ಬ್ರೇಕಿಂಗ್ ನ್ಯೂಸ್
09-01-21 01:03 pm Bangalore Correspondent ಕರ್ನಾಟಕ
ಬೆಂಗಳೂರು, ಜ.9: ಸಂಚಾರ ನಿಯಮ ಉಲ್ಲಂಘನೆ ಮಾಡುವ ಮಂದಿಯನ್ನ ರಸ್ತೆಯಲ್ಲಿ ತಡೆದು ದಂಡ ವಿಧಿಸುವ ಕ್ರಮಕ್ಕೆ ಬೆಂಗಳೂರು ಪೋಲಿಸರು ತಿಲಾಂಜಲಿ ಇಟ್ಟಿದ್ದಾರೆ.
ಇದರಿಂದ ನಡು ರಸ್ತೆಯಲ್ಲಿ ಬೈಕ್ ಸವಾರರಿಗೆ ಆಗುತ್ತಿದ್ದ ದೊಡ್ಡ ಕಿರಿಕಿರಿ ತಪ್ಪಿದೆ. ಹಾಗಂತ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನಿಮ್ಮ ವಿರುದ್ಧ ಡಿಜಿಟಲ್ ಕೇಸ್ ದಾಖಲಾಗಲಿದ್ದು ನೀವು ಸಂಚಾರಿ ನಿಯಮ ಉಲ್ಲಂಘಿಸಿದರೆ ನಿಮ್ಮ ವಿಳಾಸಕ್ಕೆ ನೋಟಿಸ್ ಬರಲಿದೆ. ಇದಕ್ಕೆ ನೀವು ದಂಡವನ್ನೂ ಪಾವತಿಸಬೇಕಾಗುತ್ತದೆ.

ಬೆಂಗಳೂರು ಮಹಾನಗರದ ರಸ್ತೆಗಳ ಮಧ್ಯೆ ವಾಹನ ತಡೆಯುವುದರಿಂದ ಟ್ರಾಫಿಕ್ ಸಮಸ್ಯೆ ಆಗುವ ಕಾರಣ ಮಾರ್ಗ ಮಧ್ಯೆ ತಡೆದು ನಿಲ್ಲಿಸುವ ಕೆಲಸ ಮಾಡಬೇಡಿ ಎಂದು ಪೊಲೀಸ್ ಇಲಾಖೆಯಿಂದ ಸೂಚನೆ ಬಂದಿದೆ. ಬದಲಿಗೆ ಯಾರು ನಿಯಮ ಉಲ್ಲಂಘನೆ ಮಾಡುತ್ತಾರೋ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ಪೋಲಿಸ್ ಇಲಾಖೆ ಸೂಚನೆ ನೀಡಿದೆ.
ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ, ದಂಡ ವಿಧಿಸುವುದರ ಬಗ್ಗೆ ಸೊಶೀಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಭಾರೀ ಟೀಕೆಯೂ ಸಾರ್ವಜನಿಕರ ಕಡೆಯಿಂದ ಕೇಳಿಬಂದಿತ್ತು. ಇದರ ಪರಿಣಾಮ ಎಂಬಂತೆ ಪೋಲಿಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಇದರಂತೆ, ನಿಯಮ ಉಲ್ಲಂಘನೆ ಮಾಡುವ ವಾಹನಗಳನ್ನ ಯಾವುದೇ ಕಾನ್‌ಸ್ಟೇಬಲ್ ಅಡ್ಡಗಟ್ಟಿ ನಿಲ್ಲಿಸಬಾರದು. ಬದಲಿಗೆ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿ, ಬೈಕ್ ನಂಬರ್ ಎಂಟ್ರಿ ಮಾಡಿಕೊಂಡು ಕೇಸ್ ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಆದರೆ ದಿನಕ್ಕೆ ಕನಿಷ್ಟ 25 ಈ ರೀತಿಯ ಕೇಸ್ ದಾಖಲಿಸಬೇಕೆಂಬ ಟಾರ್ಗೆಟ್ ಅನ್ನು ಪೊಲೀಸರಿಗೆ ನೀಡಲಾಗಿದೆ.
ರಸ್ತೆಯಲ್ಲಿ ದಂಡ ವಿಧಿಸುವ ಬದಲು ಆರ್‌ಟಿಒ ಹಾಗೂ ವಾಯು ಮಾಲಿನ್ಯ ಪ್ರಮಾಣ ತಪಾಸಣೆಗೆ ಬರುವ ವಾಹನಗಳಿಗೆ ಹಳೇ ಕೇಸ್ ಇದ್ದರೆ ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ. ಹೀಗೆ ಡಿಜಿಟಲ್ ಪದ್ದತಿ ಜಾರಿಗೆ ಬಂದರೆ ಬಿಲ್ ಕೊಡದೆ ಹಣ ಪಡೆಯುವ ಕ್ರಮ ಕೂಡ ತಪ್ಪಲಿದೆ. ಪೊಲೀಸರಿಂದ ರಸ್ತೆ ಮಧ್ಯೆ ಹಣ ಪೀಕಿಸಿಕೊಳ್ಳುವ ಕಿರಿ ಕಿರಿಯನ್ನು ಬೈಕ್ ಸವಾರರು ತಪ್ಪಿಸಿಕೊಳ್ಳಲಿದ್ದಾರೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm