ಬ್ರೇಕಿಂಗ್ ನ್ಯೂಸ್
18-03-21 01:13 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.18: ಸಿಡಿ ಗ್ಯಾಂಗ್ ಹಿಂದಿನ ಕತರ್ನಾಕ್ ಹಿಸ್ಟರಿ ಒಂದೊಂದಾಗಿಯೇ ಹೊರಬೀಳುತ್ತಿದೆ. ಎಸ್ಐಟಿ ತಂಡ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಇದೇ ವೇಳೆ ಆರೋಪಿಗಳ ಮನೆಯಲ್ಲಿ ಭಾರೀ ಪ್ರಮಾಣದ ನಗದು, ಸ್ವರ್ಣಾಭರಣಗಳನ್ನು ಖರೀದಿಸಿದ ರಸೀದಿಗಳು, ಇತರ ಮಹತ್ವದ ಮಾಹಿತಿಗಳು ಪತ್ತೆಯಾಗಿವೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಜೊತೆ ಕಾಣಿಸಿಕೊಂಡಿದ್ದ ಯುವತಿ ಮನೆಯಲ್ಲಿ 9.2 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದರೆ, ಇದರ ರೂವಾರಿ ಎನ್ನಲಾದ ನರೇಶ್ ಗೌಡನ ಮನೆಯಲ್ಲಿ 19.5 ಲಕ್ಷ ಮೌ ಲ್ಯದ ಚಿನ್ನಾಭರಣ ಖರೀದಿಸಿರುವ ಬಗ್ಗೆ ರಸೀದಿಗಳು ಪತ್ತೆಯಾಗಿವೆ. ಯುವತಿಯ ಬಾಡಿಗೆ ಮನೆ ಆರ್ ಟಿ ನಗರದಲ್ಲಿದ್ದು, ನಿನ್ನೆ ರಾತ್ರಿ ಯುವತಿ ಮನೆಗೆ ಎಸ್ ಐಟಿ ಅಧಿಕಾರಿಗಳು ತೆರಳಿ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ, ಲಕ್ಷಾಂತರ ರೂ. ನಗದು ಹಣ, ಖಾಲಿ ಬಿಯರ್ ಬಾಟಲಿಗಳು, ವೈನ್, ವಿಸ್ಕಿ ಬಾಟಲಿಗಳು, ಸಿಗರೇಟ್ ಪ್ಯಾಕೆಟ್ ಗಳು ಪತ್ತೆಯಾಗಿವೆ.
ಆರೋಪಿ ನರೇಶ್ ಗೌಡನ ಮನೆಯಲ್ಲಿ ಚಿನ್ನಾಭರಣ ಖರೀದಿಸಿರುವ ಬಗ್ಗೆ ರಸೀದಿ ಸಿಕ್ಕಿದೆ. ಆದರೆ, ಚಿನ್ನವನ್ನು ಎಲ್ಲಿಟ್ಟಿದ್ದಾನೆ ಅನ್ನೋದು ಗೊತ್ತಾಗಿಲ್ಲ. ಇದಲ್ಲದೆ, ಪೆನ್ ಡ್ರೈವ್ ನಲ್ಲಿ ಬಹಳಷ್ಟು ಮಾಹಿತಿಗಳು, ವಿಡಿಯೋಗಳು, ಇನ್ನಿತರ ಮಹತ್ವದ ಕಡತಗಳು ಪತ್ತೆಯಾಗಿವೆ. ರಮೇಶ್ ಜಾರಕಿಹೊಳಿ ಮತ್ತಿತರ ರಾಜಕಾರಣಿಗಳು ಎಲ್ಲಿ ತಂಗುತ್ತಾರೆ, ಎಲ್ಲಿ ಪ್ರವಾಸ ಹೋಗುತ್ತಾರೆ ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಿದ್ದು ಅದರ ವಿವರಗಳು ದಾಳಿ ವೇಳೆ ಅಧಿಕಾರಿಗಳಿಗೆ ಸಿಕ್ಕಿವೆ.
ಇದೇ ವೇಳೆ, ಆರೋಪಿಗಳ ಜೊತೆಗೆ ನಿಕಟ ಒಡನಾಟ ಇರಿಸಿಕೊಂಡಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಲ್ಲಿ ಪ್ರಮುಖರು ಮಾಜಿ ಪತ್ರಕರ್ತರಾಗಿರುವುದರಿಂದ ಜೊತೆಗೆ ಗುರುತಿಸಿಕೊಂಡಿದ್ದ ಬೆಂಗಳೂರಿನ ಪತ್ರಕರ್ತರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಆರೋಪಿಗಳ ವಿಚಾರಣೆ ವೇಳೆ ಒಬ್ಬರು ಶಾಸಕರು ಮತ್ತು ಉತ್ತರ ಕರ್ನಾಟಕ ಮೂಲದ ಮಾಜಿ ಸಚಿವರನ್ನು ಇದೇ ರೀತಿ ದಂಧೆಗೊಳಪಡಿಸಿ, ವಿಡಿಯೋ ಮುಂದಿಟ್ಟು ಹಣ ಪಡೆದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಿಡಿ ಗ್ಯಾಂಗ್ ಬೆಂಗಳೂರು ಕೇಂದ್ರೀಕರಿಸಿ, ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರಾ ಎನ್ನೋದ್ರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸಿಡಿ ಗ್ಯಾಂಗ್ ಹಿಂದಿದ್ಯಾ ಹನಿಟ್ರ್ಯಾಪ್ ದಾಳ ? ಮಾಜಿ ಸಚಿವರು, ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿರುವ ತಂಡ !!
Police have found lakhs of amount and Pen drive in the residence of the Gang that was behind the Honey Trap of Ramesh Jarkiholi.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 12:24 pm
Mangalore Correspondent
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm