ಬ್ರೇಕಿಂಗ್ ನ್ಯೂಸ್
03-03-21 01:23 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.3: ಅಶ್ಲೀಲ ಸಿಡಿ ಜಾಲದಲ್ಲಿ ಸಿಕ್ಕಿಬಿದ್ದ ಸಚಿವ ರಮೇಶ್ ಜಾರಕಿಹೊಳಿ ಕೊನೆಗೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮುಜುಗರ ತಪ್ಪಿಸಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ರಾಜಿನಾಮೆ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರವಾನೆ ಮಾಡಿದ್ದಾಗಿ ಜಾರಕಿಹೊಳಿ ತಿಳಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಮತ್ತು ರಾಜ್ಯದಲ್ಲಿ ಉಪ ಚುನಾವಣೆ ಇರುವುದರಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಸಂಪುಟ ಸಭೆಗೂ ಮುನ್ನ ರಾಜೀನಾಮೆ ನೀಡಿದ್ದು ಆರೋಪಮುಕ್ತರಾಗಿ ಬಂದ ಬಳಿಕ ಸಚಿವ ಸ್ಥಾನ ನೀಡಿ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿರುವುದ್ದಾರೆಂದು ತಿಳಿದುಬಂದಿದೆ.

ಹೈಕಮಾಂಡ್ ತೀವ್ರ ಗರಂ !
ಸಿಡಿ ವಿಚಾರದಲ್ಲಿ ಶಿಸ್ತಿನ ಪಕ್ಷ ಎಂಬ ಹೆಸರಿನ ಬಿಜೆಪಿಗೆ ಭಾರೀ ಮುಜುಗರ ಆಗಿತ್ತು. ಇದರಿಂದ ತೀವ್ರ ಸಿಡಿಮಿಡಿ ಆಗಿದ್ದ ಬಿಜೆಪಿ ಹೈಕಮಾಂಡ್, ಮೊದಲು ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಿರಿ. ಉಳಿದಿದ್ದು ಆಮೇಲೆ ನೋಡೋಣ ಎನ್ನುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ. ಇದರಿಂದ ಇಕ್ಕಟ್ಟಿಗೆ ಬಿದ್ದ ಯಡಿಯೂರಪ್ಪ, ಜಾರಕಿಹೊಳಿ ಬಳಿ ರಾಜಿನಾಮೆ ಕೇಳಿದ್ದರು.

ರಾಜಿನಾಮೆ ನೀಡಲ್ಲ ಎಂದಿದ್ದ ಜಾರಕಿಹೊಳಿ !
ಸಿಡಿ ಪ್ರಕರಣ ಹೊರಬಿದ್ದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿ ನಿಗೂಢ ಜಾಗಕ್ಕೆ ತೆರಳಿದ್ದ ಸಚಿವ ಜಾರಕಿಹೊಳಿ, ರಾತ್ರಿ ವೇಳೆ ಮಾಧ್ಯಮದ ಮುಂದೆ ಬಂದು ನಾನು ತಪ್ಪು ಮಾಡಿಲ್ಲ. ಯುವತಿ ಬಗ್ಗೆ ಗೊತ್ತಿಲ್ಲ. ರಾಜಿನಾಮೆ ನೀಡಲ್ಲ. ತನಿಖೆ ಆಗಲಿ, ಆಮೇಲೆ ನೋಡೋಣ ಎಂದಿದ್ದರು. ಆದರೆ, ಜಾರಕಿಹೊಳಿ ಮಾತು ಸಂಚಲನ ಎಬ್ಬಿಸಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಂದ ತೀವ್ರ ಟೀಕೆಗೆ ಕಾರಣವಾಗಿತ್ತು.
ಸಿಡಿಯಲ್ಲಿ ಸಿಕ್ಕಿಬಿದ್ದ ಬೆಳಗಾವಿ ಸಾಹುಕಾರ್ !! ಬಿಜೆಪಿ ಪಾಲಿಗೆ ಜಾರಕಿಹೊಳಿ ಬಿಸಿತುಪ್ಪ !!
ರಮೇಶ್ ಜಾರಕಿಹೊಳಿ ರಾಸಲೀಲೆ ಔಟ್ ; ಸಂತ್ರಸ್ತೆಯ ಹೇಳಿಕೆಯ ನಂತ್ರವಷ್ಟೇ ಎಫ್‍ಐಆರ್
ಜಾರಕಿಹೊಳಿ ಮಾನ-ಮರ್ಯಾದೆ ಇದ್ದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಿ ; ಸಿದ್ದರಾಮಯ್ಯ ಅವಾಜ್
Karnataka Water Resources minister Ramesh Jarkiholi resigns from the minister post by issuing a letter to CM BSY. The minister was in controversy after a CD allegedly showing him in a compromising position with a woman emerged on Tuesday.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm