ಬ್ರೇಕಿಂಗ್ ನ್ಯೂಸ್
21-03-21 05:48 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ 21: ತಾನು ಏನೂ ಸಾಧನೆ ಮಾಡಿಲ್ಲ, ತನ್ನ ಬಗ್ಗೆ ಮನೆಯವರು ಏನೂ ಮಾತನಾಡುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೀವನ್ ಅಂಬಾಟೆ ಆತ್ಮಹತ್ಯೆಗೆ ಶರಣಾದವರು. ಏನಾದರೂ ಸಾಧನೆ ಮಾಡಬೇಕೆಂಬ ತುಡಿತದೊಂದಿಗೆ ಬೀದರ್ನಿಂದ ಬೆಂಗಳೂರಿಗೆ ಬಂದಿದ್ದ ಜೀವನ್, ಪ್ರತಿಷ್ಠಿತ ಅಮೆಜಾನ್ ಕಂಪೆನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚಿನ ದಿನಗಳಲ್ಲಿ ತಾನು ಏನೂ ಸಾಧನೆ ಮಾಡುತ್ತಿಲ್ಲ ಎಂದು ಕೊರಗಿ ಖಿನ್ನತೆಗೆ ಒಳಗಾಗುತ್ತಿದ್ದ. ಮನೆಯವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಗೊಣಗಾಡುತ್ತಿದ್ದ.
ಹೀಗಾಗಿ ತಾನು ಬದುಕಿರುವುದು ವೇಸ್ಟ್ ಎಂದು ನಿರ್ಧರಿಸಿದ್ದ.ಕೊನೆಗೆ ರೂಮ್ನ ಗೆಳೆಯರು ಊರಿಗೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಬಗ್ಗೆ ವಿಡಿಯೋಗಳನ್ನು ನೋಡಿ ಅದರಂತೆ ಪ್ರಯೋಗ ಮಾಡಿಕೊಂಡು ಈತ ಸಾವನ್ನಪ್ಪಿದ್ದಾನೆ. ಮೂರು ದಿನ ಮನೆಯಲ್ಲೇ ಶವವಿತ್ತು.
ಸತ್ತ ನಂತರ ಯಾರಾದರೂ ರೂಂ ಒಳಗೆ ಬಂದರೆ ಅನಾಹುತವಾಗಬಹುದು ಎಂದು ಅರಿತು ಯಾವ ರೀತಿ ಮನೆ ಒಳಗೆ ಬರಬೇಕು ಎಂದು ಸಾಯುವ ಮುನ್ನ ಎಂದು ನಕ್ಷೆ ಮಾಡಿ ಮನೆ ಕಿಟಕಿ ಬಾಗಿಲಿಗೆ ಅಂಟಿಸಿದ್ದ. ನಕ್ಷೆಯಲ್ಲಿ ಡೋರ್ ತೆಗೆದ ಕೂಡಲೇ ಕಿಟಕಿ ಓಪನ್ ಮಾಡಿ. ಯಾರೂ ಲೈಟ್ಸ್ ಆನ್‌ಮಾಡಬೇಡಿ ಎಂದು ನಿರ್ದೇಶನ ನೀಡಿದ್ದ.
ಮೂರು ದಿನದ ನಂತರ ಬಂದಿದ್ದ ಸ್ನೇಹಿತರು ಜೀವನ್ ಮೃತರಾಗಿರುವುದು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಮಹದೇವಪುರ ಪೊಲೀಸರು ಧಾವಿಸಿದ್ದಾರೆ. ಮೊದಲು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಜೀವನ್ ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಸಾಧನೆ ಇಲ್ಲ ಮನೆಯವರು ಮಾತಾಡ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Youth commits suicide because of failure in life in Bengaluru.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm