ಬ್ರೇಕಿಂಗ್ ನ್ಯೂಸ್
22-12-20 01:00 pm Headline Karnataka News Network ಕರ್ನಾಟಕ
ಕೋಲಾರ, ಡಿ.22 : ಉಜಿರೆಯ ಬಾಲಕನ ಅಪಹರಣ ಪ್ರಕರಣದಲ್ಲಿ ಪೊಲೀಸರು ಆರು ಮಂದಿಯನ್ನು ಕೋಲಾರದಲ್ಲಿ ಬಂಧಿಸಿದ್ದರು. ಆದರೆ, ಆರೋಪಿಗಳ ಪೈಕಿ ಮಂಜುನಾಥ್ ಅಮಾಯಕ ಎನ್ನುವ ಕೂಗನ್ನು ಕೂರ್ನಹೊಸಹಳ್ಳಿ ಗ್ರಾಮಸ್ಥರು ಮುಂದಿಟ್ಟಿದ್ದಾರೆ. ಮಂಜುನಾಥ್ ಆರೋಪಿಯಾಗಿದ್ದಕ್ಕೆ ಆತನ ಕುಟುಂಬದವರು ಈಗ ಕಣ್ಣೀರಿಡುತ್ತಿದ್ದಾರೆ.
ಬಾಲಕನಿಗೆ ಆಶ್ರಯ ನೀಡಿದ್ದ ಮಂಜುನಾಥ್ ಅಮಾಯಕ. ಮಾಲೂರಿನ ಮಹೇಶ್ ಮಂಜುನಾಥ್ ಫೋನ್ ಬಳಸಿ ಕರೆ ಮಾಡಿದ್ದಾನೆ, ಅಷ್ಟೇ. ಈ ಪ್ರಕರಣಕ್ಕೂ ಮಂಜುನಾಥನಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೋಲಾರದ ಮಾಲೂರಿನ ಕೂರ್ನಹಳ್ಳಿ ಗ್ರಾಮದಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಮಗುವನ್ನು ಅಪಹರಣ ಮಾಡಿದವರ ಜೊತೆ ಮಂಜುನಾಥನಿಗೆ ಸಂಬಂಧವೇ ಇಲ್ಲ. ಕರೆ ಮಾಡಲು ಮಹೇಶನಿಗೆ ಮೊಬೈಲ್ ಕೊಟ್ಟಿದ್ದೇ ಮಂಜುನಾಥನಿಗೆ ಮುಳುವಾಯ್ತು. ಹೀಗಾಗಿ ಪ್ರಕರಣದಲ್ಲಿ ಮಹೇಶನ ಜೊತೆಗೆ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಗೆ ಪ್ರವಾಸ ಬಂದಿದ್ದೇವೆ. ನಿಮ್ಮ ಮನೆಯಲ್ಲಿ ಒಂದು ರಾತ್ರಿ ಇರುತ್ತೇವೆ ಎಂದು ಮಹೇಶನಿಗೆ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕಮಲ್ ಕರೆ ಮಾಡಿದ್ದ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.
ಮಹೇಶ್ ಕೂರ್ನಹೊಸಳ್ಳಿ ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಇದ್ದಾಗ ಕಮಲ್ ಗ್ಯಾರೇಜ್‌ನಲ್ಲಿ ಈ ಮೊದಲು ಕೆಲಸ ಮಾಡುತ್ತಿದ್ದರು. ಆದ್ದರಿಂದ, ಇಬ್ಬರಿಗೂ ಚೆನ್ನಾಗಿ ಪರಿಚಯವಿತ್ತು. ಮಹೇಶ್ ಮತ್ತು ಮಂಜುನಾಥ್ ಪೋನ್ ಪೇಗೆ ಹಣವನ್ನು ಅಪಹರಣಕಾರರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮಂಜುನಾಥ್ ಆನ್‌ಲೈನ್ ಮೂಲಕ ಹಣವನ್ನು ತರಿಸಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಮಂಜುನಾಥ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ಇದನ್ನೂ ಓದಿ: ಉಜಿರೆ ; ಬಾಲಕನ ಅಪಹರಿಸಿ 17 ಕೋಟಿ ಬೇಡಿಕೆ !! ಬಿಟ್ ಕಾಯಿನ್ ದಂಧೆ ಶಂಕೆ
ಬಾಲಕನ ಅಪಹರಣ ; ಡಿಮ್ಯಾಂಡ್ 10 ಕೋಟಿಗೆ ಇಳಿಕೆ, ಹಾಸನದಲ್ಲಿ ಲೊಕೇಶನ್ ಪತ್ತೆ !!
ಬಾಲಕನ ಅಪಹರಿಸಿ ಸಿಕ್ಕಿಬಿದ್ದ ಖದೀಮರು ; ಕೋಲಾರದಲ್ಲಿ ನಾಲ್ವರು ಅರೆಸ್ಟ್ ! ಬಾಲಕನ ರಕ್ಷಣೆ
Kidnappers who have been arrested in the Kidnap of Eight-year-old boy from Ujre one among the accused Manjunath is said to be innocent by the Villagers in Kolar.
23-02-25 06:38 pm
Bangalore Correspondent
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm