ಬ್ರೇಕಿಂಗ್ ನ್ಯೂಸ್
29-04-25 10:45 pm Bangalore Correspondent ಕರ್ನಾಟಕ
ಬೆಂಗಳೂರು, ಏ 29 : ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಬರೋಬ್ಬರಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಇಡೀ ದೇಶ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಬೇಡಿಕೆ ಇಡುತ್ತಿದೆ. ಇತ್ತ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಾತನಾಡುವಾಗ ಯುದ್ಧ ಅನಿವಾರ್ಯತೆ ಇಲ್ಲ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯ ಬಿಜೆಪಿ ನಾಯಕರಿಗೆ ಅಸ್ತ್ರವಾಗಿದ್ದು, ಇಂದು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ;
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಅಶೋಕ್, ದೇಶದ ಪ್ರಧಾನಿಗಳ ಫೋಟೋ ಇಟ್ಟು ಅವಹೇಳನ ಮಾಡಿದ್ದು ಮಹಾ ಅಪರಾಧ. ಈಗಾಗಲೇ ಕಾಂಗ್ರೆಸ್ಸಿನ ಜಯರಾಮ್ ರಮೇಶ್, ಅವನು ಯಾವನೋ ಪುಂಗಿದಾಸ ಆರ್ ಬಿ ತಿಮ್ಮಾಪುರ್ ನಮಗೂ ಅದಕ್ಕೂ ಸಂಬಂಧ ಇಲ್ಲ ಅಂದಿದ್ದಾರೆ. ಅವರೇ ನಮ್ಮ ಹೇಳಿಕೆ ಅಲ್ಲ ಅಂದಮೇಲೆ ಕಾಂಗ್ರೆಸ್ ನವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಸಿದ್ದರಾಮಯ್ಯಗೆ ಕಾಂಗ್ರೆಸ್ ನಲ್ಲೇ ಬೆಲೆ ಕೊಡುತ್ತಿಲ್ಲ. ರಹೀಂ ಖಾನ್ ಎಷ್ಟನೇ ಕ್ಲಾಸ್ ಓದಿದ್ದಾರೋ ಗೊತ್ತಿಲ್ಲ, ಸಿಂಧು ನದಿ ನೀರನ್ನು ಹೇಗೆ ಉಪಯೋಗ ಮಾಡಿಕೊಳ್ತೀರಾ ಎಂದು ಕೇಳಿದ್ದಾರೆ. ರಹೀಂ ಖಾನ್ ಏನು ನೀರಾವರಿ ತಜ್ಞನಾ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು, ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬೆಂಬಲ ಕೊಡ್ತಿದ್ದಾರೆ. ರಹೀಂ ಖಾನೋ, ಕರೀಂ ಖಾನೋ ಅವನು ಗೊತ್ತಿಲ್ಲ. ಸಂಸದ ಓವೈಸಿಯೇ ಪಾಕಿಸ್ತಾನದ ಮೇಲೆ ಯುದ್ದ ಮಾಡಿ ಎಂದಿದ್ದಾನೆ. ಕಾಂಗ್ರೆಸ್ ನವರ ಯೋಗ್ಯತೆಗೆ ಪಾಕಿಸ್ತಾನಕ್ಕೆ ಸವಾಲು ಹಾಕುವ ಮಾತಾಡಿದ್ದಾರಾ.? ತೆಲಂಗಾಣ ಸಿಎಂ ರೇವಂತ ರೆಡ್ಡಿ ಬಳಿ ಹೋಗಿ ಪಾಠ ಹೇಳಿಸಿಕೊಂಡು ಬರಲಿ ಎಂದು ಆಕ್ರೋಶ ಹೊರಹಾಕಿದರು.
ಪಾಕಿಸ್ತಾನದಲ್ಲಿ ಫೇಮಸ್ ಅಂದರೆ ಸಿದ್ದರಾಮಯ್ಯ
ಪಾಕಿಸ್ತಾನದಲ್ಲಿ ಫೇಮಸ್ ಅಂದರೆ ಸಿದ್ದರಾಮಯ್ಯ. ಇಲ್ಲಿ ಸಿದ್ದರಾಮಯ್ಯ ಗೆಲ್ತಾ ಇರೋದೇ ಅವರಿಂದ, ಲಾಹೋರ್‌ನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಒಂದು ಲಕ್ಷ ಅಂತರದಿಂದ ಗೆಲ್ಲುತ್ತಾರೆ. ಎರಡು ವರ್ಷಗಳಲ್ಲಿ ಸಿದ್ದರಾಮಯ್ಯರನ್ನು ಅಲ್ಲಿಗೆ ಕರೆದು ಪಾಕಿಸ್ತಾನ ರತ್ನ ಪ್ರಶಸ್ತಿ ಕೊಡ್ತಾರೆ. ಇಂತಹ ಸಿದ್ದರಾಮಯ್ಯರು ಪಾಕಿಸ್ತಾನಕ್ಕೆ ಬೇಕು ಎಂದು ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
ಎಸ್ಪಿ ಇವರ ಮನೆ ಕಸ ಗುಡಿಸೊ ಆಳ?
ಶಾಂತಿದೂತ ಸಿದ್ದರಾಮಯ್ಯ ನಿನ್ನೆ ಪೊಲಿಸ್ ಅಧಿಕಾರಿ ಕಪಾಳಕ್ಕೆ ಹೊಡಿಯೋಕೆ ಹೋಗಿದ್ದ, ಎಸ್ಪಿ ಇವರ ಮನೆ ಕಸ ಗುಡಿಸೊ ಆಳ?. ಡಿಸಿನ ಕತ್ ಹಿಡಿದು ತಳ್ಳೋದು, ಎಸ್ಪಿಗೆ ಏಕವಚನದಲ್ಲಿ ಮಾತಾಡೋದು ಸಿದ್ದರಾಮಯ್ಯ. ಕೆಲಸ ಮಾಡೋದೆ ಡಿಸಿ, ಅವರನ್ನೇ ಸ್ಟೇಜ್‌ನಿಂದ ತಳ್ತಾರೆ. ಸಿಎಂ ಆಗಿ ಬಹಳ ದಿನ ಇರಲ್ಲ. ನವಂಬರ್ ಲಾಸ್ಟ್, ಅದೇ ಒತ್ತಡದಲ್ಲಿ ಸಿಎಂ ಮಾತಾಡ್ತಿದಾರೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಿಎಂ ನಡೆಗೆ ವಿರೋಧವಾಗಿದ್ದಾರೆ. ಪೊಲೀಸ್ ಇಲಾಖೆಗೆ ಸಿಎಂ ಅವಮಾನ ಮಾಡಿದ್ದಾರೆ. ಪೊಲೀಸ್ ಕುಟುಂಬಗಳಿಗೆ ನೋವಾಗಿದೆ ಎಂದು ಏಕವಚನದಲ್ಲಿ ಆರೋಪಿಸಿದರು. ಪೊಲಿಸರನ್ನ ಯಾರ್ ಬೇಕಾದ್ರು ಹೊಡಿಬಹುದು ಎಂಬ ಮೆಸೇಜ್ ಸಿಎಂ ಕೊಟ್ಟಿದಾರೆ ಎಂದರು.
Senior BJP leader R Ashok launched a scathing attack on the Congress party, accusing it of indirectly supporting Pakistan. In a controversial statement, Ashok said, “Congress leaders should be ashamed. They are indirectly backing Pakistan in their rhetoric and actions.”
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm