ಬ್ರೇಕಿಂಗ್ ನ್ಯೂಸ್
02-01-21 04:34 pm Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಜ.2: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತನ್ನ ರಾಜೀನಾಮೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹತ್ತು ವರ್ಷಗಳ ಸೇವೆಯ ಬಳಿಕ ತನಗೆ ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವುದು ಇಷ್ಟವಾಗುತ್ತಿರಲಿಲ್ಲ. ಸಾಮಾನ್ಯ ಮನುಷ್ಯನಾಗಿ ತನ್ನ ಊರಿಗೆ ಹೋಗಿ ರೈತನಾಗಿರಲು ಇಷ್ಟಪಟ್ಟಿದ್ದೆ. ಈ ಬಗ್ಗೆ ಸಿದ್ದಾರ್ಥ ಬಳಿ ಹೇಳಿದಾಗ, ಮುಕ್ತ ಮನಸ್ಸಿನಿಂದ ಸಪೋರ್ಟ್ ಮಾಡಿದ್ದರು. ನನಗೆ ಅಂದು ನೈತಿಕ ಬೆಂಬಲ ನೀಡಿದ್ದು ಸಿದ್ದಾರ್ಥ ಮಾತ್ರ ಎಂದು ಅಣ್ಣಾಮಲೈ ಹೇಳಿದ್ದಾರೆ.
ಕೆಫೆ ಕಾಫಿ ಡೇ ಮಾಲೀಕ ವಿ.ಜಿ. ಸಿದ್ದಾರ್ಥ ಸ್ಮರಣಾರ್ಥ ಮೂಡಿಗೆರೆಯ ಕುದುರೆಗುಂಡಿಯಲ್ಲಿ ಆಪ್ತರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಣ್ಣಾಮಲೈ, ಸಿದ್ದಾರ್ಥ ಮತ್ತು ತಮ್ಮ ನಡುವಿನ ಆಪ್ತ ಗೆಳೆತನವನ್ನು ಹೇಳಿಕೊಂಡರು. ರಾಜಿನಾಮೆ ಪ್ರಸ್ತಾಪ ಇಟ್ಟಾಗ ಸಿದ್ದಾರ್ಥ ನನಗೆ ನೈತಿಕ ಬೆಂಬಲ ನೀಡಿದ್ದರು. ಏನು ಬೇಕೋ ಎಲ್ಲ ರೀತಿಯ ಬೆಂಬಲವನ್ನೂ ನೀಡುತ್ತೇನೆ ಎಂದಿದ್ದರು. ನಾವಿಬ್ಬರು ಸಿದ್ದಾರ್ಥ ಅವರ ಕಚೇರಿಯಲ್ಲಿ ಮೂರೂವರೆ ಗಂಟೆ ಕಾಲ ಕುಳಿತು ರಾಜಿನಾಮೆ ಪತ್ರ ರೆಡಿ ಮಾಡಿದ್ದೆವು ಎಂದು ಸ್ಮರಿಸಿದರು.
ಐಜಿ ಅಧಿಕಾರಿಯಾಗಿದ್ದು ಕಾರಿನಲ್ಲಿ ಹೋಗುವಾಗ ಒಬ್ಬರು ಬಾಗಿಲು ತೆಗೆಯುವುದು, ನಾಲ್ಕಾರು ಮಂದಿ ಪೊಲೀಸರು ಸೆಲ್ಯೂಟ್ ಹೊಡೆಯುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಎಸಿ ರೂಮಿನಲ್ಲಿ ಕುಳಿತುಕೊಳ್ಳುವುದು ಇಷ್ಟ ಆಗುತ್ತಿರಲಿಲ್ಲ. ನಾನು ಈ ಬಗ್ಗೆ ಸಿದ್ದಾರ್ಥ ಬಳಿ ಹೇಳಿಕೊಂಡಿದ್ದೆ. ಜನಸಾಮಾನ್ಯರ ಜೀವನ ಶೈಲಿಯನ್ನು ಬದಲಿಸಬೇಕೆಂಬ ನನ್ನ ನಿಲುವನ್ನು ಹೇಳಿಕೊಂಡಾಗ, ನಾನು ರಾಜಿನಾಮೇ ನೀಡುತ್ತಿರುವ ಉದ್ದೇಶವನ್ನು ತಿಳಿದು ಸಿದ್ದಾರ್ಥ್ ಸಪೋರ್ಟ್ ಮಾಡಿದ್ದರು. ರಾಜಿನಾಮೆ ನೀಡುವ ದಿನಾಂಕದ ಬಗ್ಗೆಯೂ ಜೊತೆಯಾಗಿ ಚರ್ಚಿಸಿದ್ದೆವು. ರಾಜಿನಾಮೆ ನೀಡಿದ ದಿನ ಸಿದ್ದಾರ್ಥ ಮುಂಬೈನಲ್ಲಿದ್ದರು. ಫೋನ್ ಮಾಡಿ ಮಾತನಾಡಿದ್ದರು. ಗೌರವಯುತ ಹುದ್ದೆಯನ್ನು ತ್ಯಜಿಸಿ ಹೋಗುವ ನನ್ನ ನಿರ್ಧಾರದ ಬಗ್ಗೆ ಜನರು ಮೂರ್ಖನೆಂದು ಹೇಳಿಯಾರು. ಆದರೆ, ನಿನ್ನ ರಾಜಿನಾಮೆಯ ಉದ್ದೇಶವನ್ನು ತಿಳಿದು ನಾನು ಹಾಗೆ ಹೇಳಲಾರೆ ಎಂದಿದ್ದರು. ಅವರು ಮೇಲೆ ಹೋದರೂ ನನ್ನನ್ನು ಗಮನಿಸುತ್ತಾ ಇರುತ್ತಾರೆ. ಅವರು ನನ್ನ ಜೊತೆಗೇ ಯಾವತ್ತೂ ಇರುತ್ತಾರೆ. ನನಗೆ ಹಿಂದೆ ಗೈಡ್ ಮಾಡಿದ್ದರು, ಮುಂದೆಯೂ ಅದೇ ರೀತಿಯ ಗೈಡ್ ಮಾಡುತ್ತಲೇ ಇರುತ್ತಾರೆ ಎಂದು ಭಾವುಕರಾಗಿ ನುಡಿದರು.
Video:
After serving police department for ten years, I realised that I was not comfortable to work from the air-conditioned environs of the offices of the deputy inspector general and inspector general of police. When I expressed this feeling, Brother Siddhartha was the only one who gave me the moral courage to resign, duly promising that he would be there to support me.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm