ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಎಸ್ ಡಿ ಪಿ ಐ ಮುಖಂಡನ ಬಂಧನ

12-08-20 10:56 am       Headline Karnataka News Network   ಕರ್ನಾಟಕ

ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿ ಪಿ ಐ ಮುಖಂಡರೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಎಸ್ ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾ ನೇರ ಭಾಗಿಯಾಗಿದ್ದ ಎಂದು ಆರೋಪದ ಮೇರೆಗೆ ಬಂಧಿಸಲಾಗಿದೆ .

ಬೆಂಗಳೂರು, ಆಗಸ್ಟ್ 12:  ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿ ಪಿ ಐ ಮುಖಂಡರೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಾವಲ್ ಭೈರಸಂದ್ರದಲ್ಲಿ ನಡೆದ ಘರ್ಷಣೆ ಪ್ರಕರದಲ್ಲಿ  ಎಸ್ ಡಿಪಿಐ ಮುಖಂಡ ಮುಝಮ್ಮಿಲ್ ಪಾಷಾ ನೇರ ಭಾಗಿಯಾಗಿದ್ದ ಎಂದು ಆರೋಪದ ಮೇರೆಗೆ ಬಂಧಿಸಲಾಗಿದೆ .

ಮುಝಮ್ಮಿಲ್ ಈ ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಸಾಗಾಯಪುರ ವಾರ್ಡ್ ನಿಂದ ಸ್ಪರ್ಧಿಸಿ ಸೋತಿದ್ದು ನಿನ್ನೆ ನಡೆದ ಗಲಭೆ ಮತ್ತು ಅಹಿತಕರ ಘಟನೆಗಳಿಗೆ ಈತನೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಆರೋಪಿಗಳು ಅರೆಸ್ಟ್: 

ಘಟನೆ ಸಂಬಂಧ ಈಗಾಗಲೇ ಪೊಲೀಸರು 100ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದು, ಗಲಭೆ ಹಿಂದಿರುವವರ ಪತ್ತೆಗೆ ತನಿಖೆ ನಡೆಸಿದ್ದಾರೆ.

ಪುಲಕೇಶಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ತಂಗಿ ಮಗ ಅಂದ್ರೆ ಅಳಿಯ ಪೈಗಂಬರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಖಂಡಿಸಿ ಒಂದು ಸಮುದಾಯದ ಜನರು ಒಟ್ಟುಗೂಡಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಬೆಂಕಿ ಹಚ್ಚಿದ್ದಾರೆ. ಬಳಿಕ ಹಾದಿಯಲ್ಲಿದ್ದ ವಾಹನಗಳಿಗೂ ಕಲ್ಲು ತೂರಿದ್ದಲ್ಲದೇ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ.

ಸಾಲದಕ್ಕೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೂ ನುಗ್ಗಿ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯಗಲಾಗಿವೆ. ಇದರಿಂದ ಅನಿವಾರ್ಯವಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಫೈರಿಂಗ್‌ನಲ್ಲಿ ಮೂವರು ಬಲಿಯಾಗಿದ್ರೆ, ಹಲವು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.