ಬ್ರೇಕಿಂಗ್ ನ್ಯೂಸ್
02-04-25 03:07 pm Bangalore Correspondent ಕರ್ನಾಟಕ
ಬೆಂಗಳೂರು, ಎ.2 : ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು ಗುತ್ತಿಗೆದಾರರೊಬ್ಬರ ದೂರಿನಂತೆ ಲೋಕಾಯುಕ್ತ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಮನೆಯಲ್ಲಿ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಇನ್ಸ್‌ಪೆಕ್ಟರ್ ಕುಮಾರ್ ಕಿರುಕುಳ ನೀಡಿದ್ದಲ್ಲದೆ, ತಾನು ಹೇಳಿದವರಿಗೆ ಮನೆಯನ್ನೇ ಬರೆದುಕೊಡುವಂತೆ ಒತ್ತಡ ಹೇರಿದ್ದರು ಎನ್ನುವ ಬಗ್ಗೆ ದೂರು ದಾಖಲಾಗಿದೆ.

ಚೆನ್ನೇಗೌಡರ 4 ಕೋಟಿ ರೂ. ಮೌಲ್ಯದ ಮನೆಯನ್ನ ತಾನು ಹೇಳಿದವರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡುವಂತೆ ಇನ್ಸ್‌ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಇಬ್ಬರಿಗೂ ಇನ್ಸ್‌ಪೆಕ್ಟರ್ ಕಿರುಕುಳ ಕೊಟ್ಟಿದ್ದರು. ಹಳೆಯ ಕೇಸ್ ಒಂದರಲ್ಲಿ ಬಿ ರಿಪೋರ್ಟ್ ಹಾಕುತ್ತೇನೆ, ಮನೆಯನ್ನು ಬರೆದುಕೊಡಿ ಎಂದು ಇನ್ಸ್‌ಪೆಕ್ಟರ್ ಕುಮಾರ್, ಚೆನ್ನೇಗೌಡರ ಮನೆಗೆ ಪುಂಡರನ್ನ ನುಗ್ಗಿಸಿ ದಾಂಧಲೆ ಮಾಡಿಸಿದ್ದರು. ಪುಂಡರ ದಾಂಧಲೆಯನ್ನು ಚೆನ್ನೇಗೌಡ ವಿಡಿಯೋ ಮಾಡಿಕೊಂಡಿದ್ದರು.
4 ಕೋಟಿ ರೂ. ಮೌಲ್ಯದ ಮನೆಯನ್ನ 60 ಲಕ್ಷ ರೂ.ಗೆ ಕೊಡುವಂತೆ ಚೆನ್ನೇಗೌಡ ದಂಪತಿಗೆ ಒತ್ತಡ ಹೇರುತ್ತಿದ್ದರು. ಅಲ್ಲದೆ, ಮನೆ ನೋಡಿಕೊಂಡು ಬರುವಂತೆ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಜೊತೆ ಸಂಬಂಧಿಕರನ್ನ ಕಳುಹಿಸಿದ್ದರು. ಮಾ.18ರಂದು ಮಧ್ಯಾಹ್ನ 3.25ಕ್ಕೆ ಕೆಂಪು ಬಣ್ಣದ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ ಚೆನ್ನೇಗೌಡ ವಿಡಿಯೋ ಮಾಡಿದ್ದರು.
The Lokayukta conducted a raid on the residence of police Inspector Kumar of Annapoorneshwari Nagar police station, following the filing of a B report that has raised questions about his financial dealings. The raid comes in the wake of allegations surrounding a write-off related to a property valuation of 4 crores, prompting scrutiny into possible corruption and misuse of power.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm