ಬ್ರೇಕಿಂಗ್ ನ್ಯೂಸ್
23-12-20 06:13 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.23: ಬ್ರಿಟನ್ ಕೊರೊನಾ ವೈರಸ್ ಆಪತ್ತನ್ನು ಎದುರಿಸಲು ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ ಬಾರ್, ಪಬ್ ಮಾಲೀಕರ ಒತ್ತಡಕ್ಕೆ ಮಣಿದ ಸರಕಾರ ಕರ್ಫ್ಯೂ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ. ಇಂದು ಜಾರಿಗೆಯಾಗುತ್ತೆ ಎಂದಿದ್ದನ್ನು ನಾಳೆ(ಡಿ.24)ಯಿಂದ ಜ.2ರ ವರೆಗೆ ಕರ್ಫ್ಯೂ ಇರಲಿದೆ ಎಂದು ಹೇಳಿದೆ.
ಅಲ್ಲದೆ, ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಎಂದಿದ್ದನ್ನು ಬದಲಿಸಿ 11 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಎಂಬುದಾಗಿ ಬದಲಾವಣೆ ಮಾಡಿದೆ. ರಾತ್ರಿ 10ರಿಂದಲೇ ಬಂದ್ ಮಾಡಿದರೆ, ನಮ್ಮ ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಹೊಟೇಲ್, ಬಾರ್ ಮಾಲೀಕರ ಸಂಘ ಮತ್ತು ಟ್ಯಾಕ್ಸಿ ವಾಹನಗಳ ಸಂಘದವರು ಮನವಿ ಮಾಡಿದ್ದರು. ಇದನ್ನು ಪರಿಗಣಿಸಿ, ರಾತ್ರಿ 11ರಿಂದ ನೈಟ್ ಕರ್ಫ್ಯೂ ವಿಧಿಸಲು ತೀರ್ಮಾನಿಸಲಾಗಿದೆ.
ಅಲ್ಲದೆ, ರಾತ್ರಿ ವೇಳೆ ಕರ್ಫ್ಯೂ ಇದ್ದರೂ, ಬಸ್, ಆಟೋ ಇನ್ನಿತರ ಟ್ಯಾಕ್ಸಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳು, ತರಕಾರಿ, ಸರಕು ಸಾಗಾಟದ ವಾಹನಗಳ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಎಲ್ಲಾ ರೀತಿಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದಲ್ಲದೆ, ರಾತ್ರಿ ವೇಳೆ ಬಸ್, ರೈಲು, ವಿಮಾನ ಸಂಚಾರಕ್ಕೂ ಅವಕಾಶ ನೀಡಲಾಗಿದೆ.
ನೆಪಕ್ಕಷ್ಟೇ ಕರ್ಫ್ಯೂ ಜಾರಿ !
ಈ ಮೂಲಕ ಕರ್ಫ್ಯೂ ಜಾರಿ ಇದ್ದರೂ, ಜನರ ಓಡಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಲಾಗಿದೆ. ದೂರದ ಊರುಗಳಿಗೆ ತೆರಳುವ ಬಸ್, ಇನ್ನಿತರ ವಾಹನಗಳ ಸಂಚಾರಕ್ಕೂ ಬ್ರೇಕ್ ಇರುವುದಿಲ್ಲ. ಹಾಗಾಗಿ ಖಾಸಗಿ ವಾಹನಗಳ ಓಡಾಟಕ್ಕೂ ಪೂರ್ತಿ ಬ್ರೇಕ್ ಇರುವುಲ್ಲ. ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ನೀವು ಟ್ಯಾಕ್ಸಿಯೋ, ಖಾಸಗಿಯೋ, ಅಗತ್ಯಕ್ಕೆ ಸಂಚಾರ ಮಾಡುತ್ತೀರೋ ಎಂಬುದನ್ನು ಪೊಲೀಸರು ಕೇಳಿಕೊಂಡು ಕೂರಲು ಆಗೋದು ಇಲ್ಲ. ಹೀಗಾಗಿ ಈ ಬಾರಿಯ ನೈಟ್ ಕರ್ಫ್ಯೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿರಲಿದೆ ಅನ್ನೋದು ಪಕ್ಕಾ.
11 ಗಂಟೆಗೆ ಬಾರ್, ಪಬ್ ಬಂದ್ ಆಗಬೇಕೆಂಬ ಕಾನೂನು ಮೊದಲಿನಿಂದಲೂ ಇತ್ತು. ಅದನ್ನು ಪೊಲೀಸರು, ನಮ್ಮ ಆಡಳಿತ ಸರಿಯಾಗಿ ಪಾಲನೆ ಮಾಡುತ್ತಿರಲಿಲ್ಲ ಅಷ್ಟೇ. ಈಗ 11ಕ್ಕೆ ಕ್ಲೋಸ್ ಅನ್ನುವ ಹೊಸ ಮಾರ್ಗಸೂಚಿ ಹೊಸತೇನು ಬದಲಾವಣೆ ಮಾಡಲಾರದು. ಕ್ರಿಸ್ಮಸ್, ಹೊಸ ವರ್ಷಕ್ಕೆ ಗೌಜಿ, ಗಮ್ಮತ್ತಿಗೆ ಬ್ರೇಕ್ ಹಾಕಬೇಕೆಂಬ ನೆಲೆಯಲ್ಲಿ ನೈಟ್ ಕರ್ಫ್ಯೂ ವಿಧಿಸಿದ್ದರೂ, ಇದರಿಂದ ದೊಡ್ಡ ಬ್ರೇಕ್ ಬೀಳುವ ಸಾಧ್ಯತೆ ಕಡಿಮೆ ಎಂದೇ ಹೇಳಬೇಕು.
The Karnataka Government which announced night curfew from Dec 23rd has now created the high drama of postponing it to Dec 24 with all services like Car, Buses and Bars permitted to operate. Public outrage anger of asking what's the purpose of Night Curfew.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm