ಬ್ರೇಕಿಂಗ್ ನ್ಯೂಸ್
10-03-21 02:15 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.10: ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸಿಡಿ ಮಾಡಿದ್ದೇ ಕಾಂಗ್ರೆಸಿನವರು. ಇಂಥ ಮನೆಹಾಳು, ತೇಜೋವಧೆ ಕೆಲಸ ಮಾಡೋದು ಕಾಂಗ್ರೆಸಿನವರೇ. ನಾನು 20 ವರ್ಷ ಕಾಂಗ್ರೆಸಿನಲ್ಲೇ ಇದ್ದು, ಅಲ್ಲಿ ಇರೋರ ಬಗ್ಗೆ ಚೆನ್ನಾಗೇ ಗೊತ್ತು ಎಂದು ಸಚಿವ ಎಸ್.ಟಿ. ಸೋಮಶೇಖರ್ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಸಿಡಿ ಪ್ರಕರಣದಲ್ಲಿ ತಮ್ಮ ಆಪ್ತ ರಮೇಶ್ ಜಾರಕಿಹೊಳಿ ಪರವಾಗಿ ಮಾತನಾಡಿದ್ದಾರೆ. ನೂರು ಶೇಕಡಾ ಹೇಳ್ತೀವಿ, ಇದು ಸಿಡಿ ಮಾಡಿದ್ದೇ ಕಾಂಗ್ರೆಸ್. ಇನ್ಯಾರು ಸಿಡಿ ಮಾಡುತ್ತಾರೆ. ಇದರ ಹಿಂದೆ ಕಾಂಗ್ರೆಸಿನದ್ದೇ ಕೈವಾಡ ಇದೆ. ಅದಕ್ಕಾಗಿ ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಆಗ್ರಹಿಸುತ್ತೇವೆ. ಸಿಬಿಐ ತನಿಖೆ ನಡೆದರೆ, ಇದರ ಹಿಂದೆ ಯಾರಿದ್ದಾರೆ, ಯಾರೆಲ್ಲಾ ಕೈಯಾಡಿಸಿದ್ದಾರೆ, ಎಷ್ಟೆಲ್ಲಾ ಖರ್ಚಾಗಿದೆ, ಯಾರ್ಯಾರಿಗೆ ಸಂದಾಯ ಆಗಿದೆ ಇತ್ಯಾದಿ ವಿಷಯಗಳು ಹೊರಬರುತ್ತವೆ ಎಂದು ಹೇಳಿದರು.

ನಾವು ಕೂಡ ಕೋರ್ಟಿಗೆ ಹೋಗಿದ್ದು ಇದೇ ಕಾರಣಕ್ಕೆ. ಕಾಂಗ್ರೆಸಿನವರು ತೇಜೋವಧೆ ಮಾಡುತ್ತಾರೆಂದು ಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದೇವೆ. ನೈತಿಕತೆಯ ಪ್ರಶ್ನೆ ಬೇಡ. ಕಾಂಗ್ರೆಸಿನವರ ತಟ್ಟೆಯಲ್ಲಿ ಹೆಗ್ಗಣ ಇದೆ, ನಮ್ಮ ತಟ್ಟೆಯಲ್ಲೇನು ನೋಡೋದು ಅವ್ರು. ನಾವು ಆರು ಜನ ಕೋರ್ಟಲ್ಲಿ ಅರ್ಜಿ ಹಾಕಿದ್ದೆವು. ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದ ಸೋಮಶೇಖರ್, ಉಳಿದವರು ಕೂಡ ಮರುದಿನ ಅರ್ಜಿ ಹಾಕುವರಿದ್ದರು. ಮಾಧ್ಯಮದಲ್ಲಿ ವಿಷ್ಯ ಬಂತೆಂದು ಕುಳಿತಿದ್ದಾರೆ. ನಮ್ಮನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು, ಡ್ಯಾಮೇಜ್ ಮಾಡಬೇಕೆಂದು ಸಂಚು ನಡೆಸಿದ್ದಾರೆ. ಸಿಡಿ ಬರುತ್ತೆ ಅಂತ ಕೋರ್ಟಿಗೆ ಹೋಗಿದ್ದಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯ ನಮ್ಮ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿ ಸರಕಾರ ಬಿದ್ದಿದ್ದೇ ಈ ನೈತಿಕತೆ ವಿಚಾರದಲ್ಲಿ. ನಾವು ಈ ಬಗ್ಗೆ ಸದನದಲ್ಲಿ ಉತ್ತರ ಕೊಡುತ್ತೇವೆ ಎಂದು ಹೇಳಿದರು.
Karnataka sex cd scandal Top congress leader has framed Ramesh Jarkiholi says minister S T Somashekhar in Bangalore.
11-12-25 08:03 pm
HK News Desk
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 04:21 pm
Mangalore Correspondent
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am