ಬ್ರೇಕಿಂಗ್ ನ್ಯೂಸ್
04-01-21 01:20 pm Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಜ.4 : ರಾತ್ರಿ ರಿಸೆಪ್ಷನ್ ವೇಳೆಗೆ ಹಾಜರಿದ್ದ ವರ ಬೆಳಿಗ್ಗೆ ಮುಹೂರ್ತದ ಹೊತ್ತಲ್ಲಿ ನಾಪತ್ತೆಯಾಗಿದ್ದ. ಮದುವೆ ಮಂಟಪದಲ್ಲಿ ಸಿದ್ದವಾಗಿ ನಿಂತಿದ್ದ ಯುವತಿ ಗೋಳಿಡುವಂತಾಗಿತ್ತು. ಗೋಳು ಕೇಳಿದ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಯುವತಿಗೆ ತಾಳಿಕಟ್ಟಿ ಬಾಳು ನೀಡಿದ್ದಾನೆ.
ಇಲ್ಲಿನ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಮತ್ತು ನವೀನ್ ಎಂಬ ಸಹೋದರರಿಬ್ಬರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಿಂದ ಹುಡುಗಿ ನಿಶ್ಚಯವಾಗಿತ್ತು. ಅದರಂತೆ ಹಿಂದಿನ ದಿನ ರಾತ್ರಿ ರಿಸೆಪ್ಷನ್ ನಡೆದಿತ್ತು. ರಾತ್ರಿ ಇದ್ದ ವರ ನವೀನ್ ಬೆಳಗ್ಗೆ ಮುಹೂರ್ತದ ಹೊತ್ತಿನಲ್ಲೇ ನಾಪತ್ತೆಯಾಗಿದ್ದ.
ವಿಷಯ ತಿಳಿಯುತ್ತಿದ್ದಂತೆ ಸೇರಿದ್ದ ಜನರೆಲ್ಲ ದಿಕ್ಕು ತೋಚದೆ ಮಾತಾಡುತ್ತಿದ್ದರು. ಇದೇ ವೇಳೆ, ಮದುವೆಗೆ ಬಂದಿದ್ದ ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಚಂದ್ರು ಎಂಬವರು ಯುವತಿಯನ್ನು ವರಿಸಲು ಮುಂದಾಗಿದ್ದಾರೆ. ಮದುವೆಗೆ ಸಿದ್ಧಳಾಗಿ ಮಂಟಪವೇರಿದ್ದ ಸಿಂಧು ಎಂಬ ಯುವತಿಯನ್ನು ಕೊನೇ ಕ್ಷಣದಲ್ಲಿ ತಾಳಿಕಟ್ಟಿ ಅಚ್ಚರಿ ಮೂಡಿಸಿದ್ದಾರೆ.
ನವೀನ್ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ನನ್ನನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾದರೆ ಮದುವೆ ಮಂಟಪಕ್ಕೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನವೀನ್ ಗೆಳತಿ ಬೆದರಿಕೆ ಹಾಕಿದ್ದಳು. ಇದರಿಂದ ಮರ್ಯಾದೆ ಮತ್ತು ಗೌರವ ಮಣ್ಣು ಪಾಲಾಗುತ್ತದೆ ಎಂದು ನವೀನ್ ದಿಢೀರ್ ನಾಪತ್ತೆಯಾಗಿದ್ದ. ಅಲ್ಲದೆ, ಪ್ರೀತಿಸುತ್ತಿದ್ದ ಯುವತಿಯನ್ನು ತುಮಕೂರಿಗೆ ಬರಲು ತಿಳಿಸಿ ಮದುವೆ ಮಂಟಪದಿಂದಲೇ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.
ಇದರಿಂದ ಮಧುಮಗಳಾಗಿ ಸಿಂಗಾರಗೊಂಡಿದ್ದ ಸಿಂಧು ಮಂಟಪದಲ್ಲಿ ಕಣ್ಣಿರು ಹಾಕುವಂತಾಗಿತ್ತು. ಆಕೆಯ ಹೆತ್ತವರು, ಸಂಬಂಧಿಕರೆಲ್ಲ ಗೋಳಿಡುವುದನ್ನು ನೋಡಿದ ಯುವಕ ಚಂದ್ರು, ತಾನೇ ಯಾಕೆ ಮದುವೆಯಾಗಬಾರದೆಂದು ಮುಂದೆ ಬಂದಿದ್ದಾನೆ. ಇನ್ನೇನು ಹಸೆಮಣೆ ಏರುವ ಹೊತ್ತಲ್ಲಿ ಆತಂಕಕ್ಕೆ ಒಳಗಾಗಿದ್ದ ಸಿಂಧುಗೆ ಚಂದ್ರು ಹೊಸ ಬದುಕು ನೀಡಿದ್ದಾನೆ. ಸಿಂಧು ಬಾಳಲ್ಲಿ ಚಂದ್ರು ಹೊಸ ಬೆಳಕು ನೀಡಿದ್ದು ಸೇರಿದ್ದ ಜನರಲ್ಲಿ ಸಂತಸ ಮೂಡಿಸಿತ್ತು.
Groom went missing on the day of Wedding in Chikmagalur but surprisingly a BMTC conductor bestowed life to the girl by winning the hearts of the people.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm