ಬ್ರೇಕಿಂಗ್ ನ್ಯೂಸ್
26-08-25 10:47 pm HK News Desk ಕರ್ನಾಟಕ
ಹೊಸಪೇಟ, ಆ 26 : ಧರ್ಮಸ್ಥಳ ವಿಚಾರವಾಗಿ ಬುರುಡೆ ಬಿಡಲಾಗಿದೆ. ಲವ್ ಜಿಹಾದ್ ಮಾದರಿಯಲ್ಲಿ ಇದೊಂದು ಮತಾಂತರ ಜಿಹಾದ್ ಆಗಿದೆ. ಧರ್ಮಸ್ಥಳದ ಕುರಿತು ಷಡ್ಯಂತ್ರ ನಡೆಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಹೊರಟಿದ್ದಾರೆ. ಈ ಸರ್ಕಾರಕ್ಕೆ ಆದಾಯ ಇಲ್ಲ, ಧರ್ಮಸ್ಥಳಕ್ಕೆ ತಿರುಪತಿಯಂತೇ ಆದಾಯ ಬರುತ್ತದೆ. ಹಾಗಾಗಿ, ಈ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಲು ಈ ಕೆಲಸ ಮಾಡಲಾಗುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಹುನ್ನಾರ ಅಡಗಿದೆ. ಹಿಂದೂ ದೇವಾಲಯಗಳು ಟಾರ್ಗೆಟ್ ಆಗಿವೆ. ಚರ್ಚ್ ಹಾಗೂ ಮಸೀದಿ ಕಡೆ ಕಾಂಗ್ರೆಸ್ನವರು ಹೋಗುವುದಿಲ್ಲ. ಇದರ ಹಿಂದೆ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿದೆ. ಮಾಸ್ಕ್ಮ್ಯಾನ್, ಸುಜಾತಾ ಭಟ್ ಇವರೆಲ್ಲ ಪಾತ್ರಧಾರಿಗಳು. ಮಾಸ್ಕ್ ಹಾಕಿರುವವನ ಹಿಂದೆ ಸರ್ಕಾರ ಇದೆ. ಅವನಿಗೆ ಮುಸುಕು ಹಾಕಿಸಿದ್ದು ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಗತಿಪರರೂ ಇದರ ಹಿಂದೆ ಇದ್ದಾರೆ. ಬುರುಡೆ ಕಥೆ ಹೊರಗಡೆ ಬಂದ ಕೂಡಲೇ ಪ್ರಗತಿಪರರು ಕಾಣೆಯಾಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ, ಜನರ ತೆರಿಗೆ ದುಡ್ಡು ಖರ್ಚು ಮಾಡಿದೆ. ನಮ್ಮ ಸರ್ಕಾರ ಇದ್ದಾಗಲೂ ಇಂತಹ ದೂರು ಬಂದಿದ್ದವು. ನಾವು ಎಸ್ಐಟಿ ರಚನೆ ಗೊಡವಿಗೆ ಹೋಗಲಿಲ್ಲ. ಈ ಚಿನ್ನಯ್ಯ ಎಂಥವನು ಎಂಬುದು ಮಂಡ್ಯದ ನಾಗಮಂ ಗಲದ ಜನತೆಗೆ ಗೊತ್ತು. ಹೀಗಿದ್ದರೂ ಸರ್ಕಾರ ಮುಸುಕು ಹಾಕಿಸಿದೆ. ಯಾವನೋ ಒಬ್ಬ ದಾರಿಯಲ್ಲಿ ಹೋಗುವವನ ಮಾತು ಕೇಳಿ ಎಸ್ಐಟಿ ರಚನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Senior BJP leader and Leader of Opposition R. Ashoka has alleged a larger conspiracy behind the ongoing controversy surrounding Dharmasthala temple. He accused the Congress-led state government of deliberately trying to bring Dharmasthala under the control of the Muzrai (Religious Endowment) Department for financial gain.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
18-09-25 08:14 pm
HK News Desk
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm