ಬ್ರೇಕಿಂಗ್ ನ್ಯೂಸ್
13-10-26 03:49 pm HK News Staffer ಕರ್ನಾಟಕ
ಬೆಂಗಳೂರು, ಅ.13: ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಎಸ್. ರವಿ ಅವರು ನಿವೃತ್ತಿಗೆ ಕೇವಲ ಆರು ತಿಂಗಳು ಇರುವಾಗಲೇ ಸ್ವಯಂ ನಿವೃತ್ತಿ (ವಿಆರ್ಎಸ್) ಕೋರಿ ಅರ್ಜಿ ಸಲ್ಲಿಸಿದ್ದು ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಎಡಿಜಿಪಿ ಎಸ್. ರವಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ವಿಆರ್ಎಸ್ಗೆ ಅರ್ಜಿ ಸಲ್ಲಿಸಿರುವುದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ-ಐಜಿಪಿ) ಸಲೀಂ ಅವರು ದೃಢಪಡಿಸಿದ್ದಾರೆ. ಎಡಿಜಿಪಿ ಎಸ್. ರವಿ ಅವರು ಸೋಮವಾರ ಸಂಜೆ ವಿಆರ್ಎಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಡಿಜಿ-ಐಜಿಪಿ ಕಚೇರಿಯಿಂದ ಗೃಹ ಇಲಾಖೆಗೆ ಪತ್ರ ರವಾನೆಯಾಗುವ ಸಾಧ್ಯತೆಯಿದೆ.
ಎಸ್. ರವಿ ಅವರ ಸ್ವಯಂ ನಿವೃತ್ತಿ ನಿರ್ಧಾರ ಪೊಲೀಸ್ ಇಲಾಖೆ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವೈಯಕ್ತಿಕ ಕಾರಣಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದರೂ, ಹಿರಿಯ ಅಧಿಕಾರಿಗಳೊಂದಿಗಿನ ಮನಸ್ತಾಪವೇ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ರಾಜೀನಾಮೆಗೆ ಇಲ್ಲಿಯವರೆಗೆ ಅಧಿಕೃತ ಕಾರಣಗಳು ತಿಳಿದುಬಂದಿಲ್ಲ. 2027ರ ಮೇ ತಿಂಗಳಲ್ಲಿ ರವಿ ಅವರು ನಿವೃತ್ತರಾಗಬೇಕಿತ್ತು.
ಬೆಂಗಳೂರಿನ ಸಂಪಂಗಿರಾಮನಗರದ ರವಿ ಅವರು ನಗರದಲ್ಲಿ ದಕ್ಷಿಣ ವಿಭಾಗದ ಡಿಸಿಪಿಯಾಗಿ, ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ದಾವಣಗೆರೆ ವಲಯದ ಐಜಿಪಿಯಾಗಿ ಎಡಿಜಿಪಿ ಹುದ್ದೆಗೆ ಬಡ್ತಿ ಹೊಂದಿದ ಬಳಿಕ ಗೃಹ ಕಾರ್ಯದರ್ಶಿಯಾಗಿದ್ದರು. ಗುಪ್ತಚರ ದಳದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರವಿ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದರು. ಅಲ್ಲಿಂದ ಕೆಎಸ್ಆರ್ಪಿ ಎಡಿಜಿಪಿಯಾಗಿ ರವಿ ಕರ್ತವ್ಯದಲ್ಲಿದ್ದರು.
13-10-26 03:49 pm
HK News Staffer
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 02:54 pm
HK News Staffer
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm