ಬ್ರೇಕಿಂಗ್ ನ್ಯೂಸ್
24-12-20 01:43 pm Headline Karnataka News Network ಕರ್ನಾಟಕ
ಕಲ್ಕತ್ತಾ, ಡಿ.24: ವಯಸ್ಸಿಗೆ ಬಂದ ಯುವತಿ ತನ್ನಿಚ್ಛೆ ಪ್ರಕಾರ, ಅನ್ಯಧರ್ಮೀಯನನ್ನು ಮದುವೆಯಾಗಿ ಮತಾಂತರಗೊಂಡಿದ್ದರೆ, ಅದರ ಬಗ್ಗೆ ಯಾರು ಕೂಡ ಪ್ರಶ್ನೆ ಮಾಡುವಂತಿಲ್ಲ. ಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.
ಲವ್ ಜಿಹಾದ್ ಪ್ರಕರಣದ ಹಿನ್ನೆಲೆಯಲ್ಲಿ ಬಲವಂತದ ಮತಾಂತರದ ವಿಚಾರ ಚರ್ಚೆಗೆ ಗ್ರಾಸವಾಗಿರುವಾಗಲೇ ಅಂಥಹದ್ದೇ ಪ್ರಕರಣ ಒಂದರಲ್ಲಿ ಕಲ್ಕತ್ತಾ ಹೈಕೋರ್ಟ್ ವಿಭಿನ್ನ ರೀತಿಯ ತೀರ್ಪು ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯುವತಿಯ ತಂದೆ, ತನ್ನ 19 ವರ್ಷದ ಮಗಳು ಪಲ್ಲವಿ ಸರ್ಕಾರ್ ಸೆ.15ರಿಂದ ನಾಪತ್ತೆಯಾಗಿದ್ದು ಆಕೆಯನ್ನು ಬಲವಂತದಿಂದ ಮತಾಂತರಿಸಲಾಗಿದೆ ಎಂದು ಕೋರ್ಟಿಗೆ ದೂರು ನೀಡಿದ್ದರು. ಇದಕ್ಕೂ ಮುನ್ನ, ನಾಪತ್ತೆ ಪ್ರಕರಣ ದಾಖಲಾಗಿದ್ದ ಮುರುತಿಯಾ ಪೊಲೀಸ್ ಠಾಣೆಯಲ್ಲಿ ತಾವು ತಮ್ಮಿಚ್ಚೆಯಂತೆ ಮದುವೆಯಾಗುತ್ತಿರುವ ಬಗ್ಗೆ ಯುವತಿ ಮತ್ತು ಯುವಕ ಹೇಳಿಕೆ ನೀಡಿದ್ದರು. ಅಸ್ಮೌಲ್ ಶೇಖ್ ಜೊತೆಗೆ ಮದುವೆಯಾಗುತ್ತಿದ್ದು ಮತಾಂತರ ಆಗಿರುವ ಬಗ್ಗೆ ಪಲ್ಲವಿ ಸರ್ಕಾರ್ ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿಯೂ ಹೇಳಿಕೆ ನೀಡಿದ್ದರು.
ಇದನ್ನು ಪರಿಗಣಿಸಿದ ನ್ಯಾಯಾಲಯ, ಪ್ರಾಯ ಪ್ರಬುದ್ಧರಾದವರು ತಮ್ಮ ಇಚ್ಚೆಯಂತೆ ನಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಯುವತಿ ತನ್ನ ಇಚ್ಚೆಯ ಪ್ರಕಾರ, ಹುಡುಗನ ಜೊತೆ ಹೋಗುತ್ತೇನೆ. ಹೆತ್ತವರ ಜೊತೆ ಹೋಗುವುದಿಲ್ಲ ಎಂದರೆ ನಾವು ಪ್ರಶ್ನೆ ಮಾಡುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ತನ್ನ ಮಗಳನ್ನು ಭೇಟಿಯಾಗಲು ಅವಕಾಶ ಕೊಟ್ಟಿಲ್ಲ. ಆಕೆ ಇನ್ಯಾರದ್ದೋ ಒತ್ತಾಯಕ್ಕೆ ಕಟ್ಟುಬಿದ್ದು ಇಂಥ ಹೇಳಿಕೆ ನೀಡುತ್ತಿದ್ದಾಳೆ ಎಂದು ತಂದೆ ಗೋಗರೆದರೂ, ಕೋರ್ಟ್ ಅದನ್ನು ಪರಿಗಣಿಸಲಿಲ್ಲ. 19ರ ಹರೆಯದ ಪಲ್ಲವಿ ಸರ್ಕಾರ್, ಅಸ್ಮೌಲ್ ಶೇಖ್ ಎಂಬಾತನ ಜೊತೆ ಮದುವೆಯಾಗಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದಲ್ಲದೆ ತನ್ನ ಹೆಸರನ್ನು ಆಯೆಷಾ ಎಂದು ಬದಲಿಸಿಕೊಂಡಿದ್ದಳು.
ಈ ಬಗ್ಗೆ ಕೋರ್ಟಿನಲ್ಲಿ ವಾದ ಮಂಡಿಸಿದ ತಂದೆಯ ಪರ ವಕೀಲರು, ಯುವತಿ ತಾನು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದವಳು ನಾಪತ್ತೆಯಾಗಿದ್ದಳು. ಮರುದಿನ ಆಕೆ ಮತಾಂತರಗೊಂಡು ಮದುವೆಯಾಗಿದ್ದಾಗಿ ತಂದೆಗೆ ತಿಳಿದುಬಂದಿದೆ. ಅಂತರ್ಜಾತಿ, ಅಂತರ್ ಧರ್ಮೀಯ ವಿವಾಹಕ್ಕೆ ಸ್ಪೆಷಲ್ ಮ್ಯಾರೇಜ್ ಆಕ್ಟ್ 1954 ಪ್ರಕಾರ ಅವಕಾಶವಿದೆ. ಆದರೆ, ಇಲ್ಲಿ ಒಂದೇ ದಿನದಲ್ಲಿ ಧರ್ಮ ಬದಲಿಸಿಕೊಂಡಿದ್ದಲ್ಲದೆ, ತನ್ನ ಹೆಸರನ್ನೂ ಬದಲಿಸಿದ್ದಾಳೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಲವ್ ಜಿಹಾದ್ ಮಾದರಿಯ ಪ್ರಕರಣವೇ ಆಗಿದ್ದರೂ, ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಕೋರ್ಟ್ ಅಭಿಪ್ರಾಯ ನೀಡಿರುವುದು ಇಲ್ಲಿ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಇದೇ ರೀತಿಯ ಪ್ರಕರಣದಲ್ಲಿ ಮದುವೆಯ ಕಾರಣಕ್ಕೆ ಮತಾಂತರವಾಗಲು ಅವಕಾಶ ನೀಡುವುದಿಲ್ಲ ಎಂದು ತೀರ್ಪು ನೀಡಿತ್ತು. ಇದೇ ತೀರ್ಪಿನ ಆಧಾರದಲ್ಲಿ ವಿವಿಧ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಮುಂದಾಗಿವೆ.
No court can interfere if an adult woman decides to marry and convert to another religion of her own free will, the Calcutta High Court on Monday said.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm