6 ಮಂದಿ ಸಚಿವರಿಗೆ ರಿಲೀಫ್ ; ಮಾನಹಾನಿ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕೋರ್ಟ್ ಆರ್ಡರ್

06-03-21 10:15 pm       Headline Karnataka News Network   ಕರ್ನಾಟಕ

ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಾಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡುವಂತೆ ಕೋರಿ ಆರು ಮಂದಿ ಸಚಿವರು ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪುರಸ್ಕರಿಸಿದೆ.

ಬೆಂಗಳೂರು, ಮಾರ್ಚ್ 6: ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಾಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡುವಂತೆ ಕೋರಿ ಆರು ಮಂದಿ ಸಚಿವರು ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪುರಸ್ಕರಿಸಿದೆ. ಇದರಿಂದ ಸಚಿವರಿಗೆ ದೊಡ್ಡ ನಿರಾಳತೆ ದೊರಕಿದೆ.

ಮಾಧ್ಯಮಗಳಲ್ಲಿ ಈ ಆರು ಮಂದಿ ಸಚಿವರ ವಿರುದ್ಧ ಮಾನಹಾನಿ ವಿಚಾರಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಮಾರ್ಚ್ 30ರವರೆಗೂ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಮಾರ್ಚ್ 30ರಂದು ಈ ಅರ್ಜಿಗಳ ವಿಚಾರಣೆ ಮತ್ತೆ ನಡೆಯಲಿದೆ.

ಯಾವುದೇ ಅವಹೇಳನಕಾರಿ ವರದಿ ಪ್ರಸಾರ ಮಾಡದಂತೆ ಈ ತಿಂಗಳ ಅಂತ್ಯದವರೆಗೂ ತಡೆ ನೀಡಿ ನ್ಯಾಯಾಧೀಶ ವಿಜಯಕುಮಾರ್ ನೇತೃತ್ವದ ಪೀಠ ಆದೇಶ ನೀಡಿದ್ದು, 68 ಮಾಧ್ಯಮ ಸಂಸ್ಥೆಗಳಿಗೆ ನೋಟೀಸ್ ಜಾರಿಮಾಡಿದೆ.

ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್‌.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಡಾ. ಕೆ.ಸಿ. ನಾರಾಯಣಗೌಡ ಹಾಗೂ ಭೈರತಿ ಬಸವರಾಜ್ ಅವರು ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡದಂತೆ ಆದೇಶ ನೀಡುವಂತೆ ಕೋರಿದ್ದರು. ಇದು ತೀವ್ರ ಟೀಕೆಗೆ ಒಳಗಾಗಿತ್ತು. ಆದರೆ ನ್ಯಾಯಾಲಯದಲ್ಲಿ ಸಚಿವರಿಗೆ ಮೊದಲ ಗೆಲುವು ದೊರಕಿದೆ.

Six Ministers - all recent defectors from Congress and JD(S) to BJP - have sought injunction orders from the city court against publication of any defamatory content against them.