ಬ್ರೇಕಿಂಗ್ ನ್ಯೂಸ್
07-01-21 11:06 pm Dilip : Bengaluru Correspondent ಕರ್ನಾಟಕ
ಬೆಂಗಳೂರು, ಜನವರಿ 07: ನಕಲಿ ಅರ್ ಎಸ್ ಎಸ್ ನಾಯಕ ಸ್ವಾಮಿ ಅಲಿಯಾಸ್ ಯುವರಾಜ್ ಖಾತೆಯಿಂದ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿರುವ ಪ್ರಕರಣ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ತನಿಖೆ ಕಂಟಕ ಎದುರಾಗಿದೆ.
ಸ್ವಾಮಿ ಖಾತೆಯಿಂದ ಹಣ ವರ್ಗಾವಣೆ ಪ್ರಕರಣ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಿದ್ದಾರೆ. ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಿರುವುದನ್ನು ಖಚಿತ ಪಡಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ , ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ನಕಲಿ ಅರ್ ಎಸ್ ಎಸ್ ನಾಯಕ ಸ್ವಾಮಿ ಅಲಿಯಾಸ್ ಯುವರಾಜ್ ಬಂಧನಕ್ಕೆ ಒಳಗಾಗಿದ್ದ. ಬಂಧನ ಬಳಿಕ ಆತನ ವಿರುದ್ಧ ಎಂಟು ದೂರು ಬಂದಿದ್ದವು. ಹೆಚ್ಚಿನ ತನಿಖೆ ನಡೆಸಿದಾಗ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಸಹೋದರ ರವಿರಾಜ್ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ವರ್ಗಾವಣೆ ಆಗಿರುವ ಅಂಶ ಬೆಳಕಿಗೆ ಬಂದಿತ್ತು. ರವಿರಾಜ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ರಾಧಿಕಾ ಕುಮಾರಸ್ವಾಮಿಯ ಹೆಸರು ಬಹಿರಂಗವಾಗಿತ್ತು.
ಇದು ಸುದ್ದಿಯಾಗುತ್ತಿದ್ದಂತೆ ರಾಧಿಕಾ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದರು. ಜ್ಯೋತಿಷಿಯಾಗಿ ಸ್ವಾಮಿ ನಮ್ಮ ಕುಟುಂಬಕ್ಕೆ ಪರಿಚಯ. ನಾಟ್ಯರಾಣಿ ಸಿನಿಮಾ ನಿರ್ಮಾಣಕ್ಕಾಗಿ ನಾನು ಅವರ ಬಳಿ ಪ್ರಸ್ತಾಪಿಸಿದ್ದೆ. ಹೀಗಾಗಿ ಅವರು ನನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ವರ್ಗಾವಣೆ ಮಾಡಿದ್ದು ಯಾರು ಎಂದು ಪರಿಶೀಲಿಸಲು ಹೋಗಿಲ್ಲ ಎಂದು ಸ್ಪಷ್ಡಪಡಿಸಿದ್ದರು. ಇದಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ಸೂಚಿಸಿ ನೋಟಿಸ್ ನೀಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಸ್ವಾಮಿ ಜತೆಗೂಡಿ ಯಾವುದಾದರೂ ಡೀಲಿಂಗ್ ಮಾಡಿದ್ದರಾ ? ಇಲ್ಲವೇ ನಿಜವಾಗಿಯೂ ಸಿನಿಮಾ ನಿರ್ಮಾಣಕ್ಕೆ ಸಾಲ ಪಡೆದಿದ್ದರಾ ಎಂಬುದನ್ನು ಸಾಕ್ಷಿ ಸಮೇತ ರಾಧಿಕ ಸ್ಪಷ್ಟನೆ ನೀಡಬೇಕಾಗುತ್ತದೆ. ಸ್ವಾಮಿ ಖಾತೆಯಿಂದ ಅಷ್ಡು ದೊಡ್ಡ ಮೊತ್ತ ಪಡೆದಿರುವ ಬಗ್ಗೆ ಯಾವುದಾದರೂ ಕರಾರು ಮಾಡಿಕೊಂಡಿದ್ದಲ್ಲಿ ಬಚಾವ್ ಆಗಲಿದ್ದಾರೆ. ಇಲ್ಲದಿದ್ದಲ್ಲಿ ರಾಧಿಕಾ ಅವರಿಗೆ ಕಷ್ಡ ಎದುರಾಗಲಿದೆ.
ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಢಿ ವೇಳೆ ನನ್ನ ಖಾತೆಗೆ ಯಾರಿಂದ ಹಣ. ಬಂದಿದೆಯೋ ಪರಿಶೀಲಿಸೋಕೆ ಹೋಗಿಲ್ಲ. ಸ್ವಾಮಿ ಅವರ ಅಣ್ಣನ ಖಾತೆಯಿಂದ ಬರಲಿದೆ ಎಂದು ಅವರು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ಸಿಸಿಬಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಬಂದರೆ ಅದರ ಬಗ್ಗೆ ಯಾರು ತಾನೇ ಪರಿಶೀಲಿಸುವುದಿಲ್ಲ ? ರಾಧಿಕಾ ಒಬ್ಬ ನಟಿ. ಅಷ್ಟು ಮೊತ್ತ ಹಣ ಬ್ಯಾಂಕ್ ಖಾತೆಗೆ ಬಂದಾಗ ಯಾಕೆ ಪರಿಶೀಲಿಸಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನು ಸ್ವಾಮಿ ಬಂಧನವಾದ ಕೂಡಲೇ ಅವರ ಖಾತೆಯಿಂದ ಹಣ ಬಂದಿರುವ ಬಗ್ಗೆ ರಾಧಿಕಾ ಮೊದಲೇ ಸಿಸಿಬಿ ಪೊಲೀಸರಿಗೆ ನೀಡಬಹುದಿತ್ತಾದರೂ ಇಷ್ಡು ದಿನ ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ವಿಚಾರಣೆ ವೇಳೆ ರಾಧಿಕಾ ನೀಡುವ ಹೇಳಿಕೆಯನ್ನು ಪೊಲೀಸರು ಗುಪ್ತವಾಗಿ ಇಟ್ಟುಕೊಳ್ಳಲಿದ್ದಾರೆ. ರಾಧಿಕಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಸ್ವಾಮಿಯನ್ನು ವಿಚಾರಣೆ ನಡೆಸಲಿದ್ದಾರೆ. ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದರೆ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಡ ಎದುರಾಗಲಿದೆ.
The CCB Police issue notice to Kannada Actress cum producer Radhika Kumaraswamy over raud case of receiving Rs 1.25 crore from S. Yuvaraj Swamy Yadav.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm