ಬ್ರೇಕಿಂಗ್ ನ್ಯೂಸ್
07-03-21 03:02 pm Headline Karnataka News Network ಕರ್ನಾಟಕ
ದಾವಣಗೆರೆ,ಮಾ.7: ಡಿಜಿಟಲ್ ಯುಗ ಹಾಗೂ ಡಿಮಾನಿಟೀಷನ್ ಕಾಲದಲ್ಲಿ ಹೊಸಾ ಹೊಸಾ ನೋಟುಗಳು ಬರ್ತಾ ಇದ್ದು, ಹಳೇಯ ನೋಟುಗಳು ಕಣ್ಮರೆಯಾಗುತ್ತಿದೆ. ಇಂದಿನ ಕಾಲದ ಮಕ್ಕಳಿಗೆ ಹಳೆಯ ನೋಟು, ನಾಣ್ಯಗಳ ಪರಿಚಯವೇ ಇಲ್ಲದಂತಾಗಿದೆ. ಅಂತಹ ಮಕ್ಕಳಿಗೆ ರಾಜರ ಕಾಲದ ನ್ಯಾಣ್ಯಗಳಿಂದ ಹಿಡಿದು 150 ಕ್ಕೂ ಹೆಚ್ಚು ದೇಶಗಳ ನೋಟುಗಳನ್ನ ಪ್ರದರ್ಶನದ ಮೂಲಕ ಪರಿಚಯಿಸಲಾಯಿತು.
ನಾಣ್ಯ ಹಾಗೂ ನೋಟುಗಳ ಪ್ರದರ್ಶನ
ದಾವಣಗೆರೆಯ ಎಂಸಿಸಿಬಿ ಬ್ಲಾಕ್ನಲ್ಲಿರುವ ಸಮುದಾಯ ಭವನದಲ್ಲಿ, ರೋಟರಿ ಕ್ಲಬ್ ವತಿಯಿಂದ ಹಳೆಯ ನೋಟು ಹಾಗೂ ನಾಣ್ಯಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಈರಪ್ಪ ಜಿ ಪರಮಶೆಟ್ಟಿ ಎನ್ನುವರು ಸಂಗ್ರಹಿಸಿದ್ದ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಹಮ್ಮಿಕೊಂಡಿದ್ದು, ಇದರಲ್ಲಿ ನೂರೈವತ್ತಕ್ಕೂ ಹೆಚ್ಚು ದೇಶಗಳ ನೋಟುಗಳನ್ನು ಹಾಗೂ ಚಂದ್ರಗುಪ್ತ ಮೌರ್ಯ, ಹೊಯ್ಸಳ, ಕದಂಬ, ಪೇಶ್ವೆಗಳ ಕಾಲದ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
ಚಿಕ್ಕ ವಯಸ್ಸಿನಿಂದ ಈ ಹವ್ಯಾಸ
ಅಲ್ಲದೆ 92 ಮಾದರಿಯ ಒಂದು ರೂಪಾಯಿ ನೋಟುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಫ್ಯಾನ್ಸಿ ನಂಬರ್ಗಳ ನೋಟುಗಳು ಸೇರಿದಂತೆ ಮ್ಯಾಜಿಕ್ ನಂಬರ್ಗಳನ್ನು ಕೂಡ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದ್ದರು. ಇನ್ನು ಈ ನೋಟು ಹಾಗೂ ನಾಣ್ಯಗಳ ಪ್ರದರ್ಶನ ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು, ಚಿಕ್ಕ ವಯಸ್ಸಿನಿಂದ ಈ ಹವ್ಯಾಸ ಬಂದಿದ್ದು ಎನ್ನುತ್ತಾರೆ ಸಂಗ್ರಹಕಾರರು.
ವಿಧ್ಯಾರ್ಥಿಗಳ ಜೊತೆ ಸಾರ್ವಜನಿಕರು ಆಗಮಿಸಿ ಜ್ಞಾನವನ್ನು ಹೆಚ್ವಿಸಿಕೊಳ್ಳುತ್ತಿದ್ದಾರೆ
ಇನ್ನು ಈ ಸೂರಿನಡಿ ಮಕ್ಕಳಿಗೆ ವಿಶೇಷವಾಗಿ ನೋಟು ನಾಣ್ಯಗಳ ಬಗ್ಗೆ ಅಧ್ಯಾಯನ ನಡೆಸಲು ಈರಣ್ಣರವರಿಂದ ಮಾರ್ಗದರ್ಶನ ನೀಡುತ್ತಿದ್ದು, ಶಾಲಾ ಹಾಗೂ ಕಾಲೇಜು ವಿಧ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜ್ಞಾನವನ್ನು ಹೆಚ್ವಿಸಿಕೊಳ್ಳಲು ಸಹಕಾರಿಯಾಗಿತ್ತು. ಇನ್ನು ರಿಸರ್ವ ಬ್ಯಾಂಕ್ನ ಗವರ್ನರ್ಗಳ ಅವಧಿಯಲ್ಲಿ ಯಾವ ಯಾವ ನೋಟುಗಳ ಮುದ್ರಣವಾಯ್ತು ಎನ್ನುವುದರ ಬಗ್ಗೆ ಕೂಡ ಮಾಹಿತಿ ನೀಡಿ ನೋಟುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇದರಿಂದ ವಿಧ್ಯಾರ್ಥಿಗಳು ಪ್ರದರ್ಶನ ಮೇಳದಲ್ಲಿ ಭಾಗವಹಿಸಿ ನೋಟುಗಳ ಬಗ್ಗೆ ಮಾಹಿತಿ ತಿಳಿದು ಜ್ಞಾನವನ್ನು ಹೆಚ್ವಿಸಿಕೊಂಡರು.
Old currency expo held in Davanagere, Karnataka. Hundreds flocked into the expo to see various currencies.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm