ಗೋಕರ್ಣ ಪ್ರವಾಸ ತೆರಳಿದ್ದ ಬೆಂಗಳೂರಿನ ಮೂವರು ನೀರುಪಾಲು 

21-01-21 09:55 pm       Mangaluru Correspondent   ಕರ್ನಾಟಕ

ಕಡಲ ತೀರದಲ್ಲಿ ಈಜಲು ಇಳಿದ ಬೆಂಗಳೂರು ಮೂಲದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಗೋಕರ್ಣ, ಜ.21: ಕಡಲ ತೀರದಲ್ಲಿ ಈಜಲು ಇಳಿದ ಬೆಂಗಳೂರು ಮೂಲದ ಮೂವರು ಪ್ರವಾಸಿಗರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಮೃತರನ್ನು ಬೆಂಗಳೂರಿನ ಹೆಬ್ಬಗೋಡಿ, ತಿರುಪಾಲ್ಯದ ಸುಮಾ (21), ತಿಪ್ಪೇಶ್ ನಾಯಕ್ (20) ಮತ್ತು ರವಿ (35) ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ 16 ಜನರ ತಂಡ ಗೋಕರ್ಣಕ್ಕೆ ಪ್ರವಾಸ ಬಂದಿದ್ದು, ನಂತರ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಐವರು ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದರು. ಈ ವೇಳೆ ಲೈಫ್ ಗಾರ್ಡ್ ಸಿಬಂದಿ ಇಬ್ಬರನ್ನು ರಕ್ಷಿಸಿದ್ದು, ಮೂವರು ಮೃತಪಟ್ಟಿದ್ದಾರೆ. 

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic accident reported from Gokarna, three tourists from Bengaluru died of drowning after being washed away by high tide on Thursday evening.