಡಿದ್ದಕ್ಕೆ ಹಿಂದು ಸಂಘಟನೆಗಳ ನಾಯಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಈಗ ಎರಡು ಗಂಟೆ ಕೇಳುತ್ತಾರೆ, ಮುಂದೆ ಶುಕ್ರವಾರ ಇಡೀ ರಜೆ ಕೇಳಬಹುದು. ಎಲ್ಲರಿಗೂ ಒಂದೇ ಎನ್ನುವ ಕಾನೂನು ಇರುವಾಗ ಮುಸ್ಲಿಮರಿಗೆ ವಿಶೇಷ ನ್ಯಾಯ ಕೊಡುವುದು ಸರಿಯಲ್ಲ. ಹಾಗೆ ಮಾಡಿದರೆ ಮುಂದೆ ಹಿಂದುಗಳೂ ಶಿವರಾತ್ರಿ ಜಾಗರಣೆ, ಏಕಾದಶಿ ಜಾಗರಣೆಯೆಂದು ರಜೆ ಕೇಳಲು ಬರಬಹುದು. ಧಾರ್ಮಿಕ ಸ್ವಾತಂತ್ರ್ಯ ಎನ್ನುವುದು ಎಲ್ಲರಿಗೂ ಸಮಾನ ಇದ್ದ ಮೇಲೆ ಒಂದು ಸಮುದಾಯದ ಧಾರ್ಮಿಕ ಹಬ್ಬದ ನೆಪದಲ್ಲಿ ಸರ್ಕಾರಿ ಕರ್ತವ್ಯದಲ್ಲಿ ಎರಡು ಗಂಟೆ ಕಡಿತ ಮಾಡುವುದು ಸರಿಯಲ್ಲ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ ರೀತಿಯ ಬೇಡಿಕೆ ಬಂದಿದೆ, ಪರಿಶೀಲನೆ ಮಾಡಬೇಕಷ್ಟೆ ಎಂದಿದ್ದಾರೆ.
The Karnataka Pradesh Congress Committee (KPCC) has put forth a demand for a reduction of two working hours for Muslim government employees, proposing a model similar to that of Telangana. This suggestion has ignited discussions about employee rights and community representation within government sectors. Adding to the conversation, Sri Ram Sena leader Pramod Muthalik has criticized the Siddaramaiah-led government, accusing it of unlawfully favoring Muslim leaders in administrative roles
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm