ಬ್ರೇಕಿಂಗ್ ನ್ಯೂಸ್
24-12-20 05:23 pm Headline Karnataka News Network ಕರ್ನಾಟಕ
ಬೆಂಗಳೂರು, ಡಿ.24: ಬ್ರಿಟನ್ ವೈರಸ್ ಸೋಂಕು ಹಿನ್ನೆಲೆಯಲ್ಲಿ ಡಿ.24ರಿಂದ ರಾಜ್ಯದಾದ್ಯಂತ ಹೇರಲಾಗಿದ್ದ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದೇ ದಿನಕ್ಕೆ ವಾಪಸ್ ಪಡೆದಿದೆ.
ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಹೊಟೇಲ್, ಬಾರ್ ಮಾಲಕರಿಂದ ವಿರೋಧ ವ್ಯಕ್ತವಾಗಿತ್ತು. ಆಟೋ, ಟ್ಯಾಕ್ಸಿಗಳ ಮಾಲೀಕರ ಸಂಘವೂ ವಿರೋಧ ಮಾಡಿತ್ತು. ಇದೇ ವೇಳೆ, ಬೆಂಗಳೂರು ಕ್ರೈಸ್ತ ಬಿಷಪ್, ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಾತ್ರಿ ಕರ್ಫ್ಯೂ ಯಾಕೆ ಎಂದು ಪ್ರಶ್ನೆ ಮಾಡಿದ್ದರು. ಇವೆಲ್ಲ ಟೀಕೆಗಳ ಮಧ್ಯೆ ಕರ್ಫ್ಯೂ ಸಡಿಲಿಕೆ ಮಾಡಿ ರಾಜ್ಯ ಸರಕಾರ ನಿನ್ನೆ ಸಂಜೆ ಆದೇಶ ಮಾಡಿತ್ತು. ಸಾರಿಗೆ ಬಸ್, ಆಟೋ ಇನ್ನಿತರ ಟ್ಯಾಕ್ಸಿಗಳಿಗೆ ಅವಕಾಶ ನೀಡಿದ್ದಲ್ಲದೆ, ರಾತ್ರಿ 11 ರ ವರೆಗೂ ಬಾರ್, ಹೊಟೇಲ್, ಪಬ್ ಗಳಿಗೆ ಅವಕಾಶ ನೀಡಿತ್ತು.

ಆದರೆ, ಜನರು ಮಲಗಿದ ಸಮಯದಲ್ಲಿ ಕರ್ಫ್ಯೂ ಯಾಕೆಂದು ಕೆಲವು ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಕಾಟಾಚಾರಕ್ಕೆ ಕರ್ಫ್ಯೂ ಹೇರಬೇಕೇ ಎಂಬ ಪ್ರಶ್ನೆಗೆ, ಸರಕಾರದ ಬಳಿ ಉತ್ತರ ಇರಲಿಲ್ಲ. ರಾತ್ರಿ ಜನ ವಾಹನಗಳಲ್ಲಿ ಓಡಾಟ ಮಾಡಬಹುದು, ರಸ್ತೆಯಲ್ಲಿ ನಡೆದಾಡುವಂತಿಲ್ಲ ಎಂಬ ನೀತಿ ಯಾವ ಸೀಮೆಯ ಕರ್ಫ್ಯೂ ಎಂದು ಪ್ರಶ್ನೆ ಮಾಡಿದ್ದರು.
ಮಾಧ್ಯಮಗಳು ಮತ್ತು ಸಾರ್ವಜನಿಕರ ಟೀಕೆ, ಟಿಪ್ಪಣಿಯಿಂದ ಬೇಸತ್ತ ಸಿಎಂ ಯಡಿಯೂರಪ್ಪ ಕರ್ಫ್ಯೂ ಹೇರುವ ಆದೇಶವನ್ನೇ ಹಿಂದೆಗೆದಿದ್ದಾರೆ. ರಾತ್ರಿ ಕರ್ಫ್ಯೂ ಹೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ರಾಜ್ಯದಲ್ಲಿ ಬ್ರಿಟನ್ ಮೂಲದ ಸೋಂಕು ಹರಡುವ ಭಯ ವ್ಯಕ್ತವಾಗಿತ್ತು. ಇದೇ ವೇಳೆ, ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಮುತುವರ್ಜಿಯಿಂದ ಬ್ರಿಟನ್ ನಿಂದ ಆಗಮಿಸಿದವರನ್ನು ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಿತ್ತು. ಇದರ ವರದಿಯಲ್ಲಿ ಬಹುತೇಕ ನೆಗೆಟಿವ್ ಬಂದಿದ್ದು ಕರ್ಫ್ಯೂ ಬೇಡ ಎನ್ನುವ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗುತ್ತಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಈಗಾಗ್ಲೇ ಪಾರ್ಟಿಗಳನ್ನು ನಿಷೇಧ ಮಾಡಲಾಗಿದೆ. ಇಂಥ ಸಮಯದಲ್ಲಿ ರಾತ್ರಿ ಕರ್ಫ್ಯೂ ಅಗತ್ಯವಿಲ್ಲ ಎಂದು ಸಂಪುಟದ ಸಚಿವರು ಅಭಿಪ್ರಾಯ ಪಟ್ಟಿದ್ದು ಕರ್ಫ್ಯೂ ಹಿಂತೆಗೆಯಲು ಕಾರಣ ಎನ್ನಲಾಗಿದೆ. ಕರ್ಫ್ಯೂ ವಾಪಸ್ ಪಡೆದ ಬಗ್ಗೆ ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಆದರೆ, ಎರಡು ದಿನಗಳಲ್ಲಿ ಕರ್ಫ್ಯೂ ಹೇರುವ ಬಗ್ಗೆ ಮೂರು ಬಾರಿ ವಿಭಿನ್ನ ಆದೇಶ ನೀಡುವ ಮೂಲಕ ಸಿಎಂ ಯಡಿಯೂರಪ್ಪ ನಗೆಪಾಟಲಿಗೀಡಾಗಿದ್ದಾರೆ.
The Karnataka which had imposed Night Curfew in state has cancelled the curfew. People of state Mock the government as "Comedy Curfew" that was imposed from Dec 24th to Jan 2nd, 2021.
16-01-26 04:35 pm
HK News Desk
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm